ಇಮ್ರಾನ್ ಖಾನ್ ಆಪ್ತನಿಗೆ ಜೈಲಿನಿಂದ ಕೊನೆಗೂ ಮುಕ್ತಿ!
ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ವಿರುದ್ಧ ಪಾಕ್ ಮಿಲಿಟರಿ ತೋಡಿದ್ದ ಹಳ್ಳ ಮಿಸ್ ಆಗಿದೆ. ಅರೆಸ್ಟ್ ಮಾಡಿ ಒಳಗೆ ಹಾಕಲು ಆಗಲೇ ಇಲ್ಲ, ಅನಿವಾರ್ಯ ಸ್ಥಿತಿಯಲ್ಲಿ ಇಮ್ರಾನ್ ಖಾನ್ ರಿಲೀಸ್ ಆಗಿದ್ದೂ ಆಯ್ತು. ಈಗ ನೋಡಿದ್ರೆ ಇಮ್ರಾನ್ ಖಾನ್ ಆಪ್ತರು ಕೂಡ ಜೈಲಿಂದ ರಿಲೀಸ್ ಆಗಿ ಬರುತ್ತಿರುವುದು ಮತ್ತೊಮ್ಮೆ ಹಿಂಸಾಚಾರದ ಮುನ್ಸೂಚನೆ ನೀಡಿದೆ!
ಹೌದು ಪಾಕಿಸ್ತಾನ 1 ತಿಂಗಳ ಹಿಂದೆ ಧಗಧಗ ಹೊತ್ತಿ ಉರಿದಿತ್ತು. ಇಮ್ರಾನ್ ಖಾನ್ ಬಂಧನದ ನಂತರ ಇಡೀ ಪಾಕಿಸ್ತಾನಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಇದೇ ಕಾರಣವನ್ನ ನೆಪವಾಗಿಸಿ ಖಾನ್ ಆಪ್ತರನ್ನ ಒಬ್ಬೊಬ್ಬರಾಗಿ ಒಳಗೆ ಹಾಕಲಾಗಿತ್ತು. ಅದೇ ರೀತಿ ಪಾಕಿಸ್ತಾನದ ಮಾಜಿ ಸಚಿವ ಷಾ ಮೊಹಮ್ಮದ್ ಖುರೇಷಿ ಕೂಡ ಅಂದರ್ ಆಗಿದ್ದರು. ಆದರೆ ಇದೀಗ ರಾವಲ್ಪಿಂಡಿ ಜೈಲಿಂದ ಷಾ ರಿಲೀಸ್ ಆಗಿದ್ದು, ಇಮ್ರಾನ್ ಖಾನ್ ಜೊತೆಗೆ ಸಭೆ ನಡೆಸೋಕೆ ಯತ್ನಿಸುತ್ತಿದ್ದಾರೆ. ಹೀಗಾಗಿ ಪಾಕ್ ಸೇನೆ ಶಾಕ್ ಮೇಲೆ ಶಾಕ್ ಸಿಗುತ್ತಿದೆ (Imran Khan Arrest).

ಜಸ್ಟ್ ಮಿಸ್ ಆದ ಇಮ್ರಾನ್ ಆಪ್ತ!
ಇಮ್ರಾನ್ ವಿರುದ್ಧ ಪಾಕ್ ಸೇನೆ & ಸರ್ಕಾರ ತಿರುಗಿಬಿದ್ದಿದೆ. ಹೀಗಾಗಿ ಹೇಗಾದರೂ ಮಾಡಿ ಇಮ್ರಾನ್ ಖಾನ್‌ಗೆ ಮತ್ತೆ ಜೈಲು ತೋರಿಸಬೇಕು ಅನ್ನೋ ಪ್ರಯತ್ನ ನಡೆಯುತ್ತಿದೆ. ಆದರೆ ಜಾಮೀನು ಪಡೆದು ಸೇಫ್ ಆಗಿರುವ ಇಮ್ರಾನ್ ಖಾನ್ ಮುಟ್ಟಲು ಆಗುತ್ತಿಲ್ಲ. ಈ ಕಾರಣಕ್ಕೆ ಖಾನ್ ಬೆಂಬಲಿಗರನ್ನೆಲ್ಲಾ ಒಬ್ಬೊಬ್ಬರನ್ನಾಗಿ ಜೈಲಿಗೆ ಹಾಕಲಾಗುತ್ತಿದೆ. ಇದೀಗ ಇಮ್ರಾನ್ ಖಾನ್ ಪಕ್ಷದ ಪ್ರಮುಖ ನಾಯಕ ಮೊಹಮ್ಮದ್ ಖುರೇಷಿ ಕೂಡ ರಿಲೀಸ್ ಆಗಿದ್ದಾರೆ. ಈ ಮೂಲಕ ಪಾಕ್ ಸರ್ಕಾರ ಮತ್ತು ಸೇನೆ ಸೇರಿ ರೂಪಿಸಿದ್ದ ಪ್ಲ್ಯಾನ್ ಫ್ಲಾಪ್ ಆದಂತಾಗಿದೆ (Imran Khan).
ಇಮ್ರಾನ್ ಖಾನ್ ವಿರುದ್ಧ ಉಗ್ರಪಟ್ಟ!
ಮೇ 9ರಂದು ಇಮ್ರಾನ್ ಅರೆಸ್ಟ್ ಆದ ನಂತರ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ಆಗಿತ್ತು. ಆ ವೇಳೆ ಪಾಕಿಸ್ತಾನ ಸೇನೆಗೆ ಸೇರಿದ ಕಂಪ್ಯೂಟರ್, ಡಾಟಾ ಸೇರಿದಂತೆ ಸೇನಾ ವಸ್ತುಗಳನ್ನ ನಾಶ ಮಾಡಿದ ಆರೋಪದ ಹಿನ್ನೆಲೆ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ದಾರೆ. ಹೀಗಾಗಿ ಗಲಾಟೆ ಮಾಡಿದವರ ಮೇಲೆ ಉಗ್ರರ ಪಟ್ಟ ಕಟ್ಟಲಾಗಿದೆ. ಹೀಗಾಗಿಯೇ ಇಮ್ರಾನ್ ಖಾನ್ ವಿರುದ್ಧವೂ ಭಯೋತ್ಪಾದನೆ ಆರೋಪ ಹೊರಿಸಲು ಪ್ರಯತ್ನಿಸಲಾಗಿತ್ತು. ಇದೇ ಆರೋಪದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಪಕ್ಷದ ಅಧ್ಯಕ್ಷ ಕೂಡ ಅಂದರ್ ಆಗಿದ್ದನ್ನೂ ಪಾಕಿಸ್ತಾನ ಜನರು ಕಣ್ತುಂಬಿಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಮತ್ತೆ ಹಿಂಸಾಚಾರ?
ಅಷ್ಟಕ್ಕೂ ಇಮ್ರಾನ್ ಖಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಿ ಒಳಗೆ ಹಾಕಿದ್ರೆ ಹತ್ತಾರು ವರ್ಷ ಲಾಕ್ ಮಾಡಬಹುದು. ಪಾಕ್ ಸೇನೆ, ISI ಬಗ್ಗೆ ಮಾತನಾಡಿದ ಖಾನ್‌ಗೆ (Pakistan) ಪಾಠ ಕಲಿಸಬಹುದು ಎಂಬ ಕುತಂತ್ರದಿಂದ, ಹಲವು ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ಇದೀಗ ಉಳಿದಿರುವುದು ಇಮ್ರಾನ್ ಖಾನ್ ಬೆಂಬಲಿಗರು ಮಾತ್ರ. ಆದರೆ ಅವರು ಕೂಡ ಬೇಲ್ ಪಡೆದು ಜೈಲಿನಿಂದ ಹೊರಗೆ ಬರುತ್ತಿದ್ದಾರೆ. ಹೀಗಾಗಿ ಮತ್ತೊಂದು ಭೀಕರ ಪ್ರತಿಭಟನೆ ಹಾಗೂ ಹಿಂಸೆಗೆ ಪಾಕಿಸ್ತಾನ ಸಾಕ್ಷಿ ಆಗೋದು ಬಹುತೇಕ ಪಕ್ಕಾ ಆಗುತ್ತಿದೆ.

ಒಟ್ನಲ್ಲಿ ಪಾಕಿಸ್ತಾನದಲ್ಲಿ ಕಾನೂನಿಗೆ ಬೆಲೆಯೇ ಇಲ್ಲವಾಗಿದೆ. ಪಾಕ್ ನೆಲದಲ್ಲಿ ಅರಾಜಕತೆ ಎದ್ದು ಕುಣಿಯುತ್ತಿದೆ. ಇಮ್ರಾನ್ ಖಾನ್ ಆಪ್ತ & ಪಾಕಿಸ್ತಾನ್-ತೆಹೀಕ್ ಇ ಇನ್ಸಾಫ್ ಪಕ್ಷದ ಅಧ್ಯಕ್ಷನಾಗಿದ್ದ ಚೌಧರಿ ಪರ್ವೇಜ್ ಇಲಾಹಿರನ್ನ ಪಾಕ್ ಪೊಲೀಸರು ಎಳೆದೊಯ್ದ ನಂತರ, ಇದೇ ರೀತಿಯಾಗಿ ಖಾನ್ ಪರವಾಗಿದ್ದ ಹಲವರನ್ನ ಕಂಬಿ ಹಿಂದೆ ತಳ್ಳಲಾಗಿತ್ತು. ಈಗ ನೋಡಿದ್ರೆ ಒಬ್ಬೊಬ್ಬರೇ ಹೊರ ಬರ್ತಿದ್ದಾರೆ. ಇದು ಸಹಜವಾಗಿ ಪಾಕ್ ಸೇನೆಗೆ, ಐಎಸ್‌ಐಗೆ ತಳಮಳ ಸೃಷ್ಟಿ ಮಾಡಿದೆ. ಹೀಗಾಗಿ ಪಾಕ್ ಸೇನೆ ಮುಂದೆ ಯಾವ ಐಡಿಯಾ ಹುಡುಕುತ್ತೋ ಕಾದು ನೋಡಬೇಕು.












Click it and Unblock the Notifications