ಭಾರತದೊಂದಿಗೆ ಮಾತುಕತೆಯ ಕಾಲ ಮುಗಿಯಿತು: ಇಮ್ರಾನ್ ಖಾನ್

ಇಸ್ಲಾಮಾಬಾದ್, ಆಗಸ್ಟ್ 23: ಪಾಕಿಸ್ತಾನ ಇನ್ನೆಂದಿಗೂ ಭಾರತೊಂದಿಗೆ ಮಾತುಕತೆಗೆ ಮುಂದಾಗಿವ ಕೆಲಸ ಮಾಡುವುದಿಲ್ಲ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾಗಿ 'ನ್ಯೂಯಾರ್ಕ್ ಟೈಮ್ಸ್' ವರದಿ ಮಾಡಿದೆ.

"ಭಾರತದ ಬಳಿ ಅಣ್ವಸ್ತ್ರವಿದೆ. ಅದನ್ನು ಪ್ರಯೋಗಿಸಿದರೆ ಉಭಯ ದೇಶಗಳಿಗೂ ಸಂಕಷ್ಟವಾಗುತ್ತದೆ. ಆದ್ದರಿಂದ ನಾವು ಹಲವು ಭಾರಿ ಭಾರತದೊಂದಿಗೆ ಮಾತುಕತೆ ನಡೆಸಿ, ಶಾಂತಿಯಿಂದಲೇ ಸಮಸ್ಯೆ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದ್ದೇವೆ. ಆದರೆ ಭಾರತ ಅದಕ್ಕೆ ಬೆಲೆ ಕೊಡಲಿಲ್ಲ. ಆದ್ದರಿಂದ ಮಾತುಕತೆಯ ಕಾಲವೆಲ್ಲ ಮುಗಿಯಿತು. ನಾವು ಇನ್ನು ಮುಂದೆ ಭಾರತದೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ಮಾಡುವುದಿಲ್ಲ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

Recommended Video

      ಬಾಂಬ್ ಬೆದರಿಕೆ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ |Javed Miandad | Oneindia Kannada

      "ಭಾರತದೊಂದಿಗೆ ನಾವು ಮಾತುಕತೆ ನಡೆಸಲು ಮುಂದಾದರೆ ಅದು(ಭಾರತ) ಅದನ್ನು ಓಲೈಕೆ ಎಂದುಕೊಳ್ಳುತ್ತದೆ. ಓಲೈಕೆಯ ಅಗತ್ಯ ನಮಗಿಲ್ಲ" ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

      Imran Khan says Pakistan will no longer seek dialogue with India

      ಆದರೆ ಇಮ್ರಾನ್ ಖಾನ್ ಹೇಳಿಕೆ ಕುರಿತಂತೆ 'ನ್ಯೂಯಾರ್ಕ್ ಟೈಮ್ಸ್' ಮಾಡಿರುವ ವರದಿಯನ್ನು ಖಂಡಿಸಿರುವ ಅಮೆರಿಕಕ್ಕೆ ಭಾರತೀಯ ರಾಯಭಾರಿಯಾಗಿರುವ ಹರ್ಷ ವರ್ಧನ್ ಶೃಂಗ್ಲಾ, ನ್ಯೂಯಾರ್ಕ್ ಟೈಮ್ಸ್ ಕಚೇರಿಗೇ ತೆರಳಿ, ಇಮ್ರಾನ್ ಖಾನ್ ಹೇಳಿಕೆಗೆ ಭಾರತದ ಪ್ರತಿಕ್ರಿಯೆ ನೀಡಿದರು.

      "ನಾವು ಪ್ರತಿಬಾರಿ ಶಾಂತಿಯ ಮಅತನಾಡುವಾಗಲೂ, ಒಂದಲ್ಲ ಒಂದು ಅಹಿತಕರ, ದುರಂತದ ಘಟನೆಯನ್ನು ಪಾಕಿಸ್ತಾನ ನಡೆಸಿದೆ. ಅದರ ಅನುಭವ ನಮಗಾಗಿದೆ. ಪಾಕಿಸ್ತಾನ ಉಗ್ರರಿಗೆ ಆಶ್ರಯ ನೀಡುತ್ತಿದೆ. ಅದನ್ನು ಒಪ್ಪಿಕೊಳ್ಳಬೇಕು. ಮತ್ತು ಉಗ್ರವಾದವನ್ನು ಹತ್ತಿಕ್ಕುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು" ಎಂಬುದು ನಮ್ಮ ಬೇಡಿಕೆ. ನಾವು ಈ ಮೊದಲೇ ಹೇಳಿದ್ದೇವೆ, ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೇ ನಡೆಯಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ಹತ್ತಿಕ್ಕಿ, ನಂತರ ಮಾತುಕತೆಗೆ ಬನ್ನಿ ಎಂಬುದು ನಮ್ಮ ವಾದ. ಈಗಲೂ ನಾವು ಈ ಮಾತಿಗೆ ಬದ್ಧವಾಗಿದ್ದೇವೆ" ಎಂದು ಹರ್ಷ ವರ್ಧನ್ ಶೃಂಗ್ಲಾ ಹೇಳಿದರು.

      "ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ಭಾರತ ತೆಗೆದುಕೊಂದ ನಿರ್ಧಾರದ ಬಗ್ಗೆ ಈಗ ಪಾಕಿಸ್ತಾನ ತಲೆಕೆಡಿಸಿಕೊಳ್ಳುತ್ತಿದೆ. ಕಾಶ್ಮೀರದ ಶಾಂತಿ ಕದಡಲಾಗುತ್ತಿದೆ ಎಂದಿದೆ. ಆದರೆ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಇದುವರೆಗೂ ಕಾಶ್ಮೀರದಲ್ಲಿ ಅಂಥ ಅಹಿತಕರ ಘಟನೆಗಳಾಗಲೀ, ಹಿಂಸಾಚಾರವಾಗಲೀ ನಡೆದಿಲ್ಲ" ಎಂದು ಶೃಂಗ್ಲಾ ಸಮಜಾಯಿಷಿ ನೀಡಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+