ಪಾಪಿ ಪಾಕಿಸ್ತಾನದಲ್ಲಿ ಎಲ್ಲವೂ ಅಲ್ಲೋಲ, ಕಲ್ಲೋಲ!

ಭಾರತದ ಶತ್ರು ಪಾಕಿಸ್ತಾನದ ಪರಿಸ್ಥಿತಿ ಬಿಗಡಾಯಿಸಿ ಹೋಗಿದೆ. ಇದಕ್ಕೆ ಕಾರಣ ಏನೆಂದರೆ ಪಾಕಿಸ್ತಾನದ ಲೋಕಸಭೆ ಚುನಾವಣೆ. ಅಷ್ಟಕ್ಕೂ ಪಾಕಿಸ್ತಾನ ಸಂಸತ್ ಚುನಾವಣೆ ಹಿನ್ನೆಲೆ ಪಾಪಿ ಪಾಕ್ ಮತ್ತಷ್ಟು ಸೂಕ್ಷ್ಮವಾಗಿದೆ. ಅಲ್ಲಿ ಇಮ್ರಾನ್ ಖಾನ್ ಅವರ ರಾಜಕೀಯ ಪಕ್ಷಕ್ಕೆ ಅತಿಹೆಚ್ಚು ಸ್ಥಾನ ಸಿಕ್ಕಿರುವ ಕಾರಣಕ್ಕೆ ಕಾಡ್ಗಿಚ್ಚೇ ಹೊತ್ತಿಸಿಕೊಂಡಿದೆ. ಹಾಗೇ ಪಾಕಿಸ್ತಾನದ ಮಾನ ಜಾಗತಿಕವಾಗಿ ಹರಾಜಾಗುವುದು ಬಹುತೇಕ ಪಕ್ಕಾ ಆಗಿದೆ, ಯಾಕೆ ಗೊತ್ತೆ?

ಪಾಕಿಸ್ತಾನದ ಸೇನೆ ಮತ್ತು ಇಮ್ರಾನ್ ಖಾನ್ ನಡುವೆ ದೊಡ್ಡ ಗಲಾಟೆ ನಡೆಯುತ್ತಿದೆ. ಇದೇ ಕಾರಣಕ್ಕೆ ಈಗ ಇಮ್ರಾನ್ ಖಾನ್ ಜೈಲಿಗೆ ಕೂಡ ಹೋಗಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಅಲ್ಲಿ ಮತದಾರರು ಮತ್ತೊಮ್ಮೆ ಇಮ್ರಾನ್ ಖಾನ್‌ಗೆ ಬೆಂಬಲ ನೀಡಿದ್ದಾರೆ. ಇಮ್ರಾನ್ ರಾಜಕೀಯ ಪಕ್ಷಕ್ಕೆ ಅತಿಹೆಚ್ಚು ಸ್ಥಾನ ಸಿಕ್ಕಿದೆ. ಹೀಗಾಗಿ ಇಮ್ರಾನ್ ಖಾನ್ ಜೈಲಿನಲ್ಲಿ ಇದ್ದರೂ, ಅವರ ಪಕ್ಷ ಅಂದರೆ ಇಮ್ರಾನ್ ಖಾನ್ ಪಕ್ಷವಾದ ಪಿಟಿಐ ಪಕ್ಷದ ಮುಖಂಡರು ಇದೀಗ ಸರ್ಕಾರದ ರಚನೆಗೆ ಕಸರತ್ತು ಆರಂಭಿಸಿದ್ದಾರೆ. ಹೀಗಿದ್ದಾಗಲೇ ಪಾಕಿಸ್ತಾನದಲ್ಲಿ ಹಿಂಸಾಚಾರ ನಡೆಯುವ ಭಯ ಶುರುವಾಗಿದೆ.

Imran Khan Party Leaders Are In Talks To Form Government In Pakistan

ಮೈತ್ರಿ ಮಾತುಕತೆಗೂ ಚಾಲನೆ!

ನವಾಜ್ ಷರೀಫ್ ಮತ್ತು ಇಮ್ರಾನ್ ಖಾನ್ ಒಂದು ರೀತಿ ಹಾವು & ಮುಂಗುಸಿ ರೀತಿ. ಹೀಗೆ ಇಬ್ಬರೂ ಕಿತ್ತಾಡಿಕೊಂಡು ನವಾಜ್ ಷರೀಫ್ ಅವರನ್ನ ಜೈಲಿಗೂ ಕಳುಹಿಸಿದ್ದರು ಇಮ್ರಾನ್ ಖಾನ್. ಆ ನಂತರ ದೇಶವನ್ನೇ ಬಿಟ್ಟು ಓಡಿ ಹೋಗಿದ್ದ ನವಾಜ್ ಷರೀಫ್ ಇದೀಗ ಪಾಕ್‌ನ ಸೇನೆ ಸಹಾಯದಿಂದ ಮತ್ತೆ ಸರ್ಕಾರ ರಚಿಸಲು ಬಂದಿದ್ದಾರೆ. ಪಾಕಿಸ್ತಾನಕ್ಕೆ ವಾಪಸ್ ಬಂದ ನವಾಜ್ ಷರೀಫ್‌ಗೆ ಮೊದಲ ಗುರಿಯೇ ಇಮ್ರಾನ್ ಖಾನ್.

ಹೀಗಿದ್ದಾಗ ಪಾಕಿಸ್ತಾನ ಪ್ರಜೆಗಳ ಒಲವು ಇಮ್ರಾನ್ ಖಾನ್ ಪರವಾಗಿ ಇದೆ. ಹೀಗಾಗಿ ನವಾಜ್ ಷರೀಫ್ ಕುದ್ದು ಹೋಗಿ, ಶತ್ರುವಿನ ವಿರುದ್ಧ ರಿವೇಂಜ್‌ಗೆ ರೆಡಿಯಾಗಿದ್ದಾರೆ. ಹೀಗಿದ್ದಾಗಲೇ ಪಾಕಿಸ್ತಾನದಲ್ಲಿ ಸರ್ಕಾರ ರಚನೆಗೆ ಇಮ್ರಾನ್ ಖಾನ್ ಪಕ್ಷ ಪಿಟಿಐ, ಸಕಲ ತಯಾರಿ ಆರಂಭ ಮಾಡಿದೆ. ಮೈತ್ರಿ ಮಾತುಕತೆ ಶುರು ಮಾಡಿದ್ದಾರಂತೆ ಇಮ್ರಾನ್ ಖಾನ್ ಪಕ್ಷದ ಮುಖಂಡರು.

ಯಾರಿಗೆ ಎಷ್ಟು ಸ್ಥಾನಗಳು ಬಂದಿವೆ?

ಪಾಕಿಸ್ತಾನದ ಸಂಸತ್‌ನ 265 ಸ್ಥಾನಗಳ ಪೈಕಿ 250 ಸ್ಥಾನಗಳ ಫಲಿತಾಂಶ ಹೊರಬಿದ್ದಿದೆ. ಈ ಪೈಕಿ ಇಮ್ರಾನ್ ಖಾನ್ ಪಕ್ಷವನ್ನು ಬೆಂಬಲಿಸುವವರು ಭಾರಿ ದೊಡ್ಡ ಪ್ರಮಾಣದಲ್ಲಿ ಗೆದ್ದಿದ್ದು, ಇಮ್ರಾನ್ ಖಾನ್ ಜೈಲಿನಲ್ಲಿ ಇದ್ದರೂ ಪಾಕಿಸ್ತಾನ ಚುನಾವಣೆಯಲ್ಲಿ ಮೊದಲ ಸ್ಥಾನವನ್ನು ಪಡೆದಿದ್ದಾರೆ. ಇತ್ತೀಚಿನ ಮಾಹಿತ ಪ್ರಕಾರ ನವಾಜ್ ಷರೀಫ್ ಅವರ PML-N ಪಕ್ಷಕ್ಕೆ 71 ಸ್ಥಾನ ಸಿಕ್ಕಿದ್ದರೆ, PPP ಪಕ್ಷಕ್ಕೆ 53 ಸ್ಥಾನ ಸಿಕ್ಕಿದೆ.

Imran Khan Party Leaders Are In Talks To Form Government In Pakistan

ಇತರರು ಒಟ್ಟಾರೆ 27 ಸ್ಥಾನ ಗೆದ್ದಿದ್ದು 15 ಸ್ಥಾನಗಳ ಫಲಿತಾಂಶ ಬಾಕಿ ಉಳಿದಿದೆ. ಈ ಮೂಲಕ ಇಮ್ರಾನ್ ಖಾನ್ ಪಕ್ಷ ಪಿಟಿಐ ಇದೀಗ ಪಾಕಿಸ್ತಾನ ಸಂಸತ್‌ನಲ್ಲಿ ಅತಿದೊಡ್ಡ ಪಕ್ಷವಾಗಿ ಈಗ ಹೊರಹೊಮ್ಮಿದೆ. ಹೀಗಿದ್ದಾಗಲೇ ಹೊಸ ಕಿರಿಕ್ ಶುರುವಾಗಿದೆ. ಅಕಸ್ಮಾತ್ ಪಾಕಿಸ್ತಾನದಲ್ಲಿ ಹಿಂಸೆ ಭುಗಿಲೆದ್ದರೆ ಮತ್ತೊಮ್ಮೆ ಸೇನೆ ಆಡಳಿತ ಬರಬಹುದಾ? ಎಂಬ ಪ್ರಶ್ನೆ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+