ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಸ್ಥಿತಿ ಮತ್ತಷ್ಟು ಗಂಭೀರ, ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ | Imran Khan
ಪಾಕಿಸ್ತಾನ ತನ್ನ ಯೋಗ್ಯತೆಯನ್ನ ಪದೇ ಪದೇ ಜಗತ್ತಿನ ಎದುರು ಬಿಚ್ಚಿಡುತ್ತಾ, ತನ್ನ ಬಂಡವಾಳವನ್ನ ಬಯಲು ಮಾಡಿಕೊಳ್ಳುತ್ತಿದೆ. ಭ್ರಷ್ಟ ರಾಜಕೀಯ ನಾಯಕರು ಹಾಗೂ ಭ್ರಷ್ಟ ಸೇನೆಯ ಹಿಡಿತದಲ್ಲಿ, ಇದೇ ಪಾಕಿಸ್ತಾನ ನಲುಗಿ ಹೋಗಿದೆ. ಪಾಕಿಸ್ತಾನದ ಪ್ರಜೆಗಳು ಕೂಡ ಅಲ್ಲಿನ ವ್ಯವಸ್ಥೆಯ ವಿರುದ್ಧ ಭಾರಿ ಆಕ್ರೋಶ ಹೊರಹಾಕಿ, ಈಗಾಗಲೇ ದೊಡ್ಡ ದೊಡ್ಡ ಪ್ರತಿಭಟನೆಗಳನ್ನೂ ಮಾಡಿದ್ದಾರೆ. ಇಷ್ಟಾದರೂ ಅದೆಲ್ಲಾ ಉಪಯೋಗಕ್ಕೆ ಬಂದಿಲ್ಲ. ಮತ್ತೊಂದು ಕಡೆ ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಇದೀಗ ಜೈಲಿನಲ್ಲಿ ಘೋರ ಶಿಕ್ಷೆ ನೀಡಲಾಗುತ್ತಿದೆ. ಅದು ಹೊರ ಜಗತ್ತಿಗೆ ತಿಳಿಯದಂತೆ ಇಮ್ರಾನ್ ಖಾನ್ ಜೀವಕ್ಕೆ ಹಾನಿ ಮಾಡುವ ಕುತಂತ್ರ ನಡೆದಿದೆ ಎನ್ನುವಾಗಲೇ ಸ್ಫೋಟಕ ವಿಚಾರ ಬಯಲಾಗಿದೆ.
ಜಗತ್ತಿನಲ್ಲಿ ಪಾಕಿಸ್ತಾನ ಅಂದ್ರೆ ಹಿಂಸೆಯ ನಾಡು ಅಂತಾನೇ ಇದೀಗ ಚರ್ಚೆಗೆ ಬರುತ್ತಿದೆ ಭ್ರಷ್ಟ ದೇಶ. ಪಾಕಿಸ್ತಾನದಲ್ಲಿ ನೆಮ್ಮದಿ ಇಲ್ಲ, ಕ್ಷಣಕ್ಷಣಕ್ಕೂ ಏನಾದರೂ ಒಂದು ನಡೆಯುತ್ತದೆ. ಒಂದು ಕಡೆ ಉಗ್ರರು ಕಂಡ ಕಂಡ ಜಾಗದಲ್ಲಿ ಬಾಂಬ್ ಇಡುತ್ತಾರೆ, ಸಾಲದು ಅಂತ ರಾಜಕೀಯ ಪ್ರತಿಭಟನೆಗಳು ಶುರುವಾದರೆ ಎಲ್ಲೆಂದರಲ್ಲಿ ಬೆಂಕಿ ಹಚ್ಚುತ್ತಾರೆ. ಹೀಗೆ ಪಾಕ್ ಯಾವುದಾದರೂ ಒಂದು ವಿಚಾರಕ್ಕೆ ಪದೇ, ಪದೇ ಹೊತ್ತಿ ಹೊತ್ತಿ ಉರಿಯುತ್ತದೆ. ಇಷ್ಟೆಲ್ಲದರ ನಡುವೆ ಇದೀಗ ಇಮ್ರಾನ್ ಖಾನ್ ಜೀವಕ್ಕೆ ಹಾಗೂ ಅವರ ಕಣ್ಣಿಗೆ ಉದ್ದೇಶ ಪೂರ್ವಕ ಹಾನಿ ಮಾಡಲು ಕುತಂತ್ರ ನಡೆದಿದೆ ಎಂಬ ಆರೋಪ ಬಿರುಗಾಳಿ ಎಬ್ಬಿಸುತ್ತಿದೆ. ಈ ಬಗ್ಗೆ ಇಮ್ರಾನ್ ಖಾನ್ ಅವರ ಕುಟುಂಬವೇ ತೀವ್ರ ಆಕ್ರೋಶ ಹೊರಹಾಕಿದೆ.

ಅಪಾಯದಲ್ಲಿ ಸಿಲುಕಿದ ಇಮ್ರಾನ್ ಖಾನ್?
ಅಷ್ಟಕ್ಕೂ ಇಮ್ರಾನ್ ಖಾನ್ ಅವರ ದೃಷ್ಟಿಗೆ ಅಪಾಯ ಎದುರಾಗಿದ್ದು, ಕಣ್ಣು ಕಾಣದ ಪರಿಸ್ಥಿತಿ ಇದೀಗ ಎದುರಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದರೆ ಈ ಬಗ್ಗೆ ಪರಿಶೀಲನೆ ನೆಪ ಮಾಡಿದ್ದ ಪಾಕ್‌ನ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು ಸುಳ್ಳು ಹೇಳುತ್ತಿರುವ ಆರೋಪ ಕೇಳಿಬಂದಿದೆ. ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ದೃಷ್ಟಿ ಸುಧಾರಿಸಿದೆ ಎಂಬ ಸರ್ಕಾರದ ಸಮಿತಿಯ ಹೇಳಿಕೆಯನ್ನ ಇಮ್ರಾನ್ ಅವರ ಕುಟುಂಬ ತಿರಸ್ಕರಿಸಿದೆ. ಇಸ್ಲಾಮಾಬಾದ್‌ನಲ್ಲಿ ಕಳೆದ ವಾರ ಸಲ್ಲಿಸಲಾದ ನ್ಯಾಯಾಲಯ ವರದಿಯಲ್ಲಿ ದಾಖಲಾದ ವಿಚಾರಗಳನ್ನ ಉಲ್ಲೇಖಿಸಿ ಅವರ ಸಹೋದರಿ ಹೇಳಿಕೆ ಆಧರಿಸಿ ಇದೀಗ ವರದಿ ಮಾಡಲಾಗಿದೆ.
145ಕ್ಕೂ ಹೆಚ್ಚು ಕೇಸ್ ಕಂಟಕ
ಭ್ರಷ್ಟಾಚಾರ ಸೇರಿ 145ಕ್ಕೂ ಹೆಚ್ಚು ಕೇಸ್‌ಗಳನ್ನು ಎದುರಿಸುತ್ತಿರುವ ಇಮ್ರಾನ್ ಖಾನ್‌ರ ಜೀವನ ಕಂಟಕಕ್ಕೆ ಸಿಲುಕಿದೆ. ಹೀಗಾಗಿ ಜೈಲಿನಲ್ಲಿ ಚಿತ್ರಹಿಂಸೆ ಅನುಭವಿಸುತ್ತಿರುವ, ಇಮ್ರಾನ್ ಖಾನ್ ಅವರನ್ನ ಹೊರ ಬಿಡಿ ಅಂತಾ ಅವರ ಅಭಿಮಾನಿಗಳು ಹೋರಾಟ ಆರಂಭಿಸಲು ಸಜ್ಜಾಗಿದ್ದಾರೆ. ಮತ್ತೊಂದು ಕಡೆ ಕ್ರಿಕೆಟಿಗ ಕಂ ರಾಜಕಾರಣಿ ಇಮ್ರಾನ್ ಖಾನ್‌ಗೆ ಕಣ್ಣು ಕಾಣುತ್ತಿಲ್ಲ ಎಂಬ ಮಾತು ಓಡಾಡುತ್ತಿದ್ದು, ಜಾಗತಿಕವಾಗಿ ಈ ವಿಚಾರ ದೊಡ್ಡ ದೊಡ್ಡ ಕ್ರಿಕೆಟ್ ಆಟಗಾರರನ್ನೇ ಚಿಂತೆಗೆ ದೂಡಿದೆ. ಅಲ್ಲದೇ ಈ ವಿಚಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.












Click it and Unblock the Notifications