Imran Khan: ಪಾಕಿಸ್ತಾನ ಮಾಜಿ ಪ್ರಧಾನಿಗೆ ಸಿಕ್ಕಿದೆ ಬಿಗ್ ರಿಲೀಫ್!

ತೋಶಾಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಇಮ್ರಾನ್ ಖಾನ್‌ ನಿಟ್ಟುಸಿರು ಬಿಟ್ಟಿದ್ದಾರೆ. ಜೈಲಿನಲ್ಲಿ ತಮಗೆ ನರಕ ತೋರಿಸುತ್ತಿದ್ದಾರೆ ಎಂದು ಪಾಕ್ ಮಾಜಿ ಪ್ರಧಾನಿ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ವಿಚಾರಣೆ ನಡೆಸಿದ್ದು, ಇಮ್ರಾನ್ ಖಾನ್ ಇರುವ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಹಾಗಾದ್ರೆ ಹೈಕೋರ್ಟ್ ನೀಡಿರುವ ಸೂಚನೆ ಏನು? ಬನ್ನಿ ತಿಳಿಯೋಣ.

ಅಂದಹಾಗೆ ಇಮ್ರಾನ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಪಾಕ್ ಚುನಾವಣೆ ಆಯೋಗವು ಕಳೆದ ವರ್ಷ ಕೇಸ್ ದಾಖಲಿಸಿತ್ತು. ಗಿಫ್ಟ್ ಮಾರಾಟದಿಂದ ₹14 ಕೋಟಿಗೂ ಹೆಚ್ಚು ಹಣ ಗಳಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇಸ್ಲಾಮಾಬಾದ್‌ ಜಿಲ್ಲಾ & ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಹುಮಾಯುನ್‌ ದಿಲವಾರ್‌ ತೀರ್ಪು ನೀಡಿ, ಇಮ್ರಾನ್‌ಗೆ ಜೈಲು ಶಿಕ್ಷೆ ವಿಧಿಸಿದ್ದಾರೆ. ಆ ಬಳಿಕ ಇಮ್ರಾನ್ ಬಂಧನವಾಗಿ, ಕೋರ್ಟ್‌ನ ಆದೇಶದಂತೆ ಇಮ್ರಾನ್ ರಾವಲ್ಪಿಂಡಿಯ ಆದಿಯಾಲಾ ಜೈಲಿನಲ್ಲಿ ಇರಬೇಕಿತ್ತು. ಆದರೆ ಅಟಕ್ ನಗರದ ಜೈಲಿಗೆ ಅವರನ್ನ ಸ್ಥಳಾಂತರ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಇಮ್ರಾನ್ ಖಾನ್ ಮನವಿ ಹಿನ್ನೆಲೆಯಲ್ಲಿ ಪಾಕ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

imran-khan-got-relief

ಕನಿಷ್ಠ ಸೌಲಭ್ಯ ಕಲ್ಪಿಸಲು ಸೂಚನೆ!

ಇನ್ನು ಇಮ್ರಾನ್ ಖಾನ್‌ಗೆ ಹಗಲಲ್ಲಿ ನೊಣ, ರಾತ್ರಿ ಸೊಳ್ಳೆ, ಹುಳಗಳ ಕಾಟವಿರುವ ಜೈಲಿನ ಕೋಣೆಯಲ್ಲಿ ಇಮ್ರಾನ್ ಖಾನ್‌ಗೆ ಟಾರ್ಚರ್ ಕೊಡುತ್ತಿರುವ ಆರೋಪ ಕೇಳಿಬಂದಿತ್ತು. ಸ್ವತಃ ಇಮ್ರಾನ್ ಖಾನ್ ಪರ ವಕೀಲರು ಈ ಬಗ್ಗೆ ಗಂಭೀರ ಆರೋಪ ಮಾಡಿದ್ದರು. ಕೊನೆಗೂ ಈ ವಿಚಾರ ಇಸ್ಲಾಮಾಬಾದ್ ಹೈಕೋರ್ಟ್ ಮೆಟ್ಟಿಲು ಏರಿತ್ತು. ಇದೀಗ ತೀರ್ಪು ನೀಡಿರುವ ಪಾಕಿಸ್ತಾನದ ಕೋರ್ಟ್, ಇಮ್ರಾನ್ ಖಾನ್‌ಗೆ ಜೈಲಿನಲ್ಲಿ ಕನಿಷ್ಠ ವೈದ್ಯಕೀಯ ಸೌಲಭ್ಯವೂ ಸೇರಿ ಕುಟುಂಬ ಸದಸ್ಯರು ಹಾಗೂ ಸ್ನೇಹಿತರನ್ನು ಭೇಟಿ ಆಗಲು ಅವಕಾಶ ನೀಡಿ ಎಂದು ಹೇಳಿದೆ. ಈ ಮೂಲಕ ಜೈಲಿನಲ್ಲಿ ನರಳುತ್ತಿದ್ದ ಇಮ್ರಾನ್ ನಿಟ್ಟುಸಿರು ಬಿಟ್ಟಿದ್ದಾರೆ.

ವಕೀಲರ ಬಳಿ ಬೇಡಿದ್ದ ಇಮ್ರಾನ್!

ಇಮ್ರಾನ್ ಸ್ಥಿತಿ ಹೇಗಾಗಿದೆ ಎಂದರೆ, ಪಾಕ್ ಸೇನೆ ಮತ್ತು ಸರ್ಕಾರದ ವಿರುದ್ಧ ಮಾತನಾಡಿದ್ದಕ್ಕೆ ವಿಲವಿಲ ಒದ್ದಾಡುತ್ತಿದ್ದಾರೆ. ಜೈಲಿನಲ್ಲಿ ನರಳುವ ಪರಿಸ್ಥಿತಿ ಬಂದ ಹಿನ್ನೆಲೆಯಲ್ಲಿ, ಜೈಲಿನಿಂದ ನನ್ನ ಹೇಗಾದರೂ ಹೊರಗಡೆ ಕರೆದುಕೊಂಡು ಹೋಗಿ ಎಂದು ಇಮ್ರಾನ್ ತಮ್ಮ ವಕೀಲರ ಬಳಿ ಬೇಡಿಕೊಂಡಿದ್ದರಂತೆ. ಹೀಗಾಗಿ ಇಮ್ರಾನ್ ಸ್ಥಿತಿ ಬಗ್ಗೆ ಅವರ ಕುಟುಂಬಕ್ಕೆ ಮತ್ತು ಬೆಂಬಲಿಗರಿಗೆ ಭಯ ಶುರುವಾಗಿತ್ತು. ಅಲ್ಲದೆ ಪಾಕಿಸ್ತಾನ ಮಾಜಿ ಪ್ರಧಾನಿ ಆರೋಗ್ಯ ಏನಾಗಲಿದೆ? ಎಂಬುದು ಕೂಡ ದೊಡ್ಡ ಪ್ರಶ್ನೆಯಾಗಿತ್ತು. ಆದರೆ ಇದೀಗ ಹೈಕೋರ್ಟ್ ತೀರ್ಪು ಇಮ್ರಾನ್‌ಗೆ ರಿಲೀಫ್ ಕೊಟ್ಟಿದೆ.

imran-khan-got-relief

ಇಮ್ರಾನ್ ಖಾನ್ ಅರ್ಜಿಯಲ್ಲಿ ಏನಿತ್ತು?

ಜೈಲಿನಲ್ಲಿ ತಮಗೆ ತುಂಬಾ ಕಾಟ ಕೊಡುತ್ತಿದ್ದಾರೆ ಎಂಬ ಬಗ್ಗೆ ಇಮ್ರಾನ್ ಖಾನ್ ದೂರನ್ನ ಸಲ್ಲಿಸಿದ್ದರು. ಅಲ್ಲದೆ ತಮ್ಮನ್ನ ಅಟಕ್‌ ಜೈಲಿಂದ ರಾವಲ್ಪಿಂಡಿ ಅಡಿಯಾಲ ಜೈಲಿಗೆ ಸ್ಥಳಾಂತರ ಮಾಡಲು ಕೋರಿದ್ದರು. ಈ ಬಗ್ಗೆ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಅರ್ಜಿಯನ್ನ ಸಲ್ಲಿಸಿದ್ರು. ಅರ್ಜಿ ವಿಚಾರಣೆ ವೇಳೆ ಇಸ್ಲಾಮಾಬಾದ್ ಹೈಕೋರ್ಟ್‌ ಪಾಕ್ ಕೇಂದ್ರ ಸರ್ಕಾರ‌ & ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಸರ್ಕಾರದ ಪ್ರತಿಕ್ರಿಯೆಯನ್ನ ಕೇಳಿತ್ತು. ಅರ್ಜಿ ವಿಚಾರಣೆಯನ್ನ ನಡೆಸಿದ ಮುಖ್ಯ ನ್ಯಾಯಮೂರ್ತಿ ಆಮರ್‌ ಫಾರೂಕ್‌ ಕಾನೂನು ತಂಡ ಇಮ್ರಾನ್‌ರನ್ನ ಭೇಟಿಯಾಗಲು ಅವಕಾಶ ನೀಡಿ ಎಂದು ಆದೇಶ ನೀಡಿದ್ದರು. ಈಗ ಮತ್ತೊಂದು ಮಹತ್ವದ ಆದೇಶ ನೀಡಿ, ಇಮ್ರಾನ್ ಖಾನ್‌ಗೆ ರಿಲೀಫ್ ಕೊಟ್ಟಿದ್ದಾರೆ.

ಇದೀಗ ಅಂತಿಮವಾಗಿ ಇಮ್ರಾನ್ ಖಾನ್‌ಗೆ ಸಾಮಾನ್ಯ ವೈದ್ಯಕೀಯ ಸೌಲಭ್ಯ ಕೊಡುವಂತೆ ಸೂಚಿಸಲಾಗಿದೆ. ಆದರೂ ಇಮ್ರಾನ್ ಇರುವ ಜೈಲಿನ ಬಗ್ಗೆ ಹಾಗೂ ಅವರಿಗೆ ಸಿಗುತ್ತಿರುವ ಸೌಲಭ್ಯದ ಬಗ್ಗೆ ಅವರ ಬೆಂಬಲಿಗರಿಗೆ ಭಯ ಇದೆ. ಅದರಲ್ಲೂ ಪಾಕ್ ಸರ್ಕಾರವನ್ನು & ಪಾಕಿಸ್ತಾನ ಸೇನೆಯನ್ನು ಎದುರು ಹಾಕಿಕೊಂಡಿರುವ ಇಮ್ರಾನ್ ಖಾನ್ ಪರಿಸ್ಥಿತಿ ಈಗಲೂ ಸೂಕ್ಷ್ಮವಾಗಿದೆ. ಮುಂದೆ ಏನಾಗುತ್ತೆ ಅನ್ನೋದು ಪಾಕಿಸ್ತಾನ ಚುನಾವಣೆ ಬಳಿಕ ಸ್ಪಷ್ಟವಾಗಿ ತಿಳಿಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+