• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಹಲೋ ಡೊನಾಲ್ಡ್ ಟ್ರಂಪ್, ಈ ಕಡೆಯಿಂದ ಇಮ್ರಾನ್ ಖಾನ್...'

|
   ಕಾಶ್ಮೀರ ವಿಚಾರದ ಬಗ್ಗೆ ಚರ್ಚಿಸಲು ಡೊನಾಲ್ಡ್ ಟ್ರಂಪ್ ಗೆ ಕರೆ ಮಾಡಿದ ಇಮ್ರಾನ್ ಖಾನ್

   ಇಸ್ಲಾಮಾಬಾದ್, ಆಗಸ್ಟ್ 16: ಜಮ್ಮು ಮತ್ತು ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯಲ್ಲಿ ತಗಾದೆ ವ್ಯಕ್ತಪಡಿಸಿದ್ದ ಪಾಕಿಸ್ತಾನ ನಿರೀಕ್ಷೆಯಂತೆಯೇ ಬೇರೆ ದೇಶಗಳ ಬೆಂಬಲ ಸಿಗದೆ ಪೆಚ್ಚಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಬೆಂಬಲದೊಂದಿಗೆ ಮುಚ್ಚಿದ ಬಾಗಿಲ ಅನೌಪಚಾರಿಕ ಸಭೆಯಲ್ಲಿ ಪಾಕಿಸ್ತಾನದ ಉದ್ದೇಶಕ್ಕೆ ಯಾವ ಬೆಲೆಯೂ ಸಿಕ್ಕಿಲ್ಲ.

   ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಮತ್ತೆ ಮುಖಭಂಗ, ಸಿಕ್ಕಿದ್ದು ಚೀನಾ ಬೆಂಬಲ ಮಾತ್ರ

   ಈ ಸಭೆಗೂ ಮುನ್ನ ದೊಡ್ಡಣ್ಣ ಅಮೆರಿಕದ ಬೆಂಬಲ ಪಡೆಯಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸಾಹಸಪಟ್ಟಿದ್ದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ದೂರವಾಣಿ ಕರೆ ಮಾಡಿದ್ದ ಇಮ್ರಾನ್ ಖಾನ್, ಕಾಶ್ಮೀರದ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ನಿರ್ಧಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿದ್ದರು. ಸುಮಾರು 20 ನಿಮಿಷ ತಮ್ಮ ಗೋಳು ತೋಡಿಕೊಂಡಿದ್ದರು.

   ಭಾರತವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂದಕ್ಕೆ ಪಡೆದುಕೊಂಡ ವಿಚಾರದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಅವರು ಅಮೆರಿಕ ಅಧ್ಯಕ್ಷರ ವಿಶ್ವಾಸ ಪಡೆದುಕೊಂಡಿದ್ದಾರೆ ಎಂದು ವಿದೇಶಾಂಗ ಸಚಿವ ಮೆಹಮೂದ್ ಖುರೇಷಿ ಹೇಳಿದ್ದಾರೆ.

   ಭಾರತದ ಮೇಲಿನ ಸಿಟ್ಟಿಗೆ ಪಾಕ್‌ನಲ್ಲಿ ಬಾಲಿವುಡ್ ಸಿಡಿಗಳು ಪುಡಿಪುಡಿ

   'ಕಾಶ್ಮೀರದಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತು ಇಮ್ರಾನ್ ಖಾನ್ ಅವರು ಅಮೆರಿಕಕ್ಕೆ ಪಾಕಿಸ್ತಾನದ ಕಳವಳವನ್ನು ಮನವರಿಕೆ ಮಾಡಿದೆ. ಇದರಿಂದ ಪ್ರಾದೇಶಿಕ ಶಾಂತಿಗೆ ಎದುರಾಗಿರುವ ಬೆದರಿಕೆ ಬಗ್ಗೆ ವಿವರಿಸಿದೆ' ಎಂದು ತಿಳಿಸಿದ್ದಾರೆ.

   ಇಬ್ಬರು ನಾಯಕರ ನಡುವಿನ ಮಾತುಕತೆ ಉತ್ತಮ ಸ್ನೇಹದ ವಾತಾವರಣದಲ್ಲಿ ನಡೆದಿದೆ. ಇಬ್ಬರೂ ಕಾಶ್ಮೀರದ ವಿಚಾರವಾಗಿ ಚರ್ಚಿಸಲು ನಿರಂತರ ಸಂಪರ್ಕದಲ್ಲಿರಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

   English summary
   Pakistan Prime Minister Imran Khan spoke with American President Donald Trump on Jammu and Kashmir issue.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X