Hollywood Hills: ಬೆಂಕಿಯಲ್ಲಿ ಬೆಂದ ಹಾಲಿವುಡ್, ಬೋರ್ಡ್ ಕೂಡ ಢಮಾರ್?
ಹಾಲಿವುಡ್ ಬುಡ ಅಲುಗಾಡಿ ಹೋಗುತ್ತಿದೆ, ಇಡೀ ಜಗತ್ತೇ ಮೆಚ್ಚಿಕೊಳ್ಳುವ ಸಿನಿಮಾಗಳನ್ನು ತಯಾರಿಸುವ ಕಾರ್ಖಾನೆ ಅಂತಾನೇ ಕರೆಸಿಕೊಳ್ಳುವ 'ಹಾಲಿವುಡ್' ಈಗ ಕಾಡಿನ ಬೆಂಕಿಯಲ್ಲಿ ಬೆಂದು ಹೋಗುತ್ತಿದೆ. ಈಗಾಗಲೇ 'ಹಾಲಿವುಡ್' ಸಿನಿಮಾ ರಂಗದ ಸ್ಟಾರ್ ನಟ & ನಟಿಯರ ಮನೆಗಳು ಬೆಂಕಿಯಲ್ಲಿ ಬೆಂದು ಸುಟ್ಟು ಭಸ್ಮವಾಗಿ ಹೋಗಿವೆ. ಇದು ಸಾಲದು ಎಂಬಂತೆ ಈ ಸಮಯದಲ್ಲೇ ಐತಿಹಾಸಿಕ ಬೆಟ್ಟದ ಮೇಲಿರುವ 'ಹಾಲಿವುಡ್' ಬೋರ್ಡ್‌ಗೂ ಕಂಟಕ ಈಗ ಎದುರಾಗಿದೆ.
ಅಮೆರಿಕ ಹೇಗೆ ತನ್ನ ಶ್ರೀಮಂತಿಕೆಗೆ ಹೆಸರುವಾಸಿ ಆಗಿದೆಯೋ ಅದೇ ರೀತಿ ಪ್ರಾಕೃತಿಕ ವಿಕೋಪದ ಬಿರುಗಾಳಿಗೆ ಸಿಲುಕಿ ಅಮೆರಿಕ ಪದೇ ಪದೇ ನಲುಗಿ ಹೋಗುತ್ತಿದೆ. ಒಂದು ಕಡೆ ಚಂಡಮಾರುತ & ಅತಿಯಾದ ಹಿಮಪಾತ ಸುರಿಯುವ ಅಮೆರಿಕದಲ್ಲಿ, ಪಶ್ಚಿಮ ಭಾಗ ಮಾತ್ರ ಪದೇ ಪದೇ ಈ ರೀತಿ ಕಾಡಿನ ಬೆಂಕಿಗೆ ಬಲಿಯಾಗುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಪ್ರದೇಶಗಳು ಕಾಡ್ಗಿಚ್ಚಿನ ಕಾರಣಕ್ಕೆ ಸಿಕ್ಕಾಪಟ್ಟೆ ಫೇಮಸ್, ಈಗಲೂ ಅದೇ ಆಗಿ ಹೋಗಿದೆ.

ಬೆಂಕಿಯಲ್ಲಿ ಬೆಂದು ಹೋದ ಹಾಲಿವುಡ್!
ಹೌದು, ಹಾಲಿವುಡ್ ಸಿನಿಮಾ ರಂಗ ಇರುವ ಲಾಸ್ ಏಂಜಲೀಸ್ ಪ್ರತಿಬಾರಿ ಕೂಡ ಹೀಗೆಯೇ ಕಾಡಿನ ಬೆಂಕಿಗೆ ಬಲಿಯಾಗುತ್ತಿದೆ. ಹಾಲಿವುಡ್ ಸಿನಿಮಾ ಸ್ಟಾರ್‌ಗಳ ಸಮೇತ ಬಹುತೇಕ ಎಲ್ಲ ಶ್ರೀಮಂತರು ಇದೇ ಲಾಸ್ ಏಂಜಲೀಸ್ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಆದರೂ ಇಲ್ಲಿನ ಪ್ರಾಕೃತಿಕ ವಿಕೋಪಗಳು ಕಂಟ್ರೋಲ್‌ಗೆ ಸಿಗುತ್ತಿಲ್ಲ. ಮತ್ತೊಂದು ಕಡೆ ಐತಿಹಾಸಿಕ, ಹಾಲಿವುಡ್ ಬೆಟ್ಟದ ಮೇಲೆ ಇರುವ ಹಾಲಿವುಡ್ ಬೋರ್ಡ್ ಕೂಡ ಕಾಡ್ಗಿಚ್ಚಿಗೆ ಬಲಿಯಾಗುವ ಭಯ ಈಗ ಕಾಡುತ್ತಿದೆ.
ಬೆಂಕಿ ಆರಿಸಲು ನೀರು ಸಿಗುತ್ತಿಲ್ಲ!
ಅಮೆರಿಕದಲ್ಲಿ ನೀರಿನ ಸಮಸ್ಯೆಯೇ ಇಲ್ಲ ಎನ್ನುವ ರೀತಿ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತೆ. ಆದರೆ ಅಮೆರಿಕದ ಸ್ಥಿತಿ ಹೇಗಾಗಿದೆ ಅಂದ್ರೆ, ಕಾಡ್ಗಿಚ್ಚು ಆರಿಸಲು ಕೂಡ ಈಗ ಅಲ್ಲಿ ನೀರಿಲ್ಲ. ಚಳಿಗಾಲದ ಸಮಯದಲ್ಲಿ ಈ ರೀತಿ ಕಾಡ್ಗಿಚ್ಚು ಹೊತ್ತಿಕೊಂಡ ಪರಿಣಾಮ ಅಮೆರಿಕದ ಜನರು ನಲುಗಿ ಹೋಗಿದ್ದಾರೆ. ಈಗಾಗಲೇ ಲಕ್ಷಾಂತರ ಎಕರೆ ಅರಣ್ಯ ಪ್ರದೇಶ ನಾಶವಾಗಿದ್ದು, ಕಾಡಿಗೆ ಬೆಂಕಿ ಬಿದ್ದ ನಂತರ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದೆ. ಇಷ್ಟೆಲ್ಲದರ ನಡುವೆ ಮತ್ತೊಂದು ಮಾಹಿತಿ ಕೂಡ ಸಿಗುತ್ತಿದ್ದು, ಸಂಚಲನ ಸೃಷ್ಟಿಯಾಗಿದೆ.
ಅದು ಏನಂದ್ರೆ ಈಗ ಅಮೆರಿಕದ ಪಶ್ಚಿಮ ಭಾಗದಲ್ಲಿ ಭಾರಿ ಘೋರವಾಗಿ ಶೀತಗಾಳಿ ಬೀಸುತ್ತಿದ್ದು ಈ ಗಾಳಿ ವೇಗ ಇನ್ನಷ್ಟು ಹೆಚ್ಚಾಗುವ ಭಯ ಕಾಡುತ್ತಿದೆ. ಗಾಳಿಯ ವೇಗ ಹೆಚ್ಚಾದಷ್ಟು ಬೆಂಕಿ ಇನ್ನಷ್ಟು ಕಾಡು ಪ್ರದೇಶಕ್ಕೆ ಹಬ್ಬುವ ಭಯ ಕಾಡ್ತಿದೆ. ಲಾಸ್ ಏಂಜಲೀಸ್ & ಕ್ಯಾಲಿಫೋರ್ನಿಯಾ ನಿವಾಸಿಗಳು ತಮ್ಮ ಜೀವ ಉಳಿಸಿಕೊಳ್ಳಲು ಓಡಿ ಹೋಗಬೇಕಾದ ಸ್ಥಿತಿ ನಿರ್ಮಾಣ ಆಗಿದೆ.












Click it and Unblock the Notifications