ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಕುಸಿತ ಕಂಡ ಐಐಎಸ್ಸಿ

Subscribe to Oneindia Kannada

ಲಂಡನ್, ಸೆಪ್ಟೆಂಬರ್, 06: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್(ಐಐಎಸ್ಸಿ) ಭಾರತದ ಟಾಪ್ ವಿಶ್ವವಿದ್ಯಾಲಯವಾಗಿ ಸ್ಥಾನ ಉಳಿಸಿಕೊಂಡಿದ್ದರೂ ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಕುಸಿತ ಕಂಡಿದೆ. ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲಿ ಕುಸಿತ ಕಂಡಿರುವ ಐಐಎಸ್ಸಿ ಹೊಸ ಪಟ್ಟಿಯಲ್ಲಿ 152 ನೇ ಸ್ಥಾನ ಪಡೆದುಕೊಂಡಿದೆ.

1909 ರಲ್ಲಿ ಜೇಮ್ ಶೇಡ್ ಜೀ ಟಾಟಾ ಮತ್ತು ಮೈಸೂರು ಮಹಾರಾಜರ ಮುಂದಾಳತ್ವದಲ್ಲಿ ಆರಂಭವಾದ ವಿಶ್ವ ವಿದ್ಯಾಲಯ ಕಳೆದ ವರ್ಷ 147 ನೇ ಶ್ರೇಯಾಂಕ ಪಡೆದುಕೊಂಡಿತ್ತು.[ಜಾಗತಿಕ ಟಾಪ್ 200ರೊಳಗೆ ನಮ್ಮ ಐಐಎಸ್ಸಿಗೆ ಸ್ಥಾನ!]

IISc Bangalore remains India's top university, global ranking drops

ಉಳಿದಂತೆ ಭಾರತದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನವದೆಹಲಿ(185), ಮುಂಬೈ(219), ಮದ್ರಾಸ್(249), ಕಾನ್ಪುರ(302), ಖರಗ್ ಪುರ(313), ರೋರ್ಕೆರಾ(399) ನೇ ಸ್ಥಾನ ಪಡೆದು ಟಾಪ್ 400 ಒಳಗೆ ಸ್ಥಳ ಗಿಟ್ಟಿಸಿವೆ. ಕ್ಯೂ ಎಸ್ ಯುನಿವರ್ಸಿಟಿ ಶ್ರೇಯಾಂಕ ಮಾಪನ ಸಂಸ್ಥೆ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಅಂತಾರಾಷ್ಟ್ರೀಯ ಶ್ರೇಯಾಂಕ ಪಟ್ಟಿ
1. ಅಮೆರಿಕದ ಮೆಸ್ಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)
2. ಸ್ಟಾನ್ ಫರ್ಡ್ ಯುನಿವರ್ಸಿಟಿ
3. ಹಾರ್ವಡ್ ಯೂನಿವರ್ಸಿಟಿ,
4. ಕೇಂಬ್ರಿಡ್ಜ್ ಯೂನಿವರ್ಸಿಟಿ
5. ಕ್ಯಾಲಿಫೋರ್ನಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (CALTECH),
6. ಯೂನಿರ್ವರ್ಸಿಟಿ ಆಫ್ ಆಕ್ಸ್ ಫರ್ಡ್
7. ಯೂನಿವರ್ಸಿಟಿ ಕಾಲೇಜ್ ಲಂಡನ್,
8. ಸ್ವಿಸ್ ಫೆಡರಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
9. ಇಂಪೀರಿಯಲ್ ಕಾಲೇಜ್, ಲಂಡನ್
10. ಯೂನಿವರ್ಸಿಟಿ ಆಫ್ ಶಿಕಾಗೋ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Even as the Institute of Science (IISc), Bangalore remains the country's top university, its global ranking has dropped two notches to 152 in the latest QS World University Rankings 2016-17 released on Tuesday. Founded in 1909 as a result of the joint efforts of Jamsetji Nusserwanji Tata, the Government of India and the Maharaja of Mysore, IISc's global ranking last year was 147 -- also just within the top 150 universities in then world.
Please Wait while comments are loading...