Donald Trump: ಡೊನಾಲ್ಡ್ ಟ್ರಂಪ್‌ಗೆ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಪಟ್ಟ?
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಇನ್ನು ಕೇವಲ 1 ವಾರ ಬಾಕಿ ಉಳಿದಿದೆ. ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ಭರ್ಜರಿ ಎಲೆಕ್ಷನ್ ಫೈಟಿಂಗ್ ಕೂಡ ನಡೆಯುತ್ತಿದೆ. ಹೇಗಾದರೂ ಸರಿ ಈ ಬಾರಿ ಗೆದ್ದೇ ಗೆಲ್ಲಬೇಕು ಎಂಬುದು ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ಅವರ ಒನ್‌ಲೈನ್ ಅಜೆಂಡಾ ಆಗಿದೆ. ಇಂತಹ ಸಮಯದಲ್ಲೇ, ಡೊನಾಲ್ಡ್ ಟ್ರಂಪ್‌ಗೆ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷ ಪಟ್ಟ ಸಿಗಲಿದೆಯಾ? ಡೊನಾಲ್ಡ್ ಟ್ರಂಪ್ ಗೆದ್ದರೆ ಯಾರಿಗೆ ಅತಿ ಹೆಚ್ಚು ಲಾಭ? ಏನಾಗಲಿದೆ ಜಗತ್ತಿನ ದೊಡ್ಡಣ್ಣ ಅಮೆರಿಕದ ಪರಿಸ್ಥಿತಿ?
ಡೊನಾಲ್ಡ್ ಟ್ರಂಪ್ 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಉತ್ತಮವಾಗಿ ಆಡಳಿತ ನೀಡಬಹುದು ಎಂಬ ನಿರೀಕ್ಷೆಗಳು ಅಮೆರಿಕದ ಪ್ರಜೆಗಳಲ್ಲಿ ಇತ್ತು. ಆದರೆ ಡೊನಾಲ್ಡ್ ಟ್ರಂಪ್ ಅವರ ಆಡಳಿತ ಕಂಡು ಅಮೆರಿಕದ ಮತದಾರರು ರೊಚ್ಚಿಗೆದ್ದಿದ್ದರು, ಇದೇ ಕಾರಣಕ್ಕೆ 2020 ರಲ್ಲಿ ಡೊನಾಲ್ಡ್ ಟ್ರಂಪ್‌ಗೆ ಸೋಲಿನ ರುಚಿ ತೋರಿಸಿದ್ದರು ಮತದಾರರು. ಆದರೂ ತಮ್ಮ ಸೋಲಿನ ಸುಳಿಯನ್ನು ಎದುರಿಸಿ, ಈಗ ಮೈಕೊಡವಿ ನಿಲ್ಲಲು ಡೊನಾಲ್ಡ್ ಟ್ರಂಪ್ ಸಜ್ಜಾಗಿದ್ದಾರೆ. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರು 2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ.

ಡೊನಾಲ್ಡ್ ಟ್ರಂಪ್ ಗೆದ್ದರೆ ಯಾರಿಗೆ ಲಾಭ?
ಅಮೆರಿಕದ ಚುನಾವಣೆಯಲ್ಲಿ ಇದೀಗ ಡೊನಾಲ್ಡ್ ಟ್ರಂಪ್ ಪರವಾಗಿ ಮತ್ತೆ ಅಲೆ ಏಳುತ್ತಿದ್ದು, ಕಮಲಾ ಹ್ಯಾರಿಸ್ ಅವರಿಗೆ ಆಘಾತ ನೀಡುತ್ತಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಗೆದ್ದೇಬಿಟ್ಟರೆ ಅದು ಹೊಸ ಇತಿಹಾಸ ನಿರ್ಮಾಣ ಮಾಡಲಿದೆ. ಪ್ರಮುಖವಾಗಿ ಕಮಲಾ ಹ್ಯಾರಿಸ್ ಅವರಿಗೆ ಇದು ದೊಡ್ಡ ಮುಖಭಂಗ ಎನ್ನಲಾಗಿದ್ದು, ಎಲಾನ್ ಮಸ್ಕ್ ಸೇರಿದಂತೆ ಟ್ರಂಪ್ ಪರವಾಗಿ ನಿಂತಿರುವ ಅಮೆರಿಕದ ಉದ್ಯಮಿಗಳಿಗೆ ಇದರಿಂದ ಲಾಟರಿ ಹೊಡೆಯುವುದು ಗ್ಯಾರಂಟಿ.
ಎಲಾನ್ ಮಸ್ಕ್ ಸಿಕ್ಕಾಪಟ್ಟೆ ಸಪೋರ್ಟ್!
ಡೊನಾಲ್ಡ್ ಟ್ರಂಪ್ ಅವರ ಆಪ್ತ ಎಂದೇ ಗುರುತಿಸಿಕೊಂಡಿರುವ ಎಲಾನ್ ಮಸ್ಕ್ ಅಮೆರಿಕದ ಅತ್ಯಂತ ಪ್ರಭಾವಿ ವ್ಯಕ್ತಿ ಕೂಡ ಆಗಿದ್ದಾರೆ. ಅಲ್ಲದೆ ಜಗತ್ತಿನ ಶ್ರೀಮಂತ ಎಂಬ ಹೆಮ್ಮೆ ಕೂಡ ಎಲಾನ್ ಮಸ್ಕ್ ಹೆಸರಿನಲ್ಲೇ ಇದೆ. ಹೀಗಿದ್ದಾಗ ಡೊನಾಲ್ಡ್ ಟ್ರಂಪ್ ಗೆಲ್ಲಬೇಕು ಅಂತಾ ಈಗ ಎಲ್ಲಾ ರೀತಿಯ ಬೆಂಬಲ ನೀಡುತ್ತಿರುವ ಟೆಸ್ಲಾ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್, ಸದ್ಯ ಹಗಲು ರಾತ್ರಿ ಶ್ರಮ ವಹಿಸುತ್ತಿದ್ದಾರೆ. ಮತ್ತೊಂದು ಕಡೆ ಡೊನಾಲ್ಡ್ ಟ್ರಂಪ್ ಪರವಾಗಿ ನಿಂತು ಗೆಲುವಿಗಾಗಿ ಶ್ರಮಿಸುವವರಿಗೆ ಬರೋಬ್ಬರಿ 1 ಮಿಲಿಯನ್ ಡಾಲರ್ ಬಹುಮಾನ ನೀಡ್ತಿದ್ದಾರೆ.
ಎಲಾನ್ ಮಸ್ಕ್ ಮಾತ್ರ ಅಲ್ಲದೆ, ಹಾಲಿವುಡ್ ನಟರು & ಡಬ್ಲ್ಯೂಡಬ್ಲ್ಯೂಇ ಸ್ಟಾರ್ಸ್ ಹೀಗೆ ಡೊನಾಲ್ಡ್ ಟ್ರಂಪ್ ಅವರಿಗೆ ದೊಡ್ಡ ಪ್ರಮಾಣದ ಬೆಂಬಲ ಸಿಗುತ್ತಿದೆ. ಇನ್ನೊಂದು ಕಡೆಯಲ್ಲಿ ಕಮಲಾ ಹ್ಯಾರಿಸ್ ಕೂಡ ಭರ್ಜರಿ ಹೋರಾಟ ಪ್ರದರ್ಶನ ಮಾಡುತ್ತಿದ್ದು, ಮುಂದೆ ಯಾರು ಈ ಚುನಾವಣೆ ಯುದ್ಧದಲ್ಲಿ ಗೆಲ್ಲುತ್ತಾರೆ? ಎಂಬ ಕುತೂಹಲ ಮೂಡಿದೆ.












Click it and Unblock the Notifications