ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಕನ್ನಡ ಡಿಂಡಿಮ!

ಬೆಂಗಳೂರು, ಮೇ2: ಬೆಂಗಳೂರಿನಿಂದ ಸಿಂಗಾಪುರ ನಡುವೆ ನಿತ್ಯ ನೂರಾರು ಪ್ರಯಾಣಿಕರು ಸಂಚರಿಸುತ್ತಾರೆ. ಹೀಗಾಗಿ ಕನ್ನಡಿಗರೇ ಅಧಿಕ ಸಂಖ್ಯೆಯಲ್ಲಿ ಇರುತ್ತಾರೆಂಬ ಕಾರಣಕ್ಕೋ ಏನೋ ಸಿಂಗಪುರ್ ಏರ್ ಲೈನ್ಸ್ ವಿಮಾನದಲ್ಲಿ ಫುಡ್ ಮೆನು ಕನ್ನಡದಲ್ಲೇ ಒದಗಿಸುತ್ತಿದೆ. ಮಾತ್ರವಲ್ಲ, ಪ್ರಯಾಣಿಕರ ಎಲ್ಲ ಮಾಹಿತಿಯನ್ನು ಕನ್ನಡದಲ್ಲೇ ಉದ್ಘೋಷಿಸುತ್ತದೆ.

ಕರ್ನಾಟಕದ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಈ ಕುರಿತು ಟ್ವಿಟರ್ ಖಾತೆಯಲ್ಲಿ ಕನ್ನಡ ಭಾಷರಯಲ್ಲಿರುವ ಫುಡ್ ಮೆನು ಫೋಟೊ ಸಹಿತ ಮಾಹಿತಿ ಹಂಚಿಕೊಂಡಿದ್ದಾರೆ.ಸಿಂಗಾಪುರ ಏರ್‌ಲೈನ್ಸ್‌ಗೆ ಸೇರಿದ ವಿಮಾನವೊಂದರಲ್ಲಿ ಮೆನು ಹಾಗೂ ಹಾರಾಟದ ಕುರಿತು ಮಾಹಿತಿಕನ್ನಡದಲ್ಲಿ ಇರುವಾಗ ದೇಶೀಯ ವಿಮಾನಗಳಲ್ಲಿ ಕನ್ನಡದಲ್ಲಿ ಏಕೆ ಇರಬಾರದು ಎಂದು ಪ್ರಶ್ನೆ ಮಾಡಿದ್ದಾರೆ.

ಸಿಂಗಾಪುರದ ಏರ್‌ಲೈನ್ಸ್‌ನಲ್ಲಿ ನೀಡಲಾಗಿರುವ ಮೆನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದು, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಬೆಂಗಳೂರು ನಗರದಿಂದ ಇತರ ನಗರಗಳ ನಡುವೆ ಹಾರಾಟ ನಡೆಸುವ ದೇಶೀಯ ಹಾಗೂ ಇತರೆ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಕನ್ನಡವನ್ನು ಏಕೆ ಪಾಲಿಸಬಾರದು. ಅದೇನು ಅಷ್ಟು ಕಷ್ಟ ಎನಿಸುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

IAS officer tweets Kannada food menu in Singapore airlines

ಬೆಂಗಳೂರಿಗೆ ಹಾರಾಟ ನಡೆಸುವ ಮತ್ತೊಂದು ಅಂತಾರಾಷ್ಟ್ರೀಯ ಏರ್‌ಲೈನ್ಸ್‌ನಲ್ಲೂ ಕನ್ನಡದಲ್ಲಿ ಮೆನು, ಆನ್‌ಬೋರ್ಡ್ ಮನೋರಂಜನೆಯಲ್ಲೂ ಕನ್ನಡ ಸಿನಿಮಾಗಳು ಇವೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+