ಅಮೆರಿಕ: ಹೈದರಾಬಾದಿನ ವಿದ್ಯಾರ್ಥಿ ಕೊಲೆ, ರೂಂಮೇಟ್ ಬಂಧನ

Posted By:
Subscribe to Oneindia Kannada

ಟೆಕ್ಸಾಸ್ / ಹೈದರಾಬಾದ್, ಜುಲೈ 20: ಹೈದರಾಬಾದ್ ಮೂಲದ 25 ವರ್ಷ ವಯಸ್ಸಿನ ಗುಂಡಮ್ ಸಂಕೀರ್ಥ್ ಎಂಬ ವಿದ್ಯಾರ್ಥಿಯ ಹತ್ಯೆಗೆ ಸಂಬಂಧಿಸಿದಂತೆ ಸಾಯಿ ಸಂದೀಪ್ ಗೌಡ್ ಎಂಬ ಆತನ ರೂಮ್ ಮೇಟ್ ನನ್ನು ಬಂಧಿಸಲಾಗಿದೆ.

ಗುಂಡಮ್ ಸಂಕೀರ್ಥ್ ಅವರು ಹೈದರಾಬಾದಿನ ಸುಲ್ತಾನ್ ಬಜಾರ್​ ಸಮೀಪದ ಕಚಿಗುಡಾ ಮೂಲದವರಾಗಿದ್ದು, ಟೆಕ್ಸಾಸ್ ನ ಆಸ್ಟಿನ್ ನಿವಾಸಿಯಾಗಿದ್ದರು. ಕಳೆದ ತಿಂಗಳಷ್ಟೇ ಎಚ್ 1 ಬಿ ವೀಸಾ ಸಿಕ್ಕಿತ್ತು. ಯುಎಸ್ ನಲ್ಲಿ ನೆಲೆಸುವುದಾಗಿ ಖುಷಿಯಿಂದ ಹೈದರಾಬಾದಿನಲ್ಲಿದ್ದ ತನ್ನ ಪೋಷಕರಿಗೆ ಸ್ಕೈಪ್ ವಿಡಿಯೋ ಚಾಟ್ ಮೂಲಕ ಸಂಕೀರ್ಥ್ ತಿಳಿಸಿದ್ದ ಎಂದು ಸಂಕೀರ್ಥ್ ಅವರ ಸಂಬಂಧಿ ಕೆ ಶ್ರೀನಿವಾಸ್ ಹೇಳಿದರು.

Sankeerth G

ರೂಂಮೇಟ್ ಗಳ ಮೇಲೆ ಶಂಕೆ: ಜುಲೈ 18 ರಂದು ಘಟನೆ ನಡೆದಿದ್ದು, ಸಂಕೀರ್ಥ್ ಜತೆ ವಾಸಿಸುತ್ತಿದ್ದ ಸಾಯಿ ಸಂದೀಪ್ ಗೌಡ್ ಹಾಗೂ ಪ್ರಶಾಂತ್ ಎಂಬುವರ ಮೇಲೆ ಸಂಕೀರ್ಥ್ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದರು.

ಸಂಕೀರ್ಥ್ ಪೋಷಕರಾದ ಗುಂಡಮ್ ವಿಜಯ್ ಕುಮಾರ್ ಅವರು ಈಗಷ್ಟೇ ಕರುಳು ಬೇನೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಸುಧಾರಿಸಿಕೊಳ್ಳುತ್ತಿದ್ದಾರೆ, ತಾಯಿ ರಮಾದೇವಿ ಮಧುಮೇಹದಿಂದ ಬಳಲುತ್ತಿದ್ದಾರೆ. ಇಬ್ಬರಿಗೂ ಸಂಕೀರ್ಥ್ ಗೆ ಅಪಘಾತವಾಗಿದೆ ಕೋಮಾದಲ್ಲಿದ್ದಾನೆ ಎಂದು ಹೇಳಲಾಯಿತು. ನಂತರ ವಿಷಯ ಗೊತ್ತಾಗಿದೆ.

Sai Sandeep

ಕೊಲೆ ಹಿಂದಿನ ಉದ್ದೇಶ ತಿಳಿದಿಲ್ಲ, ಸಂಕೀರ್ಥ್ ಶವವನ್ನು ಕಾಚಿಗುಡಕ್ಕೆ ತರೆಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಂಕೀರ್ಥ್ ಅವರ ಅಂಕಲ್ ಸುಧಾಕರ್ ಹೇಳಿದ್ದಾರೆ.

ಟಿಕೆಆರ್ ಇಂಜಿನಿಯರ್ ಕಾಲೇಜಿನಲ್ಲಿ ಬಿಟೆಕ್ ಪಡೆದಿದ್ದ ಸಂಕೀರ್ಥ್, ಅಮೆರಿಕದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ. ಯುಎಸ್ ನಲ್ಲಿ ಕಳೆದ ಎರಡು ವರ್ಷಗಳಿಂದ ನೆಲೆಸಿದ್ದ ಸಂಕೀರ್ಥ್ ಡಿಸೆಂಬರ್ 2015 ರಲ್ಲಿ ಕೊನೆ ಬಾರಿ ಹೈದರಾಬಾದಿನ ತನ್ನ ಮನೆಗೆ ಬಂದಿದ್ದ. ಆದರೆ, ಸದಾಕಾಲ ಕುಟುಂಬದವರ ಜೊತೆ ಸಂಪರ್ಕದಲ್ಲಿ ಇರುತ್ತಿದ್ದ ಎಂದು ತಿಳಿದು ಬಂದಿದೆ. ಸದ್ಯ, ವಿಚಾರಣೆ ಬಳಿಕ ಪ್ರಶಾಂತ್ ಗೆ ಜಾಮೀನು ಸಿಕ್ಕಿದ್ದರೆ, ಸಾಯಿ ಸಂದೀಪ್ ಸೆರೆಮನೆಯಲ್ಲಿದ್ದಾನೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Gundam Sankeerth, 25, from Hyderabad, was allegedly stabbed to death by his roommate in Austin, Texas. Austin police have detained room-mate Sai Sandeep and shifted him to local prison, reports said.
Please Wait while comments are loading...