Get Updates
Get notified of breaking news, exclusive insights, and must-see stories!

ಅಮೆರಿಕದ ಫ್ಲೋರಿಡಾದಲ್ಲಿ ಚಂಡಮಾರುತ: ಭಯಾನಕ ದೃಶ್ಯಗಳು ವೈರಲ್

ಇಯಾನ್ ಚಂಡಮಾರುತ ಬುಧವಾರದಂದು ಅಮೆರಿಕದ ಫ್ಲೋರಿಡಾ ಕರಾವಳಿಗೆ ಅಪ್ಪಳಿಸಿದೆ. ಇದರ ಪರಿಣಾಮ ಫ್ಲೋರಿಡಾ ಧಾರಾಕಾರ ಮಳೆ ಮತ್ತು ತೀವ್ರ ವೇಗದಲ್ಲಿ ಗಾಳಿ ಬೀಸುತ್ತಿದೆ. ಚಂಡಮಾರುತದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದು ಯುಎಸ್‌ನಲ್ಲಿ ದಾಖಲಾದ ಅತ್ಯಂತ ಶಕ್ತಿಶಾಲಿ ಚಂಡಮಾರುತಗಳಲ್ಲಿ ಒಂದಾಗಿದೆ. ವರದಿಗಾರರು ಬಿರುಗಾಳಿಗೆ ನಿಂತುಕೊಳ್ಳಲು ಆಗದ ಮತ್ತು ಶಾರ್ಕ್‌ಗಳು ತೀರಕ್ಕೆ ಕೊಚ್ಚಿಹೋದ ವಿಡಿಯೋಗಳು ಬಹಿರಂಗಗೊಂಡಿವೆ. ಮಾತ್ರವಲ್ಲದೆ ಮರಗಿಡಗಳು ಬಿರುಗಾಳಿಗೆ ಹಾರಿಹೋಗುವ ದೃಶ್ಯಗಳು ಕಾಣಬಹುದು.

ಈ ಪ್ರದೇಶದಲ್ಲಿ ಸ್ಥಳೀಯರು ಸೆರೆಹಿಡಿದ ಕೆಲವು ದೃಶ್ಯಗಳು ಇಲ್ಲಿವೆ:

4 ಚಂಡಮಾರುತವು ಫ್ಲೋರಿಡಾ ಕರಾವಳಿಯನ್ನು ಅಪ್ಪಳಿಸಿದೆ. ಈ ವೇಳೆ ಗಂಟೆಗೆ 241 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದೆ. PowerOutage.us ಪ್ರಕಾರ ಫ್ಲೋರಿಡಾದಲ್ಲಿ 1.8 ದಶಲಕ್ಷಕ್ಕೂ ಹೆಚ್ಚು ಜನರು ವಿದ್ಯುತ್ ಇಲ್ಲದೆ ಕಾಲಕಳೆಯುತ್ತಿದ್ದಾರೆ. ಮೂರು ಗ್ರಾಮಗಳಲ್ಲಿನ ಪ್ರತಿಯೊಂದು ಮನೆ ಮತ್ತು ವ್ಯಾಪಾರವು ವಿದ್ಯುತ್ ಇಲ್ಲದೆ ಇತ್ತು ಎಂದು ವರದಿಗಳಾಗಿವೆ.

Hurricane in Florida, USA: Scary scenes go viral

ಚಂಡಮಾರುತದಿಂದ ಎಲೆಕ್ಟ್ರಿಕ್ ಟ್ರಾನ್ಸ್‌ಫಾರ್ಮರ್‌ಗಳು ಸ್ಫೋಟಗೊಂಡಿವೆ. ಚಂಡಮಾರುತದಿಂದಾಗಿ ಕ್ಯೂಬಾದಲ್ಲಿ ಇಬ್ಬರು ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಇದು ಫ್ಲೋರಿಡಾದಲ್ಲಿ ಭೂಕುಸಿತವನ್ನೂ ಉಂಟು ಮಾಡಿದೆ. ದೇಶದ ಎಲೆಕ್ಟ್ರಿಕಲ್ ಗ್ರಿಡ್ ಅನ್ನು ಸಹ ಹಾನಿಗೊಳಿಸಿದೆ. ಇದರಿಂದಾಗಿ 11 ಮಿಲಿಯನ್ ಜನರು ವಿದ್ಯುತ್ ಇಲ್ಲದೆ ಕಾಲಕಳೆಯುತ್ತಿದ್ದಾರೆ. ಮಾತ್ರವಲ್ಲದೆ ಚಂಡಮಾರುತ ಕರಾವಳಿಯನ್ನು ಸಮೀಪಿಸುತ್ತಿದ್ದಂತೆ ಫ್ಲೋರಿಡಾ ಕರಾವಳಿಯಲ್ಲಿ ದೋಣಿ ಮುಳುಗಿ 20 ಕ್ಯೂಬನ್ ವಲಸಿಗರು ನಾಪತ್ತೆಯಾಗಿದ್ದಾರೆ ಎಂದು ಯುಎಸ್ ಗಡಿ ಅಧಿಕಾರಿಗಳು ವರದಿ ಮಾಡಿದ್ದಾರೆ.

ಸರ್ಕಾರದ ನೆರವು

ಚಂಡಮಾರುತವು ಫ್ಲೋರಿಡಾದಲ್ಲಿ ಎಲ್ಲೆಡೆ ಭಾರಿ ಪ್ರವಾಹವನ್ನು ಉಂಟುಮಾಡಿದಾಗ, ಫೆಡರಲ್ ಸರ್ಕಾರವು ವೈದ್ಯಕೀಯ ತಂಡಗಳೊಂದಿಗೆ 300 ಆಂಬ್ಯುಲೆನ್ಸ್‌ಗಳನ್ನು ಕಳುಹಿಸಿತು. ಚಂಡಮಾರುತ ಹಾದುಹೋದ ನಂತರ 3.7 ಮಿಲಿಯನ್ ಊಟ ಮತ್ತು 3.5 ಮಿಲಿಯನ್ ಲೀಟರ್ ನೀರನ್ನು ಒದಗಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

"ಫ್ಲೋರಿಡಾವನ್ನು ಮತ್ತೆ ಸಹಜ ಸ್ಥಿತಿಗೆ ತರಲು, ಸ್ವಚ್ಛಗೊಳಿಸಲು ಮತ್ತು ಪುನರ್ನಿರ್ಮಾಣ ಮಾಡಲು ನಿಮಗೆ ಸಹಾಯ ಮಾಡಲು ಸರ್ಕಾರ ಇರುತ್ತದೆ" ಎಂದು US ಅಧ್ಯಕ್ಷ ಜೋ ಬಿಡೆನ್ ಜನರಿಗೆ ಭರವಸೆ ನೀಡಿದ್ದಾರೆ. 'ನಾವು ಪ್ರತಿ ಹಂತದಲ್ಲೂ ಇರುತ್ತೇವೆ. ಇದು ಫ್ಲೋರಿಡಾ ರಾಜ್ಯದ ಜನರಿಗೆ ನನ್ನ ಸಂಪೂರ್ಣ ಭರವಸೆಯಾಗಿದೆ' ಎಂದು ಅವರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+