ನೂರು ವರ್ಷದಲ್ಲಿ ಮತ್ತೊಂದು 'ಭೂಮಿ' ಹುಡುಕಿ, ಜೀವ ಉಳಿಸಿಕೊಳ್ಳಿ: ಹಾಕಿಂಗ್

Posted By:
Subscribe to Oneindia Kannada

ಲಂಡನ್, ಮೇ 5: ಇನ್ನು ನೂರು ವರ್ಷದೊಳಗೆ ಮನುಷ್ಯರು ವಾಸಿಸಬಹುದಾದ ಮತ್ತೊಂದು ಗ್ರಹವನ್ನು ಹುಡುಕಿಕೊಳ್ಳಬೇಕು ಎಂದು ಬ್ರಿಟಿಷ್ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೇಳಿದ್ದಾರೆ. ಹವಾಮಾನ ಬದಲಾವಣೆ, ಆಕಾಶಕಾಯಗಳ ದಾಳಿ ಹಾಗೂ ಹೆಚ್ಚುತ್ತಿರುವ ಜನಸಂಖ್ಯೆಯ ಕಾರಣಕ್ಕೆ ಹೊಸ ಗ್ರಹ ಹುಡುಕೊಕೊಳ್ಳುವುದು ಅನಿವಾರ್ಯ ಆಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಬಿಬಿಸಿ ಸುದ್ದಿ ವಾಹಿನಿ ಆರಂಭಿಸಿರುವ ಹೊಸ ವಿಜ್ಞಾನ ಸರಣಿ ಕಾರ್ಯಕ್ರಮದಲ್ಲಿ ಪ್ರೊ ಹಾಕಿಂಗ್ ಹಾಗೂ ಅವರ ಮಾಜಿ ವಿದ್ಯಾರ್ಥಿ ಕ್ರಿಸ್ಟೋಫ್ ಗಾಲ್ ಫರ್ಡ್ ಮಾನವರು ಬೇರೆ ಯಾವ ಗ್ರಹದಲ್ಲಿ ಬದುಕಲು ಸಾಧ್ಯತೆ ಇದೆ ಎಂಬ ಬಗ್ಗೆ ವಿಚಾರ ಮಂಡನೆ ಮಾಡಲಿದ್ದಾರೆ. ಭೂಮಿಯ ಸ್ಥಿತಿ ದಿನದಿನಕ್ಕೂ ಹದಗೆಡುತ್ತಿದೆ. ಆದ್ದರಿಂದ ಜೀವ ಉಳಿಸಿಕೊಳ್ಳುವುದಕ್ಕೆ ಇದನ್ನು ಬಿಟ್ಟುಹೋಗಬೇಕು ಎಂದಿದ್ದಾರೆ.[ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!]

Humans must leave Earth in 100 years to survive: Stephen Hawking

ಜೀವನದ ಮೇಲೆ ಪ್ರಭಾವ ಬೀರಿದ ಬ್ರಿಟನ್ ನ ಅತ್ಯುತ್ತಮ ಆವಿಷ್ಕಾರ ಯಾವುದು ಎಂಬ ಬಗ್ಗೆ ಮತ ಹಾಕಲು ಸಾರ್ವಜನಿಕರನ್ನು ಕೇಳುವುದು ಈ ಕಾರ್ಯಕ್ರಮದ ಮತ್ತೊಂದು ಉದ್ದೇಶ ಎಂದು ದ ಟೆಲಿಗ್ರಾಫ್ ವರದಿ ಮಾಡಿದೆ. ಕಳೆದ ತಿಂಗಳಷ್ಟೇ ಪ್ರೊ ಹಾಕಿಂಗ್ ಎಚ್ಚರ ಹೇಳಿದ್ದರು. ಮಾನವರ ಆಕ್ರಮಣಕಾರಿ ಧೋರಣೆ, ಬೆಳೆಯುತ್ತಿರುವ ತಂತ್ರಜ್ಞಾನ, ಅಣ್ವಸ್ತ್ರ ಅಥವಾ ಜೈವಿಕ ಅಸ್ತ್ರಗಳ ಸಂಭವನೀಯ ಯುದ್ಧಗಳು ನಮ್ಮನ್ನೆಲ್ಲ ನಾಶ ಮಾಡಬಹುದು ಎಂದಿದ್ದಾರೆ.[ಇರುವುದೊಂದೇ ಭೂಮಿ: ರಕ್ಷಣೆ ನಮ್ಮೆಲ್ಲರ ಹೊಣೆ]

ಈ ಅಪಾಯದಿಂದ ಪಾರಾಗಬೇಕು ಅಂದರೆ ಇಡೀ ಜಗತ್ತು ಒಂದಾಗಬೇಕು ಎಂದಿರುವ ಹಾಕಿಂಗ್, ತಾನು ಬದುಕಲು ಬೇಕಾದ ಕೌಶಲದ ಕೊರತೆ ಮನುಷ್ಯರಲ್ಲಿದೆ. ಅದನ್ನು ರೂಢಿಸಿಕೊಳ್ಳಬೇಕು ಎಂದು ಕೂಡ ಅವರು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Humans will need to colonise another planet within the next 100 years to survive climate change, asteroid strikes and overpopulation, according to renowned British physicist Stephen Hawking.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ