ಜೀವನಮಟ್ಟ ಸುಧಾರಿಸಿದರೆ ಮನುಷ್ಯರು 130 ವರ್ಷಗಳವರೆಗೂ ಬದುಕಬಹುದು; ಅಧ್ಯಯನ
ಇಟಲಿ, ಸೆಪ್ಟೆಂಬರ್ 29: ಆರೋಗ್ಯ ವ್ಯವಸ್ಥೆ ಹಾಗೂ ಜೀವನಮಟ್ಟ ಸುಧಾರಿಸಿದರೆ ಮನುಷ್ಯರು 130 ವರ್ಷಗಳವರೆಗೂ ಬದುಕಬಹುದು ಎಂದು ಅಧ್ಯಯನವೊಂದು ತಿಳಿಸಿದೆ.
ರಾಯಲ್ ಸೊಸೈಟಿ ಓಪನ್ ಸೈನ್ಸ್ ನಿಯತಕಾಲಿಕೆಯಲ್ಲಿ ಸಂಶೋಧಕರ ತಂಡ ಈ ಅಂಶದ ಕುರಿತು ಪ್ರಸ್ತಾಪಿಸಿದ್ದು, 108ನೇ ವಯಸ್ಸಿನಿಂದ ಬದುಕುವ ಸಂಭವನೀಯತೆ ಪ್ರತಿ ಹೆಚ್ಚುವರಿ ವರ್ಷ 50-50 ಇರುತ್ತದೆ ಎಂಬುದನ್ನು ಕಂಡುಕೊಂಡಿದ್ದಾರೆ. ಅದಾಗ್ಯೂ ಸುಧಾರಿತ ಜೀವನ ಮಟ್ಟದೊಂದಿಗೆ ಒಬ್ಬ ವ್ಯಕ್ತಿ 130 ವರ್ಷಗಳವರೆಗೂ ಬದುಕಬಹುದಾಗಿದೆ ಎಂದು ಸಂಶೋಧನೆ ತಿಳಿಸಿದೆ.
ಸುಮಾರು 130 ವರ್ಷಗಳವರೆಗೂ ಮಾನವನ ಜೀವಿತಾವಧಿ ಗರಿಷ್ಠವಿದೆ ಎಂಬುದಕ್ಕೆ ಬಲವಾದ ಪುರಾವೆಗಳು ದೊರೆತಿವೆ. ಪ್ರಸ್ತುತ ಶತಮಾನದಲ್ಲಿ ಸಾವಿನ ಗರಿಷ್ಠ ವಯಸ್ಸು 130 ವರ್ಷಗಳಿಗೆ ಏರಿಕೆಯಾಗುವಂತೆ ಹಲವು ಅಂಶಗಳು ಪ್ರಭಾವ ಬೀರಲಿವೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಮಾನವನ ಜೀವಿತಾವಧಿಗೆ ಯಾವುದೇ ಮಿತಿಯಿಲ್ಲ ಎಂಬುದನ್ನೂ ಸಂಶೋಧನೆ ಹೇಳಿದೆ. ಶತಾಯುಷಿಗಳ ಮೇಲೆ ನಡೆಸಿದ ಅಧ್ಯಯನಗಳಿಂದ ಈ ಅಂಶಗಳನ್ನು ಕಂಡುಕೊಳ್ಳಲಾಗಿದೆ.
ಆರಂಭಿಕ ವಿಶ್ಲೇಷಣೆಯಲ್ಲಿ, ಸಂಶೋಧನಾ ತಂಡವು ದೀರ್ಘಾಯುಷ್ಯದ ಕುರಿತಾದ ಅಂತರರಾಷ್ಟ್ರೀಯ ಅಂಕಿ ಅಂಶಗಳನ್ನು ವಿಶ್ಲೇಷಿಸಿದೆ. 13 ದೇಶಗಳ 1100ಕ್ಕಿಂತ ಹೆಚ್ಚಿನ ಶತಾಯುಷಿಗಳನ್ನು ಸಂಪರ್ಕಿಸಲಾಗಿದೆ. ನಂತರ ಸಂಶೋಧಕರು ಇಟಲಿಯಲ್ಲಿ ಜನವರಿ 2009 ರಿಂದ ಡಿಸೆಂಬರ್ 2015ರ ನಡುವೆ ಕನಿಷ್ಠ 105 ವಯಸ್ಸಿನ ಪ್ರತಿಯೊಬ್ಬರ ಮಾಹಿತಿಯನ್ನು ವಿಶ್ಲೇಷಣೆ ನಡೆಸಿ ಹಲವು ಅಂಶಗಳನ್ನು ಕಂಡುಕೊಂಡಿದೆ.
ಉತ್ತಮ ಜೀವನ ಮಟ್ಟವಿದ್ದರೆ ಹೆಚ್ಚಿನ ಜನರು 130 ವರ್ಷದವರೆಗೂ ಬದುಕುವ ಸಾಧ್ಯತೆಯಿದೆ ಎಂದು ಈ ವಿಶ್ಲೇಷಣೆಗಳಿಂದ ಕಂಡುಕೊಳ್ಳಲಾಗಿದೆ. ಈ ಶತಮಾನದಲ್ಲಿ ಹೆಚ್ಚಿನ ಜನರು ಶತಾಯುಷಿಗಳಾಗುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

ಪ್ರಸ್ತುತ ದಾಖಲೆಯಂತೆ, ಪ್ರಪಂಚದಲ್ಲೇ ಅತ್ಯಂತ ಹಿರಿಯ ವ್ಯಕ್ತಿ ಫ್ರೆಂಚ್ ಮಹಿಳೆ ಜೀನ್ ಕಾಲ್ಮೆಂಟ್ ಆಗಿದ್ದು, ಅವರು 1997ರಲ್ಲಿ ನಿಧನರಾಗುವ ಸಮಯ ಅವರಿಗೆ 122 ವಯಸ್ಸಾಗಿತ್ತು. ಕಾಲ್ಮೆಂಟ್ ಅವರ ವಯಸ್ಸಿನ ಕುರಿತು ಕೆಲವು ವಿವಾದಗಳು ಉಂಟಾಗಿದ್ದು, ಕೊನೆಗೆ ಅವರು ಸಾಯುವಾಗ ಅವರಿಗೆ 122 ವರ್ಷವಾಗಿತ್ತು ಎಂಬುದು ಸಾಬೀತಾಗಿತ್ತು.
ಜಪಾನ್‌ನ ಕೇನ್ ಟನಾಕಾ, 118 ವರ್ಷದವರೆಗೂ ಬದುಕಿದ್ದು, ದೀರ್ಘಕಾಲ ಬದುಕಿದವರಲ್ಲಿ ಒಬ್ಬರೆನಿಸಿಕೊಂಡಿದ್ದರು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications