Hong Kong: ಹಾಂಕಾಂಗ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 128ಕ್ಕೆ ಏರಿಕೆ...
ಎಲ್ಲೆಲ್ಲೂ ದುರಂತಗಳ ಸರಮಾಲೆ, ಜಾಗತಿಕವಾಗಿ ಹಾಂಕಾಂಗ್ ಅಗ್ನಿ ದುರಂತ ದೊಡ್ಡ ಭೀತಿ ಹುಟ್ಟುಹಾಕಿದೆ. ಅದ್ರಲ್ಲೂ ನೂರಾರು ಜನರ ಸಾವು ಈಗ ಕಣ್ಣೀರು ತರಿಸಿದೆ. ನೋಡ ನೋಡುತ್ತಲೇ ಇದೀಗ ಸಾವಿನ ಸಂಖ್ಯೆ 128ಕ್ಕೆ ಏರಿಕೆ ಆಗಿದೆ. ಜಾಗತಿಕ ಮಟ್ಟದಲ್ಲಿ ಸಂಭಿಸಿದ ಅತ್ಯಂತ ಘೋರ ದುರಂತಗಳ ಪೈಕಿ ಇದು ಕೂಡ ಒಂದಾಗಿದ್ದು, ವಸತಿ ಸಮುಚ್ಛಯ ಅಂದ್ರೆ ಅಪಾರ್ಟ್‌ಮೆಂಟ್ ಒಳಗೆ ವಾಸ ಮಾಡುವವರು ಇದೀಗ ಚಿಂತೆ ಮಾಡುವಂತೆ ಆಗಿದೆ. ಆಧುನಿಕ ಕಾಲಘಟ್ಟದಲ್ಲೂ ಈ ರೀತಿಯ ಘಟನೆ ಸಂಭವಿಸಿರುವುದು ಭಯ ಹೆಚ್ಚು ಮಾಡಿದೆ.
ಹೌದು, ಹಾಂಕಾಂಗ್ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ದುಬಾರಿ ಪ್ರದೇಶವಾಗಿದೆ. ಈ ಭಾಗದಲ್ಲಿ ವಾಸ ಮಾಡಲು ಜೇಬು ತುಂಬಾ ಕಾಸು ಇರಬೇಕು, ಇಲ್ಲವಾದರೆ ಹಾಂಕಾಂಗ್ ನೆಲದಲ್ಲಿ ಜೀವನ ಮಾಡುವುದು ತುಂಬಾ ಕಷ್ಟ. ಹೀಗಿದ್ದಾಗ ಅಪಾರ್ಟ್‌ಮೆಂಟ್ ಒಳಗೆ ಜೀವನ ಮಾಡ್ತಿದ್ದ ನೂರಾರು ಜನರು ಇದೀಗ ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿ ಹೋಗಿದ್ದು, ಪ್ರಪಂಚದ ಮೂಲೆ ಮೂಲೆಯಲ್ಲೂ ಈ ಘಟನೆ ಆತಂಕ ಹುಟ್ಟು ಹಾಕಿದೆ. ಅಪಾರ್ಟ್‌ಮೆಂಟ್ ಬಿಲ್ಡಿಂಗ್‌ಗೆ ಬೆಂಕಿಯ ಕಿಡಿ ತಾಗಿದ್ದು ಹೇಗೆ? ಇಷ್ಟು ಜನರ ಸಾವಿಗೆ ಕಾರಣ ಏನು? ಎಂಬ ಚರ್ಚೆಗಳ ನಡುವೆ ಇದೀಗ ಹಾಂಕಾಂಗ್ ಅಪಾರ್ಟ್‌ಮೆಂಟ್ ಬೆಂಕಿಯ ಸಾವಿನ ಸಂಖ್ಯೆ 128ಕ್ಕೆ ಏರಿಕೆ ಆಗಿದೆ.

ಜಾಗತಿಕವಾಗಿ ಭಯ ಹುಟ್ಟಿಸಿದ ಘಟನೆ
ಹಾಂಕಾಂಗ್ ಈ ಹಿಂದೆ ಹಲವು ವಿಚಾರಗಳಲ್ಲಿ ಭಾರಿ ದೊಡ್ಡ ಸದ್ದು ಮಾಡಿತ್ತು, ಆದರೆ ಇದೀಗ ಸಾವಿನ ವಿಚಾರದಲ್ಲೂ ಸಂಚಲನ ಸೃಷ್ಟಿ ಮಾಡುವ ಹಂತಕ್ಕೆ ಬಂದಿದೆ. ಈ ಮೂಲಕ, ಏಷ್ಯಾ ಖಂಡದ ಭಾಗದಲ್ಲಿ ಘೋರ ಅಗ್ನಿ ದುರಂತ ಒಂದು ಸಂಭವಿಸಿದ್ದು, ಅಪಾರ್ಟ್‌ಮೆಂಟ್ ಬಿಲ್ಡಿಂಗ್ ಒಳಗೆ ತಾಗಿದ ಬೆಂಕಿಯ ಕಿಡಿ ಸಾವಿನ ರುದ್ರ ನರ್ತನಕ್ಕೆ ಸಾಕ್ಷಿಯಾಗಿದೆ. ಈ ಮೂಲಕ ಅಮೆರಿಕ ಟು ಆಫ್ರಿಕಾ ನಿವಾಸಿಗಳು ಅಪಾರ್ಟ್‌ಮೆಂಟ್ ಒಳಗೆ ಫ್ಲಾಟ್ ಖರೀದಿ ಮಾಡಿ ಬದುಕಲು ಯೋಚನೆ ಮಾಡುವಂತೆ ಆಗಿದೆ. ನೋಡ ನೋಡುತ್ತಲೇ ಕಣ್ಣ ಎದುರಲ್ಲೇ ನೂರಾರು ಜನರು ಜೀವ ಬಿಟ್ಟ ಘಟನೆ ಸ್ಥಳೀಯರಲ್ಲಿ ಆತಂಕ ಹುಟ್ಟು ಹಾಕಿದೆ.
ಘೋರ ದುರಂತಕ್ಕೆ ಕಾರಣ ಏನು?
ಹಾಂಕಾಂಗ್ ಅಗ್ನಿ ದುರಂತದ ಕುರಿತು ಇದೀಗ ತನಿಖೆ ನಡೆಯುತ್ತಿದ್ದು, ಸ್ಥಳೀಯ ಸರ್ಕಾರದಿಂದ ಪರಿಹಾರ ಕಾರ್ಯಾಚರಣೆ ಸಾಗಿದೆ. ಅಲ್ಲದೆ ಈ ಘೋರ ದುರಂತಕ್ಕೆ ಕಾರಣ ಏನು? ಎಂಬ ಬಗ್ಗೆ ತನಿಖೆ ಶುರುವಾಗಿದೆ, ಸೂರು ಕಳೆದುಕೊಂಡ ಜನರಿಗೆ ಈಗ ತಾತ್ಕಾಲಿಕವಾಗಿ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಬಡವರು ವಾಸವಾಗಿದ್ದ ಜಾಗದಲ್ಲೇ ಈ ರೀತಿಯ ಘಟನೆ ನಡೆದಿರುವುದು ಭಯ ಹೆಚ್ಚು ಮಾಡಿದ್ದು, ಸ್ಥಳೀಯ ಅಧಿಕಾರಿಗಳು ಈ ರೀತಿ ಘಟನೆ ನಡೆಯದಂತೆ ಕ್ರಮವನ್ನ ಕೈಗೊಳ್ಳಲು ಸರ್ಕಾರ ಆದೇಶ ನೀಡಿದೆ.












Click it and Unblock the Notifications