California Wildfire: ಬೀದಿಗೆ ಬಿತ್ತು ಹಾಲಿವುಡ್ ಸ್ಟಾರ್‌ಗಳ ಬದುಕು!
ಪ್ರಪಂಚದ ಅತಿ ಶ್ರೀಮಂತ ದೇಶ & ಜಗತ್ತಿನ ದೊಡ್ಡಣ್ಣ ಅನ್ನೋ ಬಿರುದು ಪಡೆದಿದ್ದರೂ, ಅಮೆರಿಕದ ಪರಿಸ್ಥಿತಿ ಮಾತ್ರ ಹೀನಾಯವಾಗಿದೆ. ಯಾಕಂದ್ರೆ ಸಾಲು ಸಾಲು ಸಂಕಷ್ಟ ಇದೀಗ ಅಮೆರಿಕದ ಜನರನ್ನು ಬೆನ್ನತ್ತಿವೆ. ಪ್ರಾಕೃತಿಕ ವಿಕೋಪಗಳ ಬಿರುಗಾಳಿಗೆ ಸಿಲುಕಿ ಅಮೆರಿಕನ್ನರು ನರಳಿ ಹೋಗಿದ್ದಾರೆ. ಲಕ್ಷಾಂತರ ಜನರ ಬದುಕು ಬೀದಿಗೆ ಬಿದ್ದಂತೆ ಆಗಿದೆ. ಇದು ಸಾಮಾನ್ಯ ಅಮೆರಿಕನ್ ನಾಗರಿಕರ ಪರಿಸ್ಥಿತಿ ಮಾತ್ರವಲ್ಲ, ಹಾಲಿವುಡ್ ಸ್ಟಾರ್‌ಗಳ ಪರಿಸ್ಥಿತಿ ಕೂಡ ಈಗ ಹೀನಾಯವಾಗಿದೆ.
ಹಾಲಿವುಡ್ ಸಿನಿಮಾ ಸ್ಟಾರ್ಸ್ ಅಂದ್ರೆ ಬರೀ ದುಡ್ಡಿನ ಮೇಲೆ ಮಲಗುತ್ತಾರೆ, ಅವರಿಗೆ ಬೇಕು ಅಂತಾ ಅನಿಸುವ ಪ್ರತಿಯೊಂದು ವಸ್ತು ಕೂಡ ಖರೀದಿ ಮಾಡುವಷ್ಟು ಶಕ್ತಿ ಅವರಲ್ಲಿ ಇರುತ್ತದೆ, ಹೀಗೆ ಏನೇನೋ ಊಹೆಗಳು ಜಗತ್ತಿನಾದ್ಯಂತ ಇರುತ್ತವೆ. ಆದರೆ ಇದೀಗ ಅಮೆರಿಕದ ಕಾಡಿನ ಬೆಂಕಿ ಹಾಲಿವುಡ್ ಸಿನಿಮಾ ಸ್ಟಾರ್‌ಗಳ ಬಂಡವಾಳ ಬಯಲಾಗುವಂತೆ ಮಾಡಿದೆ. ಹಾಗಾದ್ರೆ ಅಸಲಿಗೆ ಆಗಿದ್ದಾದರೂ ಏನು? ಹಾಲಿವುಡ್ ಸಿನಿಮಾ ಸ್ಟಾರ್‌ಗಳ ಸಂಕಷ್ಟಕ್ಕೆ ಕಾರಣವಾದರೂ ಏನು? ಮುಂದೆ ಓದಿ.

ಹಾಲಿವುಡ್ ಸ್ಟಾರ್ಸ್ ಬದುಕು ಬೀದಿಗೆ!
ಕ್ಯಾಲಿಫೋರ್ನಿಯಾ & ಲಾಸ್ ಏಂಜಲೀಸ್ ಭಾಗದಲ್ಲಿ ಬೆಂಕಿ ಬಿದ್ದು ಜನರು ಪರದಾಡ್ತಿದ್ದು, ಸುಮಾರು 20,000ಕ್ಕೂ ಹೆಚ್ಚು ಮನೆ & ಕಟ್ಟಡಗಳು ಇದೀಗ ಕಾಡಿನ ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿ ಹೋಗಿವೆ. ಅದೇ ರೀತಿ ಈ ಕಾಡ್ಗಿಚ್ಚಿನ ಪರಿಣಾಮ ಹಾಲಿವುಡ್ ಸಿನಿಮಾ ಸ್ಟಾರ್ ಪಡೆ ಕೂಡ ನಲುಗಿ ಹೋಗಿದ್ದು, ತಮ್ಮ ಮನೆಗಳನ್ನು ಕಳೆದುಕೊಂಡು ಈಗ ಬೀದಿ & ಬೀದಿ ಅಲೆಯುವಂತೆ ಆಗಿದೆ.
ಮತ್ತೊಂದು ಕಡೆ, ನೂರಾರು ಕೋಟಿ ರೂಪಾಯಿ ಹಣವು ಬ್ಯಾಂಕ್‌ನಲ್ಲಿ ಕೊಳೆಯುತ್ತಿದ್ದರೂ ಹಾಲಿವುಡ್ ತಾರೆಗಳ ಕೈಯಲ್ಲಿ ಏನೂ ಮಾಡಲು ಆಗುತ್ತಿಲ್ಲ. ತುತ್ತು ಅನ್ನಕ್ಕೂ ಬೇರೆಯವರ ಬಳಿ ಬೇಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸಾಲು ಸಾಲು ಹಿಟ್ ಸಿನಿಮಾ ಕೊಟ್ಟು, ಕೋಟಿ ಕೋಟಿ ಅಭಿಮಾನಿಗಳನ್ನು ಸಂಪಾದಿಸಿರುವ ನಟ & ನಟಿಯರು ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ ಮತ್ತು ಪರದಾಡುತ್ತಿದ್ದಾರೆ.
ಬೇಕು ಬೇಕು ಅಂತಾ ಬೆಂಕಿ ಇಟ್ಟರಾ?
ಒಂದು ಕಡೆ ಹೀಗೆ ಬೆಂಕಿ ಹಬ್ಬಿಕೊಂಡಿದ್ದರೆ, ಮತ್ತೊಂದು ಕಡೆ ಅದನ್ನು ಆರಿಸಲು ಅಮೆರಿಕ ಅಧಿಕಾರಿಗಳು ಪರದಾಡುತ್ತಿದ್ದಾರೆ. ಹೀಗಿದ್ದಾಗ ಕಾಡಿಗೆ ಬೆಂಕಿ ಇಟ್ಟಿದ್ದು ಮನುಷ್ಯರಾ? ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಇದಕ್ಕೆ ಕಾರಣ ಆಗಿರುವುದು ಸೋಷಿಯಲ್ ಮೀಡಿಯಾ ಪೂರ್ತಿ ಹಬ್ಬಿರುವ ವಿಡಿಯೋಗಳು.
ಇದೀಗ ವೈರಲ್ ಆಗುತ್ತಿರುವ ವಿಡಿಯೋಗಳು, ಅಮೆರಿಕ ಕಾಡಿನ ಬೆಂಕಿಗೆ ಮನುಷ್ಯರೇ ಕಾರಣ ಎಂಬ ಆರೋಪಕ್ಕೆ ಪುಷ್ಠಿ ನೀಡುತ್ತಿವೆ. ಅಲ್ಲದೆ, ನೂರಾರು ರೀತಿ ಅನುಮಾನ ಮೂಡುವಂತೆ ಕೂಡ ಮಾಡಿದೆ. ಅಮೆರಿಕದ ಸರ್ಕಾರ ಕೂಡ ಇಂತಹ ಆರೋಪಗಳ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಮತ್ತೊಂದು ಕಡೆ ಜನರು ಅನ್ನ & ನೀರು ಅಂತಾ ಅಲೆದಾಡುವ ಸ್ಥಿತಿ ಎದುರಾಗಿದೆ.












Click it and Unblock the Notifications