ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಲ್ ಅವಿವ್ ನಲ್ಲಿ ಮೋದಿ ಭಾಷಣ: ಅವಿಸ್ಮರಣೀಯ 5 ಸಂಗತಿ

|
Google Oneindia Kannada News

ಟೆಲ್ ಅವಿವ್(ಇಸ್ರೇಲೆ), ಜುಲೈ 6: 'ಮೋದಿ... ಮೋದಿ...' ಇಸ್ರೇಲ್ ನ ಟೆಲ್ ಅವಿವ್ ಕನ್ವೆನ್ಶನ್ ಹಾಲ್ ತುಂಬ ಮೋದಿ ಜಪ! ತಮ್ಮ ಒಬ್ಬನೇ ಒಬ್ಬ ನಾಯಕನನ್ನಾದರೂ ಇಸ್ರೇಲಿನಲ್ಲಿ ನೋಡಬೇಕೆಂಬ ಎಪ್ಪತ್ತು ವರ್ಷಗಳ ಸುದೀರ್ಘ ಕಾತರ ಸಾಕಾರಗೊಂಡ ಕ್ಷಣ ಅದು.

ಹೌದು, ಜು.5 ರಂದು ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ನ ಟೆಲ್ ಅವಿವ್ ನಲ್ಲಿ ಭಾರತೀಯರನ್ನುದ್ದೇಶಿಸಿ ಮಾಡಿದ ಭಾಷಣ ಐತಿಹಾಸಿಕವೆನ್ನಿಸಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ.

ಯಹೂದಿ ಸಮುದಾಯ ಭಾರತವನ್ನು ಶ್ರೀಮಂತಗೊಳಿಸಿದೆ- ಮೋದಿಯಹೂದಿ ಸಮುದಾಯ ಭಾರತವನ್ನು ಶ್ರೀಮಂತಗೊಳಿಸಿದೆ- ಮೋದಿ

70 ವರ್ಷದ ನಂತರ ಭಾರತದ ಪ್ರಧಾನಿಯೊಬ್ಬರು ಪ್ರಪ್ರಥಮ ಬಾರಿಗೆ ಇಸ್ರೇಲಿಗೆ ತೆರಳಿರುವುದು ಜಗತ್ತಿನಾದ್ಯಂತ ಸುದ್ದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಮೂರು ದಿನಗಳ ಇಸ್ರೇಲ್ ಪ್ರವಾಸ ಹಲವು ಕಾರಣಗಳಿಂದಾಗಿ ಮಹತ್ವದ್ದೆನ್ನಿಸಿದೆ. ಕಳೆದ ಎರಡು ದಿನಗಳಲ್ಲಿ ಉಭಯ ದೇಶಗಳೂ, ಹಲವು ಒಪ್ಪಂದಗಳಿಗೆ ಸಹಿ ಮಾಡಿವೆ. ಮಾತ್ರವಲ್ಲ, ಪರಸ್ಪರ ಸಹಕಾರವನ್ನು ಬೇಡಿವೆ.

ಇಸ್ರೇಲ್-ಭಾರತದ ನಡುವೆ 7 ಮಹತ್ವದ ಒಪ್ಪಂದಗಳ ವಿನಿಮಯಇಸ್ರೇಲ್-ಭಾರತದ ನಡುವೆ 7 ಮಹತ್ವದ ಒಪ್ಪಂದಗಳ ವಿನಿಮಯ

ಹತ್ತು ಹಲವು ಮನರಂಜನೀಯ ಕಾರ್ಯಕ್ರಮಗಳ ಮೂಲಕ ಟೆಲ್ ಅವಿವ್ ಕನ್ವೆನ್ಶನ್ ಸೆಂಟರ್ ಮೋದಿಯವರ ಇಸ್ರೇಲ್ ಭೇಟಿಯನ್ನು ಹಾರ್ದಿಕವಾಗಿ ಸ್ವಾಗತಿಸಿತು. ಇಲ್ಲಿ ಸಾವಿರಾರು ಭಾರತೀಯರನ್ನು ಉದ್ದೇಶಿಸಿ ಮೋದಿ ಮಾಡಿದ ಭಾಷಣ ಅವೀಸ್ಮರಣೀಯ ಮತ್ತು ಐತಿಹಾಸಿಕ ಎನ್ನಿಸಿತು.

ಮೋದಿ... ಮೋದಿ...

ಮೋದಿ... ಮೋದಿ...

ಟೆಲ್ ಅವಿವ್ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆದ ಅದ್ಧೂರಿ ಸಮಾರಂಭಕ್ಕೆ ಮೋದಿ ಆಗಮಿಸುತ್ತಿದ್ದಂತೆಯೇ 'ಮೋದಿ ಜಪ' ಎಲ್ಲೆಲ್ಲೂ ಮೊಳಗುತ್ತಿತ್ತು. ನೆರೆದಿದ್ದ ಸಾವಿರಾರು ಜನರ ಬಾಯಿಂದಲೂ ಕೇಳಿ ಬರುತ್ತಿದ್ದ ಆ ಎರಡಕ್ಷರ, ಮೋದಿ... ಮೋದಿ... ಭಾರತೀಯ ನಾಯಕನೊಬ್ಬನ್ನು ಇಸ್ರೇಲಿನ ಭಾರತೀಯರು ಅದೆಷ್ಟು ಕಾತರದಿಂದ ಕಾಯುತ್ತಿದ್ದರು ಎಂಬುದಕ್ಕೆ ಅಲ್ಲಿ ಮೊಳಗುತ್ತಿದ್ದ ಧ್ವನಿಯೇ ಸಾಕ್ಷಿಯಾಗಿತ್ತು.

ಇಸ್ರೇಲ್ ನಲ್ಲಿ ಮೋದಿ: ಭಾರತಕ್ಕಾಗಲಿರುವ 10 ಪ್ರಯೋಜನಇಸ್ರೇಲ್ ನಲ್ಲಿ ಮೋದಿ: ಭಾರತಕ್ಕಾಗಲಿರುವ 10 ಪ್ರಯೋಜನ

ಕ್ಷಮೆ ಕೇಳಿದ ಮೋದಿ

ಕ್ಷಮೆ ಕೇಳಿದ ಮೋದಿ

ಮೋದಿ ಮಾತು ಆರಂಭಿಸುತ್ತಿದ್ದಂತೆಯೇ, ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ ಎಂಬ ಹಮ್ಮನ್ನೆಲ್ಲ ಮರೆತು, ಇಸ್ರೇಲಿನಲ್ಲಿರುವ ಭಾರತೀಯ ಕ್ಷಮೆ ಯಾಚಿಸಿದ್ದು ಅವರ ಸರಳತೆಗೆ, ಸೌಜನ್ಯಕ್ಕೆ ಸಾಕ್ಷಿಯಾಯಿತು. 'ಕ್ಷಮಿಸಿ, ಭಾರತೀಯ ಪ್ರಧಾನಿಯೊಬ್ಬ ಇಲ್ಲಿಗೆ ಬರುವುದಕ್ಕೆ ಎಪ್ಪತ್ತು ವರ್ಷ ಬೇಕಾಯಿತು, ಆ ಪಶ್ಚಾತ್ತಾಪ ನನಗಿದೆ. ಆದರೂ, ಕೊನೆಗೂ ಈ ಅವಕಾಶ ನನಗೆ ಒಲಿದು ಬಂತಲ್ಲ ಎಂಬ ಸಂತಸ ನನಗಿದೆ' ಎಂದ ಮೋದಿಯವರ ಮಾತಿಗೆ ನೆರೆದಿದ್ದ ಜನರೆಲ್ಲ ಕರತಾಡನದ ಮೂಲಕ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತೀಯರಿಗೆ ಅಭಯ ನೀಡಿದ ಮೋದಿ

ಭಾರತೀಯರಿಗೆ ಅಭಯ ನೀಡಿದ ಮೋದಿ

ಇಸ್ರೇಲಿನರಲ್ಲಿರುವ ಭಾರತೀಯರಿಗೆ ಅಗತ್ಯ ಸೌಲಭ್ಯಗಳನ್ನು ನೀಡುವಲ್ಲಿ ಭಾರತ ಮತ್ತು ಇಸ್ರೇಲ್ ಎರಡೂ ಬದ್ಧವಾಗಿದೆ. ನಾಗರಿಕತ್ವ ಅಥವಾ ಇನ್ಯಾವುದೇ ಸಮಸ್ಯೆಗಳನ್ನೂ ಬಗೆಹರಿಸುವಲ್ಲಿ ನಾವು ಸದಾ ನಿಮ್ಮೊಂದಿಗಿದ್ದೇವೆ ಎಂದು ನರೇಂದ್ರ ಮೋದಿ ಅಲ್ಲಿಯ ಭಾರತೀಯರಿಗೆ ಅಭಯ ನೀಡಿದರು.

ನಾವು ಸ್ನೇಹಿತರು!

ನಾವು ಸ್ನೇಹಿತರು!

ಭಾರತ ಮತ್ತು ಇಸ್ರೇಲ್ ಪರಸ್ಪರ ಆತ್ಮವಿಶ್ವಾಸ ಮತ್ತು ಸ್ನೇಹವನ್ನು ಹೊಂದಿವೆ. ನೀವಿಲ್ಲಿ ಪುರಿಮ್ ಎಂಬ ಹಬ್ಬ ಆಚರಿಸುವಾಗ ನಾವಲ್ಲಿ ಹೋಳಿ ಹಬ್ಬ ಆಚರಿಸುತ್ತೇವೆ, ನೀವಿಲ್ಲಿ ಹನುಕ್ಕ ಎಂಬ ಹಬ್ಬ ಆಚರಿಸುವಾಗ ನಅವು ದೀಪಾವಳಿ ಆಚರಿಸುತ್ತಿರುತ್ತೇವೆ... ಒಟ್ಟಿನಲ್ಲಿ ನಮ್ಮ ನಡುವೆ ಸಾಕಷ್ಟು ಸಾಮ್ಯವಿದೆ ಎಂದು ಮೋದಿ ಉಚ್ಚರಿಸುತ್ತಿದ್ದಂತೆಯೇ ನೆರೆದಿದ್ದ ಭಾರತೀಯರೆಲ್ಲ ಚಪ್ಪಾಳೆ ಮೂಲಕ ಅವರ ಮಾತನ್ನು ಒಪ್ಪಿಕೊಂಡರು.

ಭಾರತದೊಂದಿಗೆ ಬಾಂಧವ್ಯ ಮೂಡಲಿ

ಭಾರತದೊಂದಿಗೆ ಬಾಂಧವ್ಯ ಮೂಡಲಿ

ಇಲ್ಲಿನ ಹಲವು ಜನರು ಭಾರತದಿಂದ ಬಂದವರಿದ್ದೀರಾ. ನಿಮಗೆಲ್ಲ ಭಾರತದ ಸಂಸ್ಕೃತಿಯ ಬಗ್ಗೆ ಅರಿವಿದೆ. ಆದರೆ ಇಲ್ಲಿಯೇ ಹುಟ್ಟಿ ಬೆಳೆದವರಿಗೆ ಭಾರತದ ಜೊತೆ ಯಾವುದೇ ಸಂಪರ್ಕವಿಲ್ಲ. ಅಂಥವರು ಭಾರತದೊಂದಿಗೆ ಬಾಂಧವ್ಯ ವೃದ್ಧಿಸಿಕೊಲ್ಳುವಂತೆ ಮಾಡಬೇಕಿದೆ ಎಂದು ಮೋದಿ ಜನರಲ್ಲಿ ಮನವಿ ಮಾಡಿಕೊಂಡರು.

English summary
Indian Prime minister Narendra Modi's speech in Tel Aviv Convention center in Israel, in which he had addressed Indians, resides in Israel became a historical one for many reasons. In his 3 days visit Modi signed for many agreements with Israel. Israel prime minister benjamin netanyahu hearlty welcomes Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X