ಭಾರತೀಯರ ಬಗ್ಗೆ ಅಮೆರಿಕದ ಈತನಿಂದ ಉಡಾಫೆ ಮಾತು, ರೊಚ್ಚಿಗೆದ್ದ ಶತಕೋಟಿ ಇಂಡಿಯನ್ಸ್... H-1B Visa
ಅಮೆರಿಕ & ಭಾರತದ ಬಾಂಧ್ಯವಕ್ಕೆ ಮತ್ತೆ ಬೆಂಕಿ ಹಚ್ಚುವ ಕೆಲಸ ಮಾಡಿ, ಸ್ವತಃ ಅಮೆರಿಕದಲ್ಲೇ ಟೀಕೆಗೆ ಒಳಗಾಗಿದ್ದಾರೆ ಮಾರ್ಕ್ ಮಿಚೆಲ್. ಡೊನಾಲ್ಡ್ ಟ್ರಂಪ್ ಪರವಾಗಿ ಮಾತನಾಡುವ ಭರದಲ್ಲಿ, ರಾಸ್ಮುಸ್ಸೆನ್ ರಿಪೋರ್ಟ್ಸ್ ಮುಖ್ಯ ಸಮೀಕ್ಷೆಕಾರ ಹಾಗೂ ಅಮೆರಿಕದ ಪ್ರಸಿದ್ಧ ಸಂಪ್ರದಾಯವಾದಿ ನಿರೂಪಕ ಮಾರ್ಕ್ ಮಿಚೆಲ್ ಬಾಯಿಗೆ ಬಂದಂತೆ ಮಾತನಾಡಿದ್ದರು. ಅದರಲ್ಲೂ ಎಚ್1ಬಿ ವೀಸಾ ಹಾಗೂ ಅಮೇರಿಕ ಕಂಪನಿಗಳು ತಮ್ಮ ಕಾರ್ಯಪಡೆ ಅಂದರೆ ಕೆಲಸಗಾರರನ್ನು, ಭಾರತೀಕರಣ ಮಾಡುವುದು ಬಿಡಬೇಕು ಎಂದಿದ್ದರು. ಇದೇ ವಿಚಾರ ಈಗ ಬೆಂಕಿಯ ಕಿಡಿ ಹೊತ್ತಿಸಿ, ಹಲ್‌ಚಲ್ ಎಬ್ಬಿಸಿದೆ.
ಭಾರತೀಯರು ಅಮೆರಿಕ ಉದ್ಧಾರ ಮಾಡಲು ಬೆವರು ಹರಿಸಿದ್ದು, ಈಗಾಗಲೇ ಭಾರತ ನೆಲದಿಂದ ಹೋಗಿ ಕೋಟ್ಯಂತರ ಭಾರತೀಯರು ಅಮೆರಿಕದ ಅಭಿವೃದ್ಧಿಗೆ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಇಷ್ಟಾದರೂ ಅಮೆರಿಕದ ರಾಜಕೀಯ ನಾಕರಿಗೆ ಮಾತ್ರ ಭಾರತೀಯರು ಅಂದ್ರೆ ಅಲರ್ಜಿ ಹಾಗೂ ಭಾರತದ ಪ್ರಜೆಗಳಿಗೆ ವೀಸಾ ಕೊಡುವುದು ಅಂದ್ರೆ ಇಷ್ಟವಿಲ್ಲ. ಈ ಬಗ್ಗೆ ಸಕಾರಾತ್ಮಕ ಚರ್ಚೆಗಳು ನಡೆದರೆ ಪರವಾಗಿಲ್ಲ, ಆದರೆ ಇಲ್ಲೊಬ್ಬ ಮಹಾಶಯ ಬಾಯಿಗೆ ಬಂದಂತೆ ಮಾತನಾಡಿ ಬೆಂಕಿಯ ಕಿಡಿ ಹೊತ್ತಿಸಿದ್ದಾರೆ. ಮಾರ್ಕ್ ಮಿಚೆಲ್ ನೀಡಿದ್ದ ಒಂದೇ ಒಂದು ಹೇಳಿಕೆ ಈಗ ಸಂಚಲನವನ್ನೇ ಸೃಷ್ಟಿಸಿದೆ!

ಭಾರತೀಯರ ಕ್ಷಮೆ ಕೇಳುತ್ತಾರಾ ಮಾರ್ಕ್ ಮಿಚೆಲ್?
ಹೌದು ಮಾರ್ಕ್ ಮಿಚೆಲ್, ಜೀವನದಲ್ಲಿ ನಾನು ಇದಕ್ಕಿಂತ ಹೆಚ್ಚಿನದ್ದನ್ನ ಎಂದೂ ಬಯಸಿರಲಿಲ್ಲ & ಪ್ರಮುಖವಾದ ಸಂಸ್ಥೆಗಳು ಭಾರತೀಕರಣದಿಂದ ಮುಕ್ತವಾಗಲು ಸಹಾಯವನ್ನು ಮಾಡುವ ಹೊಸ ಕಾರ್ಪೊರೇಟ್ ಸಲಹಾ ಸಂಸ್ಥೆ ನಿರ್ಮಿಸುವುದು... ಎಂದು ಮಿಚೆಲ್ ಸೋಷಿಯಲ್ ಮೀಡಿಯಾ ಮೂಲಕ ಬರೆದುಕೊಂಡಿದ್ದರು. ಇದೇ ವಿಚಾರ ಕಿಚ್ಚು ಹೊತ್ತಿಸುವ ಮೂಲಕ ಇದೀಗ, ಮಾರ್ಕ್ ಮಿಚೆಲ್ ವಿರುದ್ಧ ಆಕ್ರೋಶ ಸ್ಫೋಟಗೊಳ್ಳುವಂತೆ ಮಾಡಿದೆ. ಇದರ ಜೊತೆಗೆ ಮಾರ್ಕ್ ಮಿಚೆಲ್ ಭಾರತೀಯರ ಕ್ಷಮೆ ಕೇಳಬೇಕು ಎಂಬ ಆಗ್ರಹ ಕೂಡ ಕೇಳಿಬರುತ್ತಾ ಇದೆ.












Click it and Unblock the Notifications