Greenland Future: ಗ್ರೀನ್‌ಲ್ಯಾಂಡ್ ಭವಿಷ್ಯದ ವಿಚಾರದಲ್ಲಿ ಯುರೋಪ್ ಒಕ್ಕೂಟದ ಒಗ್ಗಟ್ಟು, ಮುಂದಿನ ನಿರ್ಧಾರ ಏನು?

ಯುರೋಪ್ ಒಕ್ಕೂಟ ಇದೀಗ ಅದೊಂದು ವಿಚಾರದಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಲು ಸಜ್ಜಾಗಿದೆ. ಒಂದು ಕಡೆ ಅಮೆರಿಕ ಹೇಳುವ ಎಲ್ಲಾ ವಿಚಾರಕ್ಕೂ ಸರಿ, ಸರಿ ಎನ್ನುತ್ತಾ ಬಂದಿದ್ದ ಯುರೋಪ್‌ನಲ್ಲಿ ಇದೀಗ ಇಲ್ಲ & ಬೇಡ ಎನ್ನುವ ಧೈರ್ಯ ಮೂಡಲು ಕಾರಣ ಆಗಿರುವುದೇ ಗ್ರೀನ್‌ಲ್ಯಾಂಡ್ ವಿಚಾರ. ಏಕೆಂದರೆ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಅಮೆರಿಕ ಕೈಗೊಳ್ಳುತ್ತಿರುವ ನಿರ್ಧಾರಗಳು ಸಹಜವಾಗಿ ಇಡೀ ಯುರೋಪ್ ಒಕ್ಕೂಟಕ್ಕೆ ಆತಂಕ ಮೂಡುವಂತೆ ಮಾಡಿದೆ. ಮತ್ತೊಂದು ಕಡೆ ಈಗಾಗಲೇ ಹಲವಾರು ದೇಶಗಳು ಇದೇ ರೀತಿಯ ಒತ್ತಡ ಪರಿಸ್ಥಿತಿ ಎದುರಿಸಿ, ಸಂಕಷ್ಟ ಎದುರಿಸಿವೆ. ಇಂತಹ ಪರಿಸ್ಥಿತಿಯಲ್ಲಿ ನಮಗೆ ಅಂತಹ ಒತ್ತಡ ಬೇಡ ಎಂಬ ಕೂಗು ಕೂಡ ಯುರೋಪ್ ಒಕ್ಕೂಟದ ಕಡೆಯಿಂದ ಇದೀಗ ಕೇಳಿ ಬಂದಿದೆ.

ಯುರೋಪ್ ಒಕ್ಕೂಟ ಶತಮಾನಗಳ ಕಾಲ ಅಮೆರಿಕದ ಬೆನ್ನಿಗೆ ನಿಂತು, ಅಮೆರಿಕ ಕೈಗೊಳ್ಳುವ ಎಲ್ಲಾ ನಿರ್ಧಾರಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಮಾತ್ರ ಅಮೆರಿಕದ ನಿರ್ಧಾರ ಉಲ್ಟಾ ಹೊಡೆಯುತ್ತಿದೆಯಾ? ಎಂಬ ಅನುಮಾನ ಮೂಡಿಸಿದೆ. ಇದಕ್ಕೆ ಕಾರಣ ಆಗಿರುವುದು ಒಂದು ಗ್ರೀನ್‌ಲ್ಯಾಂಡ್ ವಿಚಾರ ಹಾಗೂ ಮತ್ತೊಂದು ಕಡೆ ಹೆಚ್ಚಿನ ತೆರಿಗೆ ವಿಚಾರದಲ್ಲಿ ನಡೆಯುತ್ತಿರುವ ಭಾರಿ ದೊಡ್ಡ ತಿಕ್ಕಾಟ. ಇದು ಸಾಲದು ಎನ್ನುವಂತೆ ರಷ್ಯಾ ಮತ್ತು ಉಕ್ರೇನ್ ಯುದ್ಧ ಕೂಡ ಯುರೋಪ್ ಒಕ್ಕೂಟವನ್ನು ಸಂಕಷ್ಟದ ಸರಮಾಲೆಗೆ ನೂಕಿದೆ. ಇದೇ ಕಾರಣಕ್ಕೆ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಮತ್ತೆ ರಿಸ್ಕ್ ಬೇಡ ಎಂಬ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ ಯುರೋಪ್ ದೇಶಗಳು.

Greenland Future

ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕದ ಕಣ್ಣು!

ಇಡೀ ಜಗತ್ತಿನಲ್ಲೇ ಅತ್ಯಂತ ದೊಡ್ಡ ದ್ವೀಪ ಎಂಬ ಖ್ಯಾತಿ ಪಡೆದಿರುವ ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕದ ಕಣ್ಣು ಬಿದ್ದು ಹಲವು ವರ್ಷಗಳೇ ಆಗಿದೆ. ಒಂದು ಕಡೆ ಈ ಜಾಗ ಅಮೆರಿಕಗೆ ಹತ್ತಿರದಲ್ಲೇ ಇದೆ ಎಂಬ ಕಾರಣ, ಮತ್ತೊಂದು ಕಡೆ ತಮ್ಮದೇ ಮಿತ್ರ ದೇಶಗಳಿಗೆ ಸೇರಿದ ಜಾಗ ಇದು ಎಂಬ ಸಲುಗೆ ಅಮೆರಿಕ ಈ ರೀತಿ ಗ್ರೀನ್‌ಲ್ಯಾಂಡ್ ಮೇಲೆ ಮುಗಿಬೀಳಲು ಕಾರಣ ಎನ್ನುತ್ತಾರೆ ತಜ್ಞರು. ಆದರೆ, ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಯುರೋಪ್ ಒಕ್ಕೂಟದ ಭಯ ಬೇರೆಯೇ ಇದೆ. ಡೆನ್ಮಾರ್ಕ್ ಹಿಡಿತದಲ್ಲಿ ಇರುವ ಈ ಜಾಗ ಪಾಶ್ಚಿಮಾತ್ಯ ದೇಶಗಳಿಗೆ ಸಾಕಷ್ಟು ಸಹಾಯಕವಾಗಿದೆ. ಹೀಗಿದ್ದಾಗ ದಿಢೀರ್ ಒಂದೇ ದೇಶಕ್ಕೆ ಈ ಜಾಗ ಸೇರಿಬಿಟ್ಟರೆ ಭವಿಷ್ಯದ ಪರಿಸ್ಥಿತಿ ಹೇಗೆ? ಎಂಬ ಚಿಂತೆ ಯುರೋಪ್ ದೇಶಗಳನ್ನು ಕಾಡುತ್ತಿದೆ.

ಇಂತಹ ಸ್ಥಿತಿಯಲ್ಲಿ ಹೇಗಾದರೂ ಮಾಡಿ ಅಮೆರಿಕದ ನಿರ್ಧಾರವನ್ನು ಬದಲಾಯಿಸುವುದು ಅಥವಾ ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕ ಮತ್ತೆ ಕಣ್ಣು ಹಾಕದಂತೆ ನೋಡಿಕೊಳ್ಳುವ ಪ್ರಯತ್ನವನ್ನು ಇದೀಗ ಯುರೋಪ್ ಆರಂಭಿಸಿದೆ. ಇದನ್ನ ಮಾಡದೇ ಇದ್ದರೆ ಯುರೋಪ್ ಒಕ್ಕೂಟ ಕೂಡ ಭವಿಷ್ಯದಲ್ಲಿ ಭಾರಿ ಒತ್ತಡ ಎದುರಿಸುವ ಸಾಧ್ಯತೆ ದಟ್ಟವಾಗಿದೆ. ಆದರೂ ಒಂದಲ್ಲ ಒಂದು ರೀತಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಗ್ರೀನ್‌ಲ್ಯಾಂಡ್ ಮೇಲೆ ಹಿಡಿತ ಸಾಧಿಸಲು ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾತು ಪದೇ ಪದೇ ಕೇಳಿಬರುತ್ತಲೇ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+