ಸೌದಿಯಿಂದ ಭಾರತೀಯ ಮನೆಗೆಲಸದವರಿಗೆ ಗುಡ್ ನ್ಯೂಸ್
ರಿಯಾದ್, ಡಿ. 9: ಈಚೆಗೆ ವಿದೇಶೀಯರಿಗೆ ಮನೆಯ ದಾರಿ ತೋರಿಸಿದ್ದ ಸೌದಿ ಅರೇಬಿಯಾ ಭಾರತದ ಕುರಿತು ಮೃದು ಧೋರಣೆ ತಾಳಿದೆ. ಭಾರತೀಯ ಮೂಲದವರನ್ನು ಸೌದಿ ಅರೇಬಿಯಾದಲ್ಲಿ ಮನೆಗೆಲಸಕ್ಕೆ ನೇಮಿಸಿಕೊಳ್ಳಲು ಸರ್ಕಾರವು ಒಪ್ಪಿಗೆ ನೀಡಿದೆ. ಇನ್ನು ಮುಂದೆ ಭಾರತ ಮೂಲದವರು ಮನೆಗೆಲಸಕ್ಕಾಗಿ ಸೌದಿಗೆ ನಿರಾತಂಕವಾಗಿ ತೆರಳಬಹುದು. [ಸೌದಿಯಲ್ಲೂ ಐಎಂ ನಿಷೇಧ]
ಈ ಕುರಿತು ಪಟ್ಟದ ರಾಜಕುಮಾರ ಸಲ್ಮಾನ್ ನೇತೃತ್ವದ ಸಚಿವರ ಸಮಿತಿಯು ನವದೆಹಲಿಯೊಂದಿಗೆ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದಲ್ಲಿ ಮನೆ ಮಾಲೀಕರು ಹಾಗೂ ಕೆಲಸಗಾರರ ಹಕ್ಕು ಮತ್ತು ಕರ್ತವ್ಯಗಳ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ ಎಂದು ಸೌದಿ ಅರೇಬಿಯಾದ ಹಜ್ ಹಾಗೂ ಹಂಗಾಮಿ ವಾರ್ತಾ ಸಚಿವ ಬಂದರ್ ಹಜ್ಜರ್ ತಿಳಿಸಿದ್ದಾರೆ. [ಭಾರತದ ಮೆಣಸಿನ ಕಾಯಿಗೆ ಸೌದಿಯಲ್ಲಿ ನಿಷೇಧ]

"ಎರಡೂ ದೇಶಗಳಲ್ಲಿ ಕೆಲಸಗಾರರ ನೇಮಕಾತಿ ಹಾಗೂ ನೇಮಕಾತಿಯ ವೆಚ್ಚ ನಿಯಂತ್ರಣದ ಕುರಿತು ಸ್ಪಷ್ಟ ನಿರ್ಧಾರ ತಳೆಯಲಾಗಿದೆ. ಈ ಒಪ್ಪಂದದ ಪ್ರಕಾರ ಮನೆಗೆಲಸಕ್ಕೆ ಬರುವವರು ಅಪರಾಧಿ ಹಿನ್ನೆಲೆ ಹೊಂದಿರಬಾರದು, ಮನೆಗೆಲಸದಲ್ಲಿ ತರಬೇತಿ ಹೊಂದಿರಬೇಕು, ದೇಶದ ಕಾನೂನು ಮತ್ತು ಸಂಪ್ರದಾಯಗಳನ್ನು ಹಾಗೂ ಔದ್ಯೋಗಿಕ ಒಪ್ಪಂದದ ನಿಯಮಗಳನ್ನು ಪಾಲಿಸಬೇಕು" ಎಂದು ಹಜ್ಜಾರ್ ತಿಳಿಸಿದ್ದಾರೆ. [ಸೌದಿಯಲ್ಲಿ ಮಂಡ್ಯದ ಮಾವಿಗೆ ಬೇಡಿಕೆ]












Click it and Unblock the Notifications