IGF ME&A 2024: ಬಾಫ್ಸ್ ಹಿಂದೂ ದೇವಾಲಯದಲ್ಲಿ ಜಾಗತಿಕ ನಾಯಕರ ಸಮಾಲೋಚನೆ
IGF ME&A 2024: IGF ನಾಯಕರ ಔತಣಕೂಟ ಕಾರ್ಯಕ್ರಮವು ಭಾರತ ಹಾಗೂ ಮಧ್ಯಪ್ರಾಚ್ಯದ ಪ್ರಮುಖ ಉದ್ದಿಮೆದಾರರನ್ನು ಒಂದೇ ವೇದಿಕೆಯಲ್ಲಿ ಸೇರಿಸಿತು. ಈ ಕಾರ್ಯಕ್ರಮದಲ್ಲಿ ಉದ್ಯಮಿಗಳ ನಡುವೆ ಅತ್ಯುತ್ತಮ ಸಂವಾದಗಳು ನಡೆದವು. ಇಲ್ಲಿನ ಅಬುಧಾಬಿ, ಯುಎಇ (Abu Dhabi, UAE)ನ ಐಕಾನಿಕ್ ಬಾಫ್ಸ್ (BAPS) ಹಿಂದೂ ಮಂದಿರದಲ್ಲಿ ಈ ಕಾರ್ಯಕ್ರಮ ನಡೆಯಿತು. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ವಿವಿಧ ದೇಶಗಳ ಗಣ್ಯ ಉದ್ಯಮಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಹಿಂದೂ ಮಂದಿರವು ವೈವಿಧ್ಯಮವಾಗಿದ್ದು ಹಾಗೂ ಪ್ರಪಂಚದ ಪ್ರಮುಖ ನಾಗರೀಕತೆಗಳನ್ನು ಪರಿಚಯಿಸುವ ಮಾದರಿಯಲ್ಲಿ ಇದನ್ನು ಕಟ್ಟಲಾಗಿದೆ. ದೇವಾಲಯದ ವಿನ್ಯಾಸವು ಎಲ್ಲಾ ಧರ್ಮೀಯರನ್ನು ಒಳಗೊಳ್ಳುವಂತೆ ಹಾಗೂ ಸಾಮರಸ್ಯವನ್ನು ಸಾರುವ ಸಂದೇಶವನ್ನು ನೀಡುತ್ತದೆ. ಈ ಕಾರ್ಯಕ್ರಮವು ಯುಎಇ ಮತ್ತು ಭಾರತದ ನಡುವಿನ ಬಾಂಧವ್ಯ ಮತ್ತು ಸಾಂಸ್ಕೃತಿಯ ಮೌಲ್ಯ ಹಾಗೂ ಮಹತ್ವವನ್ನು ಹಂಚಿಕೊಳ್ಳುವ ಪ್ರಮುಖ ವೇದಿಕೆಯಾಗಿ ಮಾರ್ಪಟ್ಟಿತ್ತು.

ಅಬುಧಾಬಿಯ ಹಿಂದೂ ಮಂದಿರದ ಪರಮಪೂಜ್ಯ ಬ್ರಹ್ಮವಿಹಾರಿ ಸ್ವಾಮೀಜಿಗಳು ಮಾತನಾಡಿ, ನಿಮ್ಮ ನಿಮ್ಮ ಕ್ಷೇತ್ರದಲ್ಲಿ ನೀವೆಲ್ಲ ಬೆಳೆಯಿರಿ, ನಾಯಕರಾಗಿ. ನಿಮ್ಮ ಹೃದಯದ ಮಾತನ್ನೂ ಕೇಳಿ. ನಿಮ್ಮ ಹೃದಯ ಹಾಗೂ ಮನಸ್ಸು ಕೇಳುವ ಮಾತುಗಳನ್ನೂ ಆಲಿಸಿ. ಇದರಿಂದ ಕೆಲವೊಮ್ಮೆ ಇಲ್ಲ ಆಗಲ್ಲ ಎನ್ನುವ ನಿರಾಕಾರಣೆಗಳು ಹೌದು ಎಂದು ಬದಲಾಗುತ್ತವೆ. ಇನ್ನು ಈ ಮಂದಿರವು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohammed bin Zayed Al Nahyan) ಅವರ ಸಹಕಾರ ಹಾಗೂ ನಾಯಕತ್ವದಿಂದ ಈ ಮಂದಿರ ನಿರ್ಮಾಣವಾಗಿದೆ. ಅವರ ಸಹಕಾರವಿಲ್ಲದೆ ಈ ಮಂದಿರ ನಿರ್ಮಾಣ ಕಾರ್ಯವು ಸಾಧ್ಯವಿರಲಿಲ್ಲ. ನಾವು ಪರಸ್ಪರ ನಂಬಿಕೆ ಮತ್ತು ಸಾಮರಸ್ಯದಿಂದ ಏನನ್ನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ.
ಯುಎಇಯಲ್ಲಿರುವ ಭಾರತದ ರಾಯಭಾರಿಯಾದ ಸಂಜಯ್ ಸುಧೀರ್ ಅವರು ಮಾತನಾಡಿ, ಈ ದೇವಾಲಯವು ಯುಎಇಯಲ್ಲಿ ಅತಿ ಹೆಚ್ಚು ಜನ ಭೇಟಿ ನೀಡುವ ಜಾಗಗಳಲ್ಲಿ ಒಂದಾಗಿದೆ. ಈ ದೇವಾಲಯವು ಸಾಮರಸ್ಯದ ಸಂಕೇತವಾಗಿದೆ. ಇದು ಕೇವಲ ದೇವಾಲಯ ಮಾತ್ರವಲ್ಲ. ದೂರದೃಷ್ಟಿ ಮತ್ತು ನಾಯಕತ್ವಕ್ಕೆ ಸಾಕ್ಷಿಯಾಗಿದೆ. ಇದನ್ನು ಮೊದಲು 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ್ದರು ಹಾಗೂ 2024ರಲ್ಲಿ ಅವರು ಉದ್ಘಾಟಿಸಿದ್ದರೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಐಜಿಎಫ್ ಸಂಸ್ಥಾಪಕ ಮತ್ತು ಅಧ್ಯಕ್ಷ ಮನೋಜ್ ಲಾಡ್ವಾ ಅವರು, 'ನಂಬಿಕೆ' ಎಂಬ ಮಾಂತ್ರಿಕ ಪದವು ನಮ್ಮನ್ನು ಒಟ್ಟಿಗೆ ಸೇರಿಸುತ್ತದೆ. ಭಾರತ-ಯುಎಇ ದೇಶಗಳ ನಡುವಿನ ಬಾಂಧವ್ಯಕ್ಕೆ ಇದು ಆಧಾರವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಸಂಬಂಧವು ಪ್ರವರ್ಧಮಾನಕ್ಕೆ ಬಂದಿದೆ ಹಾಗೂ ಬೆಳೆಯುತ್ತಿದೆ. ಈ ಮಹಾನ್ ಮಂದಿರದ ನಿರ್ಮಾಣವು ಮಾನವೀಯತೆ ಹಾಗೂ ಮನುಷ್ಯ ಮತ್ತು ಪ್ರಕೃತಿಯ ಸಾಮರಸ್ಯವನ್ನು ಸಂಕೇತಿಸುತ್ತದೆ. ಹಿಸ್ ಹೈನೆಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ಈ ವಿಶ್ವಾಸ ಮತ್ತು ಸ್ನೇಹದ ಸಂಕೇತವಾಗಿಯೂ ಇದು ಇದೆ ಎಂದಿದ್ದಾರೆ.
ಆಯುರ್ವೇದವು ಹಿಂದಿನ ಕಾಲದಲ್ಲಿ ಒಂದು ಸೇವೆಯಾಗಿತ್ತು. ಆಧುನಿಕ ಔಷಧವು ಭಿನ್ನವಾಗಿದೆ. ಆಯುರ್ವೇದದಲ್ಲಿ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದಾಗಿಸುವ ಶಕ್ತಿ ಇದೆ. ಇದನ್ನು ಮತ್ತೆ ಚಾಲ್ತಿಗೆ ತರುವ ಅವಶ್ಯಕತೆ ಇದೆ ಎಂದು ಫೈಸಲ್ ಕೊಟ್ಟಿಕೊಲ್ಲನ್ ಅವರು ಅಭಿಪ್ರಾಯಪಟ್ಟರು.
ಸುಹೇಲ್ ಸೇಠ್ ಅವರು ಮಾತನಾಡಿ, ಇಂದು ಬಿಎಪಿಎಸ್ ಮಂದಿರವು ಹಿಂದೂ ಮತ್ತು ಭಾರತೀಯ ಜೀವನ ವಿಧಾನದ ಪ್ರತಿಬಿಂಬವಾಗಿದೆ. ಈ ಮರುಭೂಮಿಯಲ್ಲಿ ಇದು ನಿಜವಾದ ಓಯಸಿಸ್ ಆಗಿದೆ. ಒಳ್ಳೆಯ ಆರೋಗ್ಯವು ಒಳ್ಳೆಯ ಆತ್ಮದ ಸಂಕೇತವಾಗಿದೆ ಎಂದರು.
'ಲಿಮಿಟ್‌ಲೆಸ್ ಹಾರಿಜಾನ್ಸ್' ಎಂಬ ವಿಷಯದ ಅಡಿಯಲ್ಲಿ, IGF ME&A ವ್ಯಾಪಾರದ ಪ್ರಮುಖ ನಾಯಕರ ಸಭೆಯನ್ನು ಕರೆಯಲಾಗಿದೆ. ಇದರಲ್ಲಿ ಭಾರತ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಸಹಯೋಗದಲ್ಲಿ ಜಾಗತಿಕ ಪಾಲುದಾರಿಕೆ, ತಂತ್ರಜ್ಞಾನ ಮತ್ತು ನಾವೀನ್ಯತೆ, ಹವಾಮಾನ ಮತ್ತು ಸುಸ್ಥಿರತೆ ಸೇರಿದಂತೆ ಒಂಬತ್ತು ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ. ಹೊಸ ಅವಕಾಶಗಳನ್ನು ಕಂಡುಕೊಳ್ಳು ಇದು ವೇದಿಕೆ ಆಗಲಿದೆ. ಇದರಲ್ಲಿ ನೀತಿ ನಿರೂಪಕರು, ಹೂಡಿಕೆದಾರರು ಹಾಗೂ ನವೋದ್ಯಮಿಗಳು ಭಾಗವಹಿಸಲಿದ್ದಾರೆ.
IGF ME&A 2024 ವಿಶೇಷವಾದ ನೆಟ್‌ವರ್ಕಿಂಗ್ ಅವಕಾಶಗಳನ್ನು ನೀಡಲಿದೆ. ಇದರಲ್ಲಿ ಒಂಬತ್ತು ಸ್ಟ್ರೀಮ್‌ಗಳಲ್ಲಿ 200 ಕ್ಕೂ ಹೆಚ್ಚು ಸ್ಪೀಕರ್‌ಗಳು ಹಾಗೂ 1000 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ಪ್ಯಾನಲ್ ಚರ್ಚೆಗಳು ಹಾಗೂ ಗಣ್ಯರು ಸ್ಪೂರ್ತಿದಾಯಕ ಭಾಷಣಗಳನ್ನು ಮಾಡಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷದ ಆರಂಭದಲ್ಲಿ ಈ ಮಂದಿರವನ್ನು ಉದ್ಘಾಟಿಸಿದರು. ಇನ್ನು ಕಾರ್ಯಕ್ರಮದಲ್ಲಿ ಯುಎಇಯ ಭಾರತದ ರಾಯಭಾರಿಗಳಾದ ಸಂಜಯ್ ಸುಧೀರ್ ಮತ್ತು ಪರಮಪೂಜ್ಯರಾದ ಬ್ರಹ್ಮವಿಹಾರಿ ಸ್ವಾಮಿಗಳು, ಅಬುಧಾಬಿಯ ಬಿಎಪಿಎಸ್ ಹಿಂದೂ ಮಂದಿರದ ಪ್ರಮುಖರು ಭಾಗವಹಿಸಿದ್ದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications