ಅಬ್ಬಬ್ಬಾ ಲಾಟರಿ.. ವಾರಕ್ಕೆ 4 ದಿನ ಮಾತ್ರ ಕೆಲಸ ಮಾಡಿ ಸಾಕು!
ಉದ್ಯೋಗಂ ಪುರುಷ ಲಕ್ಷಣಂ ಅನ್ನೋ ಮಾತನ್ನು ನೀವು ಕೇಳಿರುತ್ತೀರಿ, ಆದರೆ ಈ ಆಧುನಿಕ ಜಗತ್ತಿನಲ್ಲಿ ಮಹಿಳೆಯರು ಕೂಡ ಕಷ್ಟಪಟ್ಟು ಬೆವರು ಹರಿಸಿ ದುಡಿಯುತ್ತಾರೆ. ಹೀಗಾಗಿಯೇ ಕೆಲಸ ಮಾಡುವ ಅವಧಿ, ಅಂದ್ರೆ ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕು? ವಾರಕ್ಕೆ ಎಷ್ಟು ದಿನ ದುಡಿಯಬೇಕು? ಎಂಬುದು ಕೂಡ ಮುಖ್ಯವಾಗುತ್ತದೆ. ಹೀಗಿದ್ದಾಗಲೇ ವಾರಕ್ಕೆ 4 ದಿನ ಮಾತ್ರ ಕೆಲಸ ಮಾಡಿ ಅಂತಿದೆ ಸರ್ಕಾರ!
ಇತ್ತೀಚಿಗಷ್ಟೇ ದೇಶದ ಬಹುದೊಡ್ಡ ಉದ್ಯಮಿ ಇನ್ಫೋಸಿಸ್ ನಾರಾಯಣ ಮೂರ್ತಿ ಅವರು, ವಾರಕ್ಕೆ 70 ಗಂಟೆಗೂ ಹೆಚ್ಚು ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದು ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲದೆ ಇಷ್ಟು ಅವಧಿ ಕೆಲಸ ಮಾಡಿದರೆ ಯುವಕರಲ್ಲಿ ಹಲವಾರು ರೀತಿ ಕಾಯಿಲೆ ಬರುತ್ತದೆ ಎಂದು ತಜ್ಞರು ಕೂಡ ಸಲಹೆ ನೀಡಿದ್ದರು. ಇಷ್ಟೆಲ್ಲದರ ನಡುವೆ ವಾರಕ್ಕೆ 4 ದಿನ ಮಾತ್ರ ಕೆಲಸ ಮಾಡಿ ಅಂತಿದೆ ಸರ್ಕಾರ! ಹಾಗಾದರೆ ಇನ್ನುಮುಂದೆ ಕೇವಲ 4 ದಿನ ಕೆಲಸ ಮಾಡಿದ್ರೆ ಸಾಕಾ? ಪೂರ್ತಿ ಸಂಬಳ ಬರುತ್ತಾ? ಎಂಬ ಪ್ರಶ್ನೆ ಕಾಡುತ್ತಿದೆಯಾ ಹಾಗಾದರೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ವಾರಕ್ಕೆ 4 ದಿನ ಕೆಲಸ!
ಹೌದು, ಜರ್ಮನಿ ದೇಶದಲ್ಲಿ ವಾರಕ್ಕೆ 4 ದಿನ ಕಾರ್ಮಿಕರು ಕೆಲಸ ಮಾಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗುತ್ತಿದೆ. ಜರ್ಮನಿಯ ಹಲವು ಕ್ಷೇತ್ರಗಳಲ್ಲಿ ಉದ್ಯೋಗಿಗಳ ಕೊರತೆ ಕಾರಣಕ್ಕೆ ಈ ಹೊಸ ಪ್ರಯೋಗಕ್ಕೆ ಅಲ್ಲಿನ ಸರ್ಕಾರ ಈಗ ಮುಂದಾಗಿದೆ. ಅಲ್ಲದೆ ಹೀಗೆ ಮಾಡುವುದರಿಂದ ಉದ್ಯೋಗಿಗಳನ್ನ ಆರೋಗ್ಯಕರವಾಗಿ & ಸಂತೋಷದಿಂದ ಇರಿಸಿಕೊಳ್ಳುವಾಗ ಉತ್ಪಾದಕತೆ ಕೂಡ ಸುಧಾರಿಸುತ್ತಾ? ಎಂಬುದನ್ನು ನಿರ್ಧರಿಸಲು ಇದೀಗ ಜರ್ಮನಿ ಈ ಕ್ರಮ ಕೈಗೊಂಡು ಕ್ರಾಂತಿಕಾರಿ ಪ್ರಯೋಗಕ್ಕೆ ಮುಂದಾಗಿದೆ.
ಎಷ್ಟು ಕಂಪನಿಗಳಲ್ಲಿ ಈ ವ್ಯವಸ್ಥೆ?
ಒಟ್ಟು 45 ಕಂಪನಿಗಳನ್ನು ಒಳಗೊಂಡ ಈ ಕಾರ್ಯಕ್ರಮ ಹಲವು ಹೊಸತನ ಜಾರಿಗೆ ತಂದು ಕಾರ್ಮಿಕರಿಗೆ & ಉದ್ಯೋಗಿಗಳಿಗೆ ನೆಮ್ಮದಿ ನೀಡುವ ಸಾಧ್ಯತೆ ಇದೆ. ಇದರ ಜೊತೆ ಕಾರ್ಮಿಕ ಮಾರುಕಟ್ಟೆಯಲ್ಲಿ ನುರಿತ ಕಾರ್ಮಿಕರ ಕೊರತೆಯನ್ನ ಪರಿಹರಿಸುವ ಗುರಿಯನ್ನೂ ಹೊಂದಿದೆ. ಪೂರೈಕೆ & ಬೇಡಿಕೆಯ ನಡುವಿನ ಅಸಮತೋಲನವು ಉದ್ಯೋಗದಾತರು ಮತ್ತು ಉದ್ಯೋಗಿಗಳ ನಡುವೆ ಉದ್ವಿಗ್ನತೆ ಕೂಡ ಸೃಷ್ಟಿಯನ್ನ ಮಾಡುತ್ತಿದೆ. ಈ ಎಲ್ಲಾ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಲು ಜರ್ಮನಿ ಈಗ ಹೊಸ ಪ್ರಯೋಗಕ್ಕೆ ಮುಂದಾಗಿದೆ.

ಫೆಬ್ರವರಿ 1 ರಿಂದಲೇ ಜಾರಿಗೆ
ಇನ್ನು ನಾಳೆಯಿಂದ ಅಂದರೆ ಫೆಬ್ರವರಿ 1 ರಿಂದ ಆರಂಭ ಆಗುವ 6 ತಿಂಗಳ ಈ ಕಾರ್ಯಕ್ರಮ ಜಗತ್ತಿನಾದ್ಯಂತ ಗಮನ ಸೆಳೆದಿದೆ. ಹಾಗೇ ವಾರಕ್ಕೆ ಕೇವಲ 4 ದಿನ ಕೆಲಸ ಮಾಡಿದರೂ ಈ ರೀತಿ ಕೆಲಸ ಮಾಡುವ ಉದ್ಯೋಗಿಗಳಿಗೆ ಪೂರ್ತಿ ವೇತನ ಅಂದರೆ ಸಂಬಳ ಸಿಗಲಿದೆ ಅಂತಾ ಹೇಳಲಾಗಿದೆ. ಈ ಮೂಲಕ ಜರ್ಮನಿಯಲ್ಲಿ ಈ ಪ್ರಯೋಗ ಯಶಸ್ವಿ ಆದರೆ, ಮುಂದೆ ಈ ಕ್ರಮ ಜಗತ್ತಿನಾದ್ಯಂತ ಜಾರಿಗೆ ಬರಬಹುದು. ಭಾರತದಲ್ಲಿ ಕೂಡ ವಾರಕ್ಕೆ 4 ದಿನದ ಕೆಲಸ ಸಾಕು ಎಂಬ ನಿಯಮ ಬಂದರೆ ಸಾಕಪ್ಪಾ ಅಂತಿದ್ದಾರೆ ನೆಟ್ಟಿಗರು!
ಒಟ್ನಲ್ಲಿ ಆಧುನಿಕ ಕಾಲಘಟ್ಟದಲ್ಲಿ ಮನುಷ್ಯ ಹಲವು ರೀತಿಯ ಸಮಸ್ಯೆ ಎದುರಿಸುತ್ತಿದ್ದಾನೆ. ಆಹಾರ ಪದ್ಧತಿಯ ಬದಲಾವಣೆ ಹಾಗೂ ವಾತಾವರಣ ಬದಲಾವಣೆ ಪರಿಣಾಮ ಮನುಷ್ಯ ತನ್ನ ಸಾಮರ್ಥ್ಯ ಕಳೆದುಕೊಳ್ಳುತ್ತಿದ್ದಾನೆ. ಹೀಗಿದ್ದಾಗ ಕೆಲಸದ ಒತ್ತಡ ಕೂಡ ಹೆಚ್ಚಾಗುತ್ತಿದೆ ಇದು ಭವಿಷ್ಯಕ್ಕೆ ಮಾರಕ ಎಂಬ ಅಭಿಪ್ರಾಯಗಳು ತಜ್ಞರಿಂದ ಕೇಳಿಬಂದಿವೆ. ಹೀಗಿದ್ದಾಗಲೇ ಜರ್ಮನಿ ಇದೀಗ ತನ್ನ ದೇಶದ ಕಾರ್ಮಿಕರಿಗೆ ಹಾಗೂ ಉದ್ಯೋಗಿಗಳಿಗೆ ವಾರಕ್ಕೆ ಕೇವಲ 4 ದಿನ ಕೆಲಸ ಮಾಡಿ ಅಂತಿದೆ. ಹೀಗೆ ಇದು ಎಷ್ಟು ಸಕ್ಸಸ್ ಆಗುತ್ತೆ ಅಂತಾ ಕಾದು ನೋಡಬೇಕು.












Click it and Unblock the Notifications