• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15 ಮಹಿಳೆಯರ ಪೈಕಿ ಗೆದ್ದಿದ್ದು ಕೇವಲ ಒಬ್ಬಳೇ ಒಬ್ಬಳು ಧೈರ್ಯವಂತೆ..!

|
Google Oneindia Kannada News

ಗಲ್ಫ್ ರಾಷ್ಟ್ರಗಳ ಪೈಕಿ ಕುವೈತ್ ತನ್ನ ಶ್ರೀಮಂತಿಕೆಯಿಂದಲೇ ಹೆಸರು ಮಾಡಿದೆ. ಕುವೈತ್‌ನ ತೈಲ ಸಂಪತ್ತು ಆ ದೇಶವನ್ನು ಆಗರ್ಭ ಶ್ರೀಮಂತ ರಾಷ್ಟ್ರವನ್ನಾಗಿಸಿದೆ. ಆದರೆ ಇಂತಹ ದೇಶದಲ್ಲೂ ಮಹಿಳೆಯರಿಗೆ ಸಮಾನ ಸ್ಥಾನಮಾನ ಇಲ್ಲ ಎಂದರೆ ನೀವು ನಂಬಲೇಬೇಕು. ಅದರಲ್ಲೂ ಮಹಿಳೆಯರ ರಾಜಕೀಯ ಪ್ರವೇಶಕ್ಕೆ ಅಲ್ಲಿ ಸಾಕಷ್ಟು ಅಡೆತಡೆಗಳು ಇವೆ. ಅಕಸ್ಮಾತ್ ಕುವೈತ್‌ನಲ್ಲಿ ಮಹಿಳೆಯರು ರಾಜಕೀಯ ಪ್ರವೇಶಿಸಿದರೂ ಗೆದ್ದು ಬರುವುದು ದೊಡ್ಡ ಸಾಹಸವೇ ಸರಿ. ಇದಕ್ಕೆ ತಾಜಾ ಉದಾಹರಣೆ ಇದೀಗ ಅಂತ್ಯಗೊಂಡಿರುವ ಚುನಾವಣೆ.

ಕುವೈತ್ ಸಂಸತ್‌ಗೆ ನಡೆದ ಚುನಾವಣೆಯಲ್ಲಿ ಈ ಬಾರಿ ಸುಮಾರು 15 ಮಹಿಳೆಯರು ಸ್ಪರ್ಧಿಸಿದ್ದರು. ಆದರೆ ಈ ಪೈಕಿ ಗೆದ್ದಿರುವುದು ಕೇವಲ ಓರ್ವ ಮಹಿಳೆ. ಸಫಾ ಅಲ್ ಹಶೀಮ್ ಆ ಧೈರ್ಯವಂತೆ. ಪುರುಷ ಪ್ರಧಾನ ನಾಡಿನಲ್ಲಿ ಗೆದ್ದು ಬೀಗುತ್ತಿರುವ ಏಕೈಕ ಮಹಿಳೆ. ಅಮೆರಿಕದ ಪೆನ್ಸಿಲ್ವೇನಿಯಾ ವಿವಿ ಹಾಗೂ ಹಾರ್ವಡ್‌ ವಿವಿ ಡಿಪ್ಲೊಮೋ ಹೊಂದಿರುವ ಸಫಾ ಮೂಲತಃ ಉದ್ಯಮಿಯೂ ಹೌದು. ಆದರೆ ಸಮಾಜ ಸೇವೆ ತುಡಿತ ಸಫಾ ಅವರನ್ನು ರಾಜಕೀಯಕ್ಕೆ ದೂಡಿತ್ತು. ಹೀಗೆ ಕುವೈತ್‌ನಂತಹ ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಯಲ್ಲೂ ಸಫಾ ಮೋಡಿ ಮಾಡಿರುವುದು ದೊಡ್ಡ ಸಾಧನೆಯೇ ಸರಿ.

65 ಜನರಲ್ಲಿ ಒಬ್ಬಳೇ ಮಹಿಳೆ..!

65 ಜನರಲ್ಲಿ ಒಬ್ಬಳೇ ಮಹಿಳೆ..!

ಕುವೈತ್ ಸಂಸತ್ತು ಒಟ್ಟು 65 ಸದಸ್ಯ ಬಲವನ್ನು ಹೊಂದಿದೆ. ಈ 65 ಸಂಸತ್ ಸದಸ್ಯರ ಪೈಕಿ 50 ಸಂಸದರು ಜನರ ಮೂಲಕ ಆಯ್ಕೆಯಾಗುತ್ತಾರೆ. ಇನ್ನುಳಿದ 15 ಸಂಸದರು ನಾಮನಿರ್ದೇಶಿತರು. ಜನರಿಂದ ನೇರವಾಗಿ ಆಯ್ಕೆಯಾಗುವ ಈ 50 ಸಂಸದರಲ್ಲಿ ಗೆದ್ದು ಬೀಗಿದ್ದು ಸಫಾ ಮಾತ್ರ. ಇನ್ನುಳಿದ 14 ಮಹಿಳಾ ಸ್ಪರ್ಧಿಗಳು ಸೋತು ಹೋಗಿದ್ದಾರೆ. ಸಫಾ ಈ ಮೂಲಕ ಮೂರನೇ ಬಾರಿ ಕುವೈತ್ ಸಂಸತ್‌ಗೆ ಆಯ್ಕೆಯಾದ ಮಹಿಳೆ ಎಂಬ ಹೆಮ್ಮೆಯನ್ನೂ ಹೊಂದಿದ್ದಾರೆ. ತನ್ನದೇ ಸ್ವಂತ ಉದ್ಯಮವನ್ನು ಕಟ್ಟಿ ಬೆಳೆಸಿರುವ ಸಫಾ ಅಲ್ ಹಶೀಮ್ ಹಲವರಿಗೆ ಮಾದರಿ. ನೂರಾರು ಕಟ್ಟುಪಾಡುಗಳ ಮಧ್ಯೆ, ಎಲ್ಲವನ್ನೂ ಮೀರಿ ಗೆದ್ದು ಬರುವ ತಾಕತ್ತು ಸುಲಭದ ಮಾತಲ್ಲ. ಅದರಲ್ಲೂ ಮಹಿಳೆಯಾಗಿ ಸಫಾ ಅವರಿಗೆ ಎದುರಾದ ಕಷ್ಟಗಳು ಕೂಡ ನೂರಾರು.

8 ಲಕ್ಷ ಭಾರತೀಯರಿಗೆ ಕಟಂಕವಾದ ಕುವೈಟ್ Expat ಕಾನೂನು?8 ಲಕ್ಷ ಭಾರತೀಯರಿಗೆ ಕಟಂಕವಾದ ಕುವೈಟ್ Expat ಕಾನೂನು?

ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪ..!

ಪ್ರಧಾನಿ ವಿರುದ್ಧ ಭ್ರಷ್ಟಾಚಾರ ಆರೋಪ..!

ಕುವೈತ್ ಪ್ರಧಾನಿಯಾಗಿದ್ದ ಶೇಖ್ ಜಬೇರ್ ಮುಬಾರಕ್ ಅಲ್ ಸಬಾ ವಿರುದ್ಧ ಸಫಾ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈ ಆರೋಪದ ಹಿನ್ನೆಲೆಯಲ್ಲಿ ಸಫಾ ಅನುಭವಿಸಿದ ಕಷ್ಟಗಳು ಒಂದೆರಡಲ್ಲ. ಅದರಲ್ಲೂ ಪುರುಷ ಪ್ರಧಾನ ರಾಷ್ಟ್ರವಾಗಿರುವ ಕುವೈತ್‌ನಲ್ಲಿ, ಓರ್ವ ಮಹಿಳಾ ರಾಜಕಾರಣಿ ಮಾಡುತ್ತಿರುವ ಆರೋಪವನ್ನು ಅಲ್ಲಿನ ಸಮಾಜ ಸಹಿಸಲಿಲ್ಲ. ಆದರೆ ಇದೆಲ್ಲವನ್ನೂ ಧೈರ್ಯವಾಗಿ ಎದುರಿಸಿ ನಿಂತ ಗಟ್ಟಿಗಿತ್ತಿ ಸಫಾ. ಈಗ ಮತ್ತೆ ತಮ್ಮ ತಾಕತ್ತು ಏನು ಎಂಬುದನ್ನ ಸಫಾ ತೋರಿದ್ದಾರೆ. ಕೊರೊನಾ ಕರಿನೆರಳಲ್ಲೇ ನಡೆದ ಕುವೈತ್ ಚುನಾವಣೆಯಲ್ಲಿ ಸಫಾ ಗೆದ್ದುಬೀಗಿದ್ದಾರೆ. ಮತ್ತೊಮ್ಮೆ ಕುವೈತ್ ಫಾರ್ಲಿಮೆಂಟ್ ಮೆಟ್ಟಿಲು ಹತ್ತಲು ಸಜ್ಜಾಗಿದ್ದಾರೆ.

193 ರಾಷ್ಟ್ರಗಳ ಪೈಕಿ 184ನೇ ಸ್ಥಾನ..!

193 ರಾಷ್ಟ್ರಗಳ ಪೈಕಿ 184ನೇ ಸ್ಥಾನ..!

ಸಂಬಳದ ವಿಚಾರದಲ್ಲಿ, ಜನರ ಜೀವನಮಟ್ಟ ಹಾಗೂ ಶ್ರೀಮಂತಿಕೆಯ ವಿಚಾರದಲ್ಲಿ ಕುವೈತ್ ನಂಬರ್ ಒನ್. ಇಡೀ ಜಗತ್ತೇ ಅಮೆರಿಕದ ಡಾಲರ್ ಎದುರು ಸೊರಗುತ್ತಾ ಹೋಗುತ್ತಿದೆ. ಆದರೆ ಕುವೈತ್‌ನ ಕರೆನ್ಸಿ ಮಾತ್ರ, ಅಮೆರಿಕನ್ ಡಾಲರ್ ಎದುರು ಬಲಿಷ್ಠವಾಗಿದೆ. ಭಾರತೀಯರು 1 ಡಾಲರ್‌ಗೆ ಸುಮಾರು 74 ರೂಪಾಯಿ ಕೊಡಬೇಕು. ಆದರೆ ಕುವೈತ್ ದಿನಾರ್ ಅಂದರೆ ಕುವೈತ್ ಕರೆನ್ಸಿ ಎದುರು ಅಮೆರಿಕನ್ ಡಾಲರ್ ಕೂಡ ಪಲ್ಟಿ ಹೊಡೆಯುತ್ತದೆ.

 ಸಾಮಾಜಿಕ ಸಮಾನತೆ ಮಾತ್ರ ಮರೀಚಿಕೆ

ಸಾಮಾಜಿಕ ಸಮಾನತೆ ಮಾತ್ರ ಮರೀಚಿಕೆ

1 ಕುವೈತ್ ದಿನಾರ್‌ಗೆ ಸುಮಾರು 3.5 ಡಾಲರ್ ಕೊಡಬೇಕು ಎಂದರೆ ನಂಬಲೇಬೇಕು..! ಅಷ್ಟಕ್ಕೂ ಈ ಪೀಠಿಕೆ ಕೊಟ್ಟಿದ್ದು ಕುವೈತ್‌ನ ಶ್ರೀಮಂತಿಕೆ ಹೊಗಳುವುದಕ್ಕೆ ಅಲ್ಲ, ಬದಲಾಗಿ ಅಲ್ಲಿ ಇಷ್ಟೆಲ್ಲಾ ಸೌಲಭ್ಯ ಇದ್ದರೂ ಸಾಮಾಜಿಕ ಸಮಾನತೆ ಮಾತ್ರ ಮರೀಚಿಕೆಯಾಗಿದೆ. ಅದರಲ್ಲೂ ಲಿಂಗ ಸಮಾನತೆಯ ವಿಚಾರದಲ್ಲಿ ಕುವೈತ್ ತೀರಾ ಹಿಂದುಳಿದಿದೆ. ಪ್ರತಿಯೊಂದು ವಿಚಾರದಲ್ಲಿ ನಂಬರ್ ಒನ್ ಆಗಿರುವ ಈ ದೇಶ, ಮಹಿಳಾ ರಾಜಕಾರಣಿಗಳ ವಿಚಾರದಲ್ಲಿ 184ನೇ ಸ್ಥಾನದಲ್ಲಿ ಇದೆ ಎಂದರೆ ಆಶ್ಚರ್ಯವಾಗಬಹುದು.

English summary
Gender inequality persists in Kuwait, an oil-rich country. Only 1 woman won out of 15 women contested for Kuwait parliamentary election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X