Gaza Peace: ಗಾಜಾ ಪಟ್ಟಿ ಹಸ್ತಾಂತರ ವಿಚಾರದಲ್ಲಿ ಇಸ್ರೇಲ್ ದಿಟ್ಟ ನಿರ್ಧಾರ, ಹಮಾಸ್ ಸೈಲೆಂಟ್?
ಗಾಜಾ ಪಟ್ಟಿ ಇದೀಗ ಒಂದಷ್ಟು ನೆಮ್ಮದಿ ನೋಡುವ ದಿನಗಳು ಬರುತ್ತಿವೆ, ಹಮಾಸ್ ಮತ್ತು ಇಸ್ರೇಲ್ ಸೇನೆ ನಡುವೆ ಯುದ್ಧ ಶುರುವಾದ ನಂತರ ಇಡೀ ಗಾಜಾ ಪಟ್ಟಿ ಹಿಂಸಾಚಾರದ ಬೆಂಕಿಗೆ ಧಗಧಗಿಸಿದೆ. ಲಕ್ಷಾಂತರ ಜನರ ಬದುಕು ಬೀದಿಗೆ ಬೀಳುವ ವಾತಾವರಣ ನಿರ್ಮಾಣ ಆಗಿದೆ, ಹತ್ತಾರು ಸಾವಿರ ಜನ ಈ ಯುದ್ಧದಲ್ಲಿ ಜೀವ ಬಿಟ್ಟಿದ್ದಾರೆ. ಹೀಗಿದ್ದಾಗ ಹಮಾಸ್ ಮೇಲೆ ಹಿಡಿತಕ್ಕೆ ಇಸ್ರೇಲ್ ಹಲವು ಪ್ಲಾನ್ ಜಾರಿಗೆ ತರಲು ನಿರ್ಧಾರ ಮಾಡಿದೆ. ಅದರಲ್ಲೂ ಗಾಜಾ ಪಟ್ಟಿ ಹಸ್ತಾಂತರ ವಿಚಾರದಲ್ಲಿ ಇಸ್ರೇಲ್ ದಿಟ್ಟ ನಿರ್ಧಾರವನ್ನ ಇದೀಗ ಕೈಗೊಂಡಿದ್ದು, ಹಮಾಸ್ ಹವಾ ಸೈಲೆಂಟ್ ಆಗುತ್ತಾ?
ಗಾಜಾ ಪಟ್ಟಿಯಲ್ಲಿ ಯುದ್ಧ ಶುರುವಾಗಲು ಮತ್ತು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಆಗಿದ್ದೇ ಹಮಾಸ್ ಮಾಡಿದ ಅದೊಂದು ಕೃತ್ಯ. 2023 ಇನ್ನೇನು ಮುಗಿಯುವ ಹಂತದಲ್ಲಿ ಇದ್ದಾಗ ಶುರುವಾಗಿದ್ದ ಹಮಾಸ್ ಮತ್ತು ಇಸ್ರೇಲ್ ಕದನ ಗಾಜಾ ಪಟ್ಟಿಗೆ ಈ ಪರಿಸ್ಥಿತಿ ಬರುವಂತೆ ಮಾಡಿದೆ. ಅದರಲ್ಲೂ ಈ ವಾತಾವರಣ ಸೃಷ್ಟಿ ಮಾಡಿದ್ದ ಹಮಾಸ್ ನಾಯಕರನ್ನು ಹಾಗೂ ಇಸ್ರೇಲ್ ಮೇಲೆ ದಾಳಿಗೆ ಪ್ರೇರಣೆ ನೀಡಿದ್ದವರನ್ನು ಈಗಾಗಲೇ ಇಸ್ರೇಲ್ ಮುಗಿಸಿದೆ. ಇಷ್ಟೆಲ್ಲದರ ನಡುವೆಯೇ ಭವಿಷ್ಯದಲ್ಲಿ ಕೂಡ ಹಮಾಸ್ ಮತ್ತೆ ತಲೆ ಎತ್ತದಂತೆ ಮಾಡಲು ಇಸ್ರೇಲ್ ಈಗ ಹೊಸ ರಣತಂತ್ರ ಹೆಣೆದಿದೆ. ಗಾಜಾ ಮೇಲಿನ ಪೂರ್ಣ ಹಿಡಿತವನ್ನು ಹಮಾಸ್ ಕೈಯಿಂದ ಕಿತ್ತುಕೊಳ್ಳಲು ಸಜ್ಜಾಗಿದೆಯಾ ಇಸ್ರೇಲ್?

ಹಮಾಸ್ ಕೈಯಿಂದ ಅಧಿಕಾರ ವರ್ಗಾವಣೆ
ಗಾಜಾ ಪಟ್ಟಿಯಲ್ಲಿ ಹೊಸ ಆಡಳಿತ ತರಲು ಹಾಗೂ ಪ್ರಮುಖ ಬದಲಾವಣೆ ಮಾಡಲು ಇಸ್ರೇಲ್ ಮತ್ತು ಅಮೆರಿಕ ನಿರ್ಧರಿಸಿದೆ. ಪ್ರಮುಖವಾಗಿ ಗಾಜಾ ಆಡಳಿತ ನಿರ್ವಹಣೆಗೆ ತಂತ್ರಜ್ಞರ ಹೊಸ ಸಮಿತಿಯನ್ನೇ ರಚನೆ ಮಾಡಲಾಗುತ್ತಿದೆ. ಇದೇ ತಂತ್ರಜ್ಞರ ಹೊಸ ಸಮಿತಿಗೆ ಹಮಾಸ್ ತನ್ನ ಬಳಿ ಇರುವ ಗಾಜಾ ಪಟ್ಟಿ ಅಧಿಕಾರವನ್ನ ಹಸ್ತಾಂತರ ಮಾಡಿಸಲು ಈಗ ನಿರ್ಧಾರ ಕೈಗೊಳ್ಳಲಾಗಿದ್ದು, ಆದರೆ ಮೂಲ ಅಧಿಕಾರ ಹಮಾಸ್ ಕೈಯಲ್ಲೇ ಇರಲಿದೆಯಂತೆ. ಈಗಾಗಲೇ ಹಮಾಸ್ ಗಾಜಾ ಪಟ್ಟಿಯಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪ್ರದೇಶದ ನಿಯಂತ್ರಣ ಕಳೆದುಕೊಂಡಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಧ್ಯಸ್ಥಿಕೆ ವಹಿಸಿದ್ದ 2025 ಅಕ್ಟೋಬರ್ ಕದನ ವಿರಾಮ ಒಪ್ಪಂದ ಸಾಕಷ್ಟು ಬದಲಾವಣೆಗೆ ನಾಂದಿ ಹಾಡಿತ್ತು.
ಗಾಜಾ ಶಾಂತಿ ಮಂಡಳಿ ಸ್ಥಾಪನೆ
ಅಮೆರಿಕ ಅಧ್ಯಕ್ಷರು ಈಗಾಗಲೇ ಮಹತ್ವದ ಗಾಜಾ ಶಾಂತಿ ಮಂಡಳಿ ಸ್ಥಾಪನೆ ಮಾಡಿದ್ದು, ಈ ಮಂಡಳಿ ಮೂಲಕ ಗಾಜಾ ಪಟ್ಟಿಯಲ್ಲಿ ಶಾಂತಿ ನೆಲೆಸುವಂತೆ ಮಾಡುವ ಉದ್ಧೇಶ ಹೊಂದಿರುವುದಾಗಿ ತಿಳಿಸಿದ್ದರು. ಒಟ್ಟು 20 ಅಂಶಗಳ ಯೋಜನೆ ರೂಪಿಸಲಾಗಿದ್ದು, ಈ ಯೋಜನೆ ಆಧಾರದಲ್ಲೇ ಯುದ್ಧ ನಿಲ್ಲಿಸಿ ಶಾಂತಿ ನೆಲೆಸುವಂತೆ ಮಾಡಲು ಅಮೆರಿಕ ಮುಂದಾಗಿದೆ. ಇಸ್ರೇಲ್ ಕೂಡ ಈ ಕಾರ್ಯಕ್ಕೆ ಬೆನ್ನಿಗೆ ನಿಂತಿದ್ದು, ಜಗತ್ತಿನ ಹಲವು ಘಟಾನುಘಟಿ ದೇಶಗಳು ಕೂಡ ಬೆಂಬಲ ಕೊಡುತ್ತಿವೆ. ಹಾಗೇ ಈ ಬಾರಿ ಗಾಜಾದಲ್ಲಿ ಹಮಾಸ್‌ನ ನಿಶ್ಯಸ್ತ್ರೀಕರಣ ಕೂಡ ನೆರವೇರುವುದು ಬಹುತೇಕ ಗ್ಯಾರಂಟಿ ಆಗಿದೆ.












Click it and Unblock the Notifications