ಫ್ರಾನ್ಸ್ ಪೊಲೀಸರ ಮೇಲೆ ವಾಹನ ದಾಳಿ, 6 ಸೈನಿಕರಿಗೆ ಗಾಯ
ಪ್ಯಾರಿಸ್, ಆಗಸ್ಟ್ 9: ರಾಜಧಾನಿ ಪ್ಯಾರಿಸ್ ನಲ್ಲಿ ಫ್ರಾನ್ಸ್ ಸೈನಿಕರಿಗೆ ಅಪರಿಚಿತ ವಾಹನವೊಂದು ಗುದ್ದಿದ ಪರಿಣಾಮ ಆರು ಸೈನಿಕರು ಗಾಯಗೊಂಡಿದ್ದಾರೆ.
ಪ್ಯಾರಿಸ್ ಹೊರವಲಯದ ಲೆವಲ್ಲೋಸ್-ಪೆರೆಟ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗುದ್ದಿ ಪರಾರಿಯಾಗಿರುವ ಅಪರಿಚಿತ ವಾಹನದ ಹುಡುಕಾಟ ಕಾರ್ಯಾಚರಣೆಯನ್ನು ಪ್ಯಾರಿಸ್ ಪೊಲೀಸರು ಆರಂಭಿಸಿದ್ದಾರೆ.

"ಪೊಲೀಸ್ ಕಾರ್ಯಾಚರಣೆ ನಡೆಯುತ್ತಿದೆ. ವಾಹನಕ್ಕಾಗಿ ಹುಡುಕಾಟ ನಡೆಸಲಾಗುತ್ತಿದೆ," ಎಂದು ಪ್ಯಾರಿಸ್ ಪೊಲೀಸರು ಟ್ವೀಟ್ ಮಾಡಿದ್ದಾರೆ.
🔴 Incident à Levallois Perret : intervention de #Police en cours. Un véhicule est recherché
— Préfecture de police (@prefpolice) August 9, 2017












Click it and Unblock the Notifications