ಮೋದಿ-ಮ್ಯಾಕ್ರೋನ್ ಭೇಟಿಗೆ ಮುನ್ನವೇ ಭಾರತೀಯ ಸಬ್‌ಮರೀನ್ ಪ್ರಾಜೆಕ್ಟ್‌ನಿಂದ ಫ್ರಾನ್ಸ್ ಔಟ್
ಡೆನ್ಮಾರ್ಕ್, ಮೇ 3: ಯೂರೋಪ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ದೇಶಕ್ಕೂ ಭೇಟಿ ಕೊಡಲಿದ್ಧಾರೆ. ಈ ಸಂದರ್ಭದಲ್ಲಿ ಭಾರತೀಯ ನೌಕಾಪಡೆಯ ಸಬ್‌ಮರೀನ್ ನಿರ್ಮಾಣ ಯೋಜನೆ (P-75I) ಯೊಂದರಿಂದ ಫ್ರಾನ್ಸ್ ಹಿಂದೆ ಸರಿದಿದೆ. ಆರು ಸಬ್‌ಮರೀನ್‌ಗಳನ್ನ ನಿರ್ಮಿಸುವ P-75 India ಪ್ರಾಜೆಕ್ಟ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಫ್ರಾನ್ಸ್ ದೇಶದ ನೇವಲ್ ಗ್ರೂಪ್ (Naval Group) ಸಂಸ್ಥೆ ಹೇಳಿದೆ. ಯೋಜನೆಯ ಆರ್‌ಎಫ್‌ಪಿ (Request for Proposal) ಷರತ್ತುಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯೋಜನೆಗೆ ಬಿಡ್ ಸಲ್ಲಿಸುವುದಿಲ್ಲ ಎಂದು ಅ ಸಂಸ್ಥೆ ಸ್ಪಷ್ಟಪಡಿಸಿದೆ.
ಅಂದಾಜು 43 ಸಾವಿರ ಕೋಟಿ ರೂ ಮೊತ್ತದ ಈ ಪ್ರಾಜೆಕ್ಟ್‌ನಲ್ಲಿ ಫ್ರಾನ್ಸ್‌ನ ನೇವಲ್ ಗ್ರೂಪ್ ಸೇರಿ ಐದು ವಿವಿಧ ದೇಶಗಳ ಕಂಪನಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಯೋಜನೆಯಲ್ಲಿ ಒಂದು ಅಂತರರಾಷ್ಟ್ರೀಯ ಮೂಲ ಉಪಕರಣ ತಯಾರಕ (ಒಇಎಂ- Original Equipment Manufacturer) ಕಂಪನಿ ಹಾಗೂ ಒಂದು ಭಾರತೀಯ ಕಂಪನಿ ಜಂಟಿಯಾಗಿ ಸಬ್‌ಮರೀನ್‌ಗಳನ್ನ ತಯಾರಿಸುವುದು ಈ ಯೋಜನೆಯಾಗಿದೆ. ಒಇಎಂ ತನ್ನ ಭಾರತೀಯ ಪಾರ್ಟ್ನರ್ ಕಂಪನಿಗೆ ತಂತ್ರಜ್ಞಾನದ ವಿವರವನ್ನು ಹಂಚಿಕೊಳ್ಳಬೇಕು ಎಂಬುದು ಮತ್ತೊಂದು ಷರತ್ತಾಗಿದೆ.
5 ಓಇಎಂಗಳು ಯಾವುವು?; ಫ್ರಾನ್ಸ್ ದೇಶದ ನೇವಲ್ ಗ್ರೂಪ್, ಜರ್ಮನಿಯ ತೈಸೆನ್‌ಕ್ರುಪ್ ಮರೈನ್ ಸಿಸ್ಟಮ್ಸ್ (ThyssenKrupp Marine Systems), ರಷ್ಯಾದ ಜೆಎಸ್‌ಸಿ ರೋ (JSC ROE), ಸೌತ್ ಕೊರಿಯಾದ ಡಾಯ್‌ವೂ ಶಿಪ್‌ಬ್ಯುಲ್ಡಿಂಗ್ ಅಂಡ್ ಮರೈನ್ ಎಂಜಿನಿಯರಿಂಗ್ (Daewoo Shipbuilding & Marine Engineering Co Ltd) ಮತ್ತು ಫ್ರಾನ್ಸ್ ದೇಶದ ನೇವಂಟಿಯಾ (Navantia) ಕಂಪನಿಗಳನ್ನ ಶಾರ್ಟ್ ಲಿಸ್ಟ್ ಮಾಡಲಾಗಿತ್ತು.

ಇನ್ನು ಭಾರತೀಯ ಪಾರ್ಟ್ನರ್ ಆಗಲು ಶಾರ್ಟ್‌ಲಿಸ್ಟ್ ಆದ ಎರಡು ಕಂಪನಿಗಳೆಂದರೆ ಮಜಗಾನ್ ಡಾಕ್ ಶಿಪ್‌ಬ್ಯುಲ್ಡರ್ಸ್ ಲಿ (MDL- Mazagon Dock Shipbuilders Limited) ಮತ್ತು ಲಾರ್ಸನ್ ಅಂಡ್ ಟೌಬ್ರೊ (L & T). ಈ ಐದು ಓಇಎಂಗಳ ಪೈಕಿ ಒಂದಕ್ಕೆ ಮಾತ್ರ ಯೋಜನೆಗೆ ಅವಕಾಶ ಕೊಡಲಾಗುತ್ತಗದೆ. ಆದರೆ, ಈ ಓಇಎಂ ಎರಡು ಭಾರತೀಯ ಕಂಪನಿಗಳ ಪೈಕಿ ಒಂದರ ಜೊತೆ ಪಾರ್ಟ್ನರ್‌ಶಿಪ್ ಆಗಿ ಕೆಲಸ ಮಾಡಬೇಕಾಗುತ್ತದೆ.
ಇತರ ಓಇಎಂಗಳಿಂದಲೂ ಹಿಂದೇಟು?; ಪಿ-75I ಪ್ರಾಜೆಕ್ಟ್‌ಗೆ ಶಾರ್ಟ್‌ಲಿಸ್ಟ್ ಆದ ಐದು ಒಇಎಂಗಳ ಪೈಕಿ ಫ್ರಾನ್ಸ್ ದೇಶದ ನೇವಲ್ ಗ್ರೂಪ್ ಹೊರಬಿದ್ದಿದೆ. ಆದರೆ, ರಷ್ಯಾ ಮತ್ತು ಸ್ಪೇನ್ ದೇಶದ ಕಂಪನಿಗಳೂ ಕೂಡ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ನಿರಾಸಕ್ತಿ ಹೊಂದಿವೆ. ಅಧಿಕೃತವಾಗಿ ಅವರು ತಮ್ಮ ನಿಲುವನ್ನು ಪ್ರಕಟಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ, ಭಾರತೀಯ ನೌಕಾಪಡೆಯ ಈ ಮಹತ್ವಾಕಾಂಕ್ಷಿ ಯೋಜನೆ ಆರಂಭಕ್ಕೂ ಮುನ್ನವೇ ಮಗುಚಿಬೀಳುವ ಅಪಾಯದಲ್ಲಿದೆ.
ಆರ್‌ಎಫ್‌ಪಿ ಷರತ್ತುಗಳೇನು?: ಸಬ್‌ಮರೀನ್ ನಿರ್ಮಾಣಕ್ಕೆ ಬಳಲಾಗುವ ಎಐಪಿ ಫುಯೆಲ್ ಸೆಲ್ (AIP fuel cell) ಸಾಗರ ಪ್ರಯೋಗದಲ್ಲಿ ಸಾಮರ್ಥ್ಯ ದೃಢಪಟ್ಟಿರಬೇಕು (Sea-proven) ಎಂಬುದು ಒಂದು ಷರತ್ತು. ಹಾಗೆಯೇ, ಭಾರತೀಯ ಪಾರ್ಟ್ನರ್ ಕಂಪನಿಗೆ ತಂತ್ರಜ್ಞಾನದ ಮಾಹಿತಿ ಹಂಚಿಕೊಳ್ಳಬೇಕು ಎಂಬುದು ಇನ್ನೊಂದು ಪ್ರಮುಖ ಷರುತ್ತು. ಈ ಎರಡನೇ ಷರುತ್ತು ಒಇಎಂಗಳ ಆಸಕ್ತಿ ಕುಂದಿಸಿವೆ ಎನ್ನಲಾಗಿದೆ.
ಫ್ರಾನ್ಸ್ ದೇಶದ ನೇವಲ್ ಗ್ರೂಪ್ ಈಗಾಗಲೇ ಭಾರತಕ್ಕೆ ಆರು ಕಲ್ವರಿ ಕ್ಲಾಸ್ (Scorpene class) ಸಬ್‌ಮರೀನ್‌ಗಳನ್ನ ತಯಾರಿಸಿಕೊಟ್ಟಿದೆ. ಭಾರತದ ಮಜಗಾನ್ ಡಾಕ್‌ಯಾರ್ಡ್ ಶಿಪ್‌ಬ್ಯುಲ್ಡಿಂಗ್ ಸಂಸ್ಥೆ ಜೊತೆ ಪಾರ್ಟ್ನರ್‌ಶಿಪ್‌ನಲ್ಲಿ ಸಬ್‌ಮರೀನ್ ನಿರ್ಮಿಸಿದೆ. ಈಗಾಗಲೇ ಈ ಕಲ್ವರಿ ಕ್ಲಾಸ್‌ನ ನಾಲ್ಕು ಸಬ್‌ಮರೀನ್‌ಗಳು ನೌಕಾಪಡೆಗೆ ನಿಯೋಜನೆಗೊಂಡಿವೆ. ಮುಂದಿನ ವರ್ಷ ಆರನೇ ಸಬ್‌ಮರೀನ್ ಡೆಲಿವರಿ ಆಗುವ ನಿರೀಕ್ಷೆ ಇದೆ.
(ಒನ್ಇಂಡಿಯಾ ಸುದ್ದಿ)
Recommended Video
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications