ಫ್ರಾನ್ಸ್ ನಲ್ಲಿ ಲಾರಿ ಹರಿಸಿ 77 ಜನರ ಭೀಕರ ಹತ್ಯೆ

By: ವಿಕಾಸ್ ನಂಜಪ್ಪ
Subscribe to Oneindia Kannada

ಪ್ಯಾರೀಸ್, ಜುಲೈ 14 : ಫ್ರಾನ್ಸ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 77 ಜನರು ಸಾವನ್ನಪ್ಪಿದ್ದಾರೆ. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ಜನರ ಮೇಲೆ ಲಾರಿ ಹತ್ತಿಸಿ, ಗುಂಡಿನ ದಾಳಿ ನಡೆಸಲಾಗಿದೆ.

ದಕ್ಷಿಣ ಫ್ರಾನ್ಸ್‌ನ ನೀಸ್ ನಗರದಲ್ಲಿ ಗುರುವಾರ ಈ ದಾಳಿ ನಡೆದಿದೆ. ಫ್ರಾನ್ಸ್ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಪಟಾಕಿ ಉತ್ಸವ ಆಯೋಜಿಸಲಾಗಿತ್ತು. ಇದನ್ನು ನೋಡಲು ಸಾವಿರಾರು ಜನರು ಸೇರಿದ್ದರು. ಈ ಸಂದರ್ಭದಲ್ಲಿ ಜನರ ಮೇಲೆ ಏಕಾಏಕಿ ಲಾರಿ ಹತ್ತಿಸಲಾಗಿದೆ. [ಉಗ್ರರಿಂದ ಫ್ರಾನ್ಸ್ ಮೇಲೆ ರಾಸಾಯನಿಕ, ಜೈವಿಕ ಅಸ್ತ್ರ ಬಳಕೆ?]

ಜನರ ತುಂಬಿದ್ದ ರಸ್ತೆಯ ಮೇಲೆ ಅಪರಿಚಿತ ಡ್ರೈವರ್ ಸುಮಾರು 2 ಕಿ.ಮೀ.ತನಕ ಲಾರಿಯನ್ನು ತೆಗೆದುಕೊಂಡು ಹೋಗಿದ್ದಾನೆ. ನಂತರ ಭದ್ರತಾ ಪಡೆಗಳು ಆತನನ್ನು ಕೊಂದು ಹಾಕಿವೆ. ಜನರಿಗೆ ಡಿಕ್ಕಿ ಹೊಡೆಸಿದ ಟ್ರಕ್‌ನಲ್ಲಿ ಸ್ಫೋಟಗಳಿತ್ತು, ಎಂದು ತಿಳಿದುಬಂದಿದೆ. ಈ ಕೃತ್ಯದ ಹಿಂದೆ ಐಎಸ್‌ಐಎಸ್ ಉಗ್ರ ಸಂಘಟನೆ ಕೈವಾಡವಿರಬಹುದು ಎಂದು ಶಂಕಿಸಲಾಗಿದೆ.[ಪ್ಯಾರಿಸಿನ ಶಾ೦ತ ಪರಿಸರದಲ್ಲಿ ಉಗ್ರವಾದದ ಬೆ೦ಕಿ: ಇದಕ್ಕೆ ಕೊನೆಯೆಂದು?]

ರಸ್ತೆಯಲ್ಲಿದ್ದ ಜನರ ಮೇಲೆ ಟ್ರಕ್ ಚಾಲಕ ಗುಂಡಿನ ದಾಳಿಯನ್ನು ನಡೆಸಿದ್ದಾನೆ. ಈ ಘಟನೆಯಲ್ಲಿ ಗಾಯಗೊಂಡ 100 ಜನರ ಪೈಕಿ 42 ಜನರ ಸ್ಥಿತಿ ಗಂಭೀರವಾಗಿದೆ. ಏಕಾಏಕಿ ಟ್ರಕ್ ಜನರ ಮೇಲೆ ನುಗ್ಗಿದ್ದರಿಂದ ಎಲ್ಲರೂ ಒಂದು ದಿಕ್ಕಿನ ಕಡೆ ಓಡಲಾರಂಭಿಸಿದರು. ಜೋರಾದ ಸಂಗೀತದ ಅಬ್ಬರದ ನಡುವೆ ಏನಾಗುತ್ತಿದೆ? ಎಂಬುದು ಹಲವರಿಗೆ ತಿಳಿಯಲಿಲ್ಲ.

2015ರ ನವೆಂಬರ್‌ನಲ್ಲಿ ಐಎಸ್‌ಐಎಸ್ ಪ್ಯಾರಿಸ್‌ನಲ್ಲಿ ನಡೆಸಿದ ದಾಳಿಯಲ್ಲಿ 130 ಜನರು ಸಾವನ್ನಪ್ಪಿದ್ದರು. ಈಗ ನಡೆದಿರುವ ದಾಳಿಯ ಹೊಣೆಯನ್ನು ಐಎಸ್‌ಐಎಸ್ ಹೊತ್ತುಕೊಳ್ಳುವ ಸಾಧ್ಯತೆ ಇದೆ. ದಾಳಿಯ ಹಿಂದೆ ಐಎಸ್‌ಐಎಸ್ ಕೈವಾಡವಿದೆ ಎಂಬ ಬಗ್ಗೆ ಫ್ರಾನ್ಸ್ ಅಧಿಕೃತ ಹೇಳಿಕೆ ನೀಡಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In one of the most horrific attacks to have hit France, a person in a truck killed 77 and injured several more when he drove a truck at high speed into a crowd that was watching Bastille Day fireworks in the French Riviera city of Nice late on Thursday.
Please Wait while comments are loading...