• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶ ತೊರೆಯಲು ಯತ್ನಿಸಿದ ಶ್ರೀಲಂಕಾ ಮಾಜಿ ಹಣಕಾಸು ಸಚಿವನಿಗೆ ಚಳಿ ಬಿಡಿಸಿದ ಜನತೆ

|
Google Oneindia Kannada News

ಕೊಲಂಬೊ, ಜುಲೈ11: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ದ್ವೀಪರಾಷ್ಟ್ರ ಶ್ರೀಲಂಕಾದಿಂದ ಮಾಜಿ ಹಣಕಾಸು ಸಚಿವ ಬಾಸಿಲ್ ರಾಜಪಕ್ಸ ದುಬೈಗೆ ಪರಾರಿಯಾಗಲು ಪ್ರಯತ್ನ ನಡೆಸಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಅವರನ್ನು ಗುರುತಿಸಿದ ಸಾರ್ವಜನಿಕರು ಅವರು ದುಬೈಗೆ ತೆರಳದಂತೆ ಅಡ್ಡಗಟ್ಟಿದ್ದಾರೆ. ವಲಸೆ ಅಧಿಕಾರಿಗಳು ಕೂಡ ಅವರ ಪ್ರಯಾಣಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ.

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ಸಹೋದರನಾಗಿರುವ ಬಾಸಿಲ್ ರಾಜಪಕ್ಸ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಹೆದರಿ ಪಲಾಯನ ಮಾಡಲು ನಿರ್ಧರಿಸಿದ್ದರು. ಪ್ರತಿಭಟನಾಕಾರರು ಅಧ್ಯಕ್ಷ ಗೋಟಬಯ ರಾಜಪಕ್ಸ ಅವರ ನಿವಾಸಕ್ಕೆ ಮುತ್ತಿಗೆ ಹಾಖುವ ಮುನ್ನವೇ ಪರಾರಿಯಾಗಿದ್ದರು. ಈ ಬೆನ್ನಲ್ಲೇ ಮಾಜಿ ಹಣಕಾಸು ಸಚಿವ ಕೂಡ ದೇಶ ತೊರೆಯಲು ಯತ್ನಿಸಿದ್ದಾರೆ, ಅವರ ಪ್ರಯತ್ನ ವಿಫಲವಾಗಿದೆ.

Sri Lanka crisis:ಪ್ರಮುಖ 10 ಅಂಶಗಳುSri Lanka crisis:ಪ್ರಮುಖ 10 ಅಂಶಗಳು

ಬಾಸಿಲ್ ರಾಜಪಕ್ಸ ಮಂಗಳವಾರ ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಐಪಿ ಟರ್ಮಿನಲ್‌ನ ಮೂಲಕ ಶ್ರೀಲಂಕಾ ತೊರೆದು ಹೋಗಲು ತೆರಳಿದ್ದರು. ಆಗ ಕೆಲವು ಜನರು ಅವರನ್ನು ಗುರುತಿಸಿದರು. ದೇಶದಿಂದ ಹೊರಗೆ ಹೋಗುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಅನುಮತಿ ನೀಡದ ಅಧಿಕಾರಿಗಳು

ಅನುಮತಿ ನೀಡದ ಅಧಿಕಾರಿಗಳು

ಬಾಸಿಲ್ ಅವರು ರಾತ್ರಿ 12.15ರ ಸುಮಾರಿಗೆ ಚೆಕ್ ಇನ್ ಕೌಂಟರ್ ತಲುಪಿದ್ದರು. ಅವರ ಪ್ರಯಾಣಕ್ಕೆ ಅನುಮತಿ ನೀಡಲು ವಲಸೆ ಅಧಿಕಾರಿಗಳು ನಿರಾಕರಿಸಿದ್ದರಿಂದ 3.15ರವರೆಗೂ ಅಲ್ಲಿಯೇ ಕಾಯ್ದಿದ್ದಾರೆ. ಆದರೆ ಯಾವುದಕ್ಕೂ ಜಗ್ಗದ ಅಧಿಕಾರಿಗಳು ಅವರಿಗೆ ಪ್ರಯಾಣಕ್ಕೆ ಅನುಮತಿ ನೀಡದ ಕಾರಣ ಬೇರೆ ವಿಧಿಯಿಲ್ಲದೆ ಮಾಜಿ ಸಚಿವ ವಾಪಸ್ ಮರಳಿದ್ದಾರೆ.

ಕೊಲಂಬೊ ವಿಮಾನ ನಿಲ್ದಾಣದ ವಿಐಪಿ ಡಿಪಾರ್ಚರ್ ಲಾಂಜ್‌ನಲ್ಲಿ ಬೆಸಿಲ್ ರಾಜಪಕ್ಸಗೆ ಸೇವೆ ಸಲ್ಲಿಸಲು ಅದರ ಸದಸ್ಯರು ನಿರಾಕರಿಸಿದ್ದಾರೆ ಎಂದು ಶ್ರೀಲಂಕಾ ವಲಸೆ ಮತ್ತು ವಲಸೆ ಅಧಿಕಾರಿಗಳ ಸಂಘವು ಸುದ್ದಿ ಸಂಸ್ಥೆ ರಾಯಿಟರ್ಸ್‌ಗೆ ತಿಳಿಸಿದೆ.

ಶ್ರೀಲಂಕಾದಲ್ಲಿ ಇನ್ನೂ ಹದಗೆಟ್ಟ ಆರ್ಥಿಕ ಸ್ಥಿತಿ, ಹಣದುಬ್ಬರ ಶೇ. 40ಕ್ಕೆ ಏರಿಕೆಶ್ರೀಲಂಕಾದಲ್ಲಿ ಇನ್ನೂ ಹದಗೆಟ್ಟ ಆರ್ಥಿಕ ಸ್ಥಿತಿ, ಹಣದುಬ್ಬರ ಶೇ. 40ಕ್ಕೆ ಏರಿಕೆ

ಭಾರತದಲ್ಲಿ ಯಾರಿಗೂ ಆಶ್ರಯ ನೀಡಿಲ್ಲ

ಭಾರತದಲ್ಲಿ ಯಾರಿಗೂ ಆಶ್ರಯ ನೀಡಿಲ್ಲ

ಶ್ರೀಲಂಕಾ ಮಾಜಿ ಆರ್ಥಿಕ ಸಚಿವ ಬಾಸಿಲ್ ರಾಜಪಕ್ಸ ಅವರಿಗೆ ಭಾರತದಲ್ಲಿ ಆಶ್ರಯ ನೀಡಲಾಗುತ್ತಿದೆ ಎಂಬ ವರದಿಗಳನ್ನು ಭಾರತ ಸರ್ಕಾರ ಅಲ್ಲಗಳೆದಿತ್ತು. ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎನ್ನುವ ವರದಿಗಳೂ ಕೂಡ ಕೇಳಿಬಂದಿದ್ದವು. ಆದರೆ ಈ ವರದಿಯನ್ನು ಮೂಲಗಳು ತಿರಸ್ಕರಿಸಿವೆ.

ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಬುಧವಾರ ರಾಜಿನಾಮೆ ನೀಡಲಿದ್ದಾರೆ ಎನ್ನಲಾಗಿದೆ. ಶ್ರೀಲಂಕಾದ ಯಾವೊಬ್ಬ ಪ್ರಮುಖ ನಾಯಕರೂ ವಿಮಾನದ ಮೂಲಕ ದೇಶ ಬಿಟ್ಟುಹೋಗಲು ಸಾಧ್ಯವೇ ಇಲ್ಲ ಎಂದು ಹೇಳಲಾಗಿದೆ.

ಕೊಲಂಬೋದಲ್ಲೇ ಇರುವ ಗೋಟಬಯ ರಾಜಪಕ್ಸ

ಕೊಲಂಬೋದಲ್ಲೇ ಇರುವ ಗೋಟಬಯ ರಾಜಪಕ್ಸ

ಬಾಸಿಲ್ ರಾಜಪಕ್ಸ ಅವರ ಮತ್ತೊಬ್ಬ ಸಹೋದರನಾದ ಮಹಿಂದಾ ರಾಜಪಕ್ಸ ಕೊಲಂಬೋದಲ್ಲಿದ್ದು ಅವರಿಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಹಡಗಿನ ಮೂಲಕ ಪರಾರಿಯಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಅವರು ಕೊಲಂಬೋದರಲ್ಲಿ ಅಜ್ಞಾತ ಸ್ಥಳದಲ್ಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋಟಬಯ ರಾಜಪಕ್ಸ ಅವರನ್ನು ಕೂಡ ವಿಮಾನ ನಿಲ್ದಾಣದ ಅಧಿಕಾರಿಗಳು ತಡೆದಿದ್ದರು. ಸಿಬ್ಬಂದಿ ಜೊತೆ ತೀವ್ರ ವಾಗ್ವದಾದ ಬಳಿಕ ಅವಮಾನಿತಾರದ ಗೋಟಬಯ ರಾಜಪಕ್ಸ ವಾಪಸಾಗಿದ್ದರು ಎಂದು ಹೇಳಲಾಗಿದೆ.

ಅಧ್ಯಕ್ಷರಿಗೆ ಬಂಧನದ ಭೀತಿ

ಅಧ್ಯಕ್ಷರಿಗೆ ಬಂಧನದ ಭೀತಿ

ಶ್ರೀಲಂಕಾ ಅಧ್ಯಕ್ಷರಾಗಿ ಇರುವವರೆಗೂ ಗೋಟಬಯ ರಾಜಪಕ್ಸ ಅವರನ್ನು ಬಂಧಿಸುವ ಅಧಿಕಾರವಿಲ್ಲ. ಆದರೆ ರಾಜೀನಾಮೆ ನಂತರ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ದರಿಂದ ರಾಜೀನಾಮೆ ನೀಡುವ ಮೊದಲೇ ವಿದೇಶಕ್ಕೆ ತೆರಳಲು ಯೋಜಿಸಿದ್ದರು ಎನ್ನಲಾಗಿದೆ.

ಆದರೆ ವಿಮಾನ ನಿಲ್ದಾಣದಲ್ಲಿ ಅವರಿಗೆ ಅನುಮತಿ ದೊರೆಯಲಿಲ್ಲ. ಯುಎಇಗೆ ತೆರಳಿದ ನಾಲ್ಕು ವಿಮಾನಗಳಲ್ಲಿಯೂ ಅವರಿಗೆ ಪ್ರಯಾಣಿಸಲು ಸಾಧ್ಯವಾಗಿಲ್ಲ. ಹೀಗಾಗಿ ಗೊಟಬಯ ಮತ್ತು ಅವರ ಪತ್ನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ಸೇನಾ ನೆಲೆಯಲ್ಲಿ ರಾತ್ರಿ ಕಳೆದಿದ್ದಾರೆ ಎನ್ನಲಾಗಿದೆ.

ಕಳೆದೆರಡು ದಿನಗಳಿಂದ ಪ್ರತಿಭಟನಾಕಾರರು ಅಧ್ಯಕ್ಷರ ನಿವಾಸವನ್ನು ಆಕ್ರಮಿಸಿಕೊಂಡಿದ್ದಾರೆ. ಅಧ್ಯಕ್ಷರ ನಿವಾಸದಲ್ಲಿ ಲಕ್ಷಾಂತರ ರುಪಾಯಿ ನಗದು ಪತ್ತೆಯಾಗಿರುವ ವಿಡಿಯೋವನ್ನು ಪ್ರತಿಭಟನಾಕಾರರು ಬಿಡುಗಡೆ ಮಾಡಿದ್ದಾರೆ.

ದೇಶದ ಜನರು ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವಾಗ ಅದ್ದೂರಿ ಜೀವನ ನಡೆಸುತ್ತಿರುವ ಅಧ್ಯಕ್ಷರು ಮತ್ತು ಅವರ ಕುಟುಂಬದ ಸದಸ್ಯರನ್ನು ಹಲವರು ಥಳಿಸಿದ್ದಾರೆ ಎನ್ನಲಾಗಿದೆ. ದೇಶವು ಭಾರಿ ಇಂಧನ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ ಮತ್ತು ಪ್ರಯಾಣವನ್ನು ತಪ್ಪಿಸಲು ಅನಿವಾರ್ಯವಲ್ಲದ ಕಚೇರಿಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ.

English summary
Former finance minister Basil Rajapaksa has tried to escape to Dubai from the island nation reeling from financial crisis. But the public spotted him at the airport and prevented him from going to Dubai. Immigration officials have also refused to allow him to travel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X