ವಿದೇಶದ ಭಾರತೀಯ ಕಂಪನಿ ಉದ್ಯೋಗಿಗಳಿಗೂ ಪಿಎಫ್

ಕಾನ್ಪುರ, ನ. 23 : ವಿದೇಶದಲ್ಲಿರುವ ಭಾರತೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೂ ಪಿಎಫ್ ಸೌಲಭ್ಯ ದೊರೆಯಲಿದೆ. ಈ ಬಗ್ಗೆ ಚಿಂತನೆ ನಡೆಸಿರುವ ಕಾರ್ಮಿಕ ಭವಿಷ್ಯನಿಧಿ ಇಲಾಖೆ ಎರಡು ಉಪಸಮಿತಿಗಳನ್ನು ರಚಿಸಿದೆ.

ವಿದೇಶದಲ್ಲಿ ಕೆಲಸ ಮಾಡುತ್ತಿರುವ ನೌಕರರ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಅಲ್ಲದೇ ಅವರ ಖಾತೆಗೆ ನೇರವಾಗಿ ಹಣ ಸಂದಾಯವಾಗುವಂತೆಯೂ ಯೋಜನೆ ರೂಪಿಸಲಾಗುತ್ತಿದೆ.[ಭವಿಷ್ಯನಿಧಿ ಮಾಹಿತಿ ಅಂತರ್ಜಾಲದಲ್ಲಿ ಸಿಗುತ್ತೆ]

pf

ಈ ಬಗ್ಗೆ ಸ್ಟೇಟ್ ಬ್ಯಾಂಕ್ ಇಂಡಿಯಾದೊಂದಿಗೆ ಭವಿಷ್ಯ ನಿಧಿ ಇಲಾಖೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಭಾರತದ ಕಂಪನಿಗಳ ಹಲವಾರು ಶಾಖೆಗಳು ವಿದೇಶದಲ್ಲಿವೆ. ಆದರೆ ಅಲ್ಲಿಯ ನೌಕರರು ಭವಿಷ್ಯನಿಧಿ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಇದೆಲ್ಲವನ್ನು ಮನಗಂಡು ಇಂಥ ಯೋಜನೆ ರೂಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ನಿಮ್ಮ ಭವಿಷ್ಯನಿಧಿ ಉಳಿತಾಯ ಪರಿಶೀಲಿಸುವುದು ಹೇಗೆ?]

ಒಟ್ಟಿನಲ್ಲಿ ಇಲಾಖೆಯ ಈ ಕ್ರಮ ವಿದೇಶದಲ್ಲಿ ಕೆಲಸ ಮಾಡುತ್ತಿರುವ ನೌಕರರ ಭದ್ರತೆಗೆ ಮತ್ತಷ್ಟು ನೆರವಾಗುವುದರಲ್ಲಿ ಅನುಮಾನವಿಲ್ಲ. ಇದೊಂದು ಉತ್ತಮ ಚಿಂತನೆ ಎಂದೇ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+