ಹೂವೊಂದಕ್ಕೆ ಪ್ರಧಾನಿ ಮೋದಿ ಹೆಸರಿಟ್ಟು ಗೌರವಿಸಿದ ಇಸ್ರೇಲ್
ಇಸ್ರೇಲ್ ನಲ್ಲಿ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಮೊದಲಿಗೆ ಮೋದಿ ಅಲ್ಲಿನ ಡಾಂಜಿಗೆರ್ ಹೂವಿನ ತೋಟಕ್ಕೆ ಭೇಟಿ ನೀಡಿದ್ದಾರೆ. ಇದು ಇಸ್ರೇಲ್ ನಲ್ಲೇ ಮುಂಚೂಣಿಯಲ್ಲಿರುವ ಹೂವು ಬೆಳೆಯುವ ಕಂಪೆನಿಗಳಲ್ಲೊಂದು. ಇದೇ ಸಂದರ್ಭದಲ್ಲಿ ಕ್ರಿಸಂಥುಮನ್ ಹೂವಿಗೆ ಭಾರತದ ಪ್ರಧಾನಿ ಹೆಸರಿಟ್ಟು ಗೌರವಿಸಲಾಯಿತು.
ಇನ್ನು ಮುಂದೆ ಆ ಹೂವಿನ ಹೆಸರು ಮೋದಿ. ಈ ಸಂದರ್ಭದಲ್ಲಿ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಕೃಷಿ ಸಚಿವ ಉರಿ ಏರಿಯಲ್ ಕೂಡ ಪ್ರಧಾನಿ ಮೋದಿಗೆ ಜತೆಯಾದರು. ಈ ತೋಟವು ಕೇಂದ್ರ ಇಸ್ರೇಲಿನ ಜೆರುಸಲೇಂನಿಂದ ಐವತ್ತಾರು ಕಿಲೋಮೀಟರ್ ದೂರದ ಮೊಹ್ಸವ್ ಮೊಶ್ಮಾರ್ ಹಶಿವದಲ್ಲಿದೆ.
Crysanthumun flower will be named in honour of PM @narendramodi. The flower will be called 'Modi.' pic.twitter.com/4qLALtxHzP
— PMO India (@PMOIndia) 4 July 2017
Recommended Video

ಹೂವಿನ ತೋಟಕ್ಕೆ ಮೋದಿ ಅವರು ಭೇಟಿ ನೀಡಿದ ಅವಧಿಯಲ್ಲಿ ಇಸ್ರೇಲಿ ಸರಕಾರವು ಕೃಷಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರದರ್ಶಿಸಲಾಯಿತು. ಸಣ್ಣ ಮಟ್ಟದ ವ್ಯವಹಾರವಾಗಿ ಆರಂಭವಾದ ಈ ಹೂವು ಬೆಳೆಯುವ ಕಂಪೆನಿಯಲ್ಲಿ ಇಂದು ಇನ್ನೂರು ಮಂದಿ ಉದ್ಯೋಗಿಗಳಿದ್ದಾರೆ. ಇಸ್ರೇಲ್ ಹಾಗೂ ಭಾರತದ ಕೃಷಿ ತಂತ್ರಜ್ಞಾನ ಸಹಕಾರ ಕೂಡ ಈ ಭೇಟಿಯ ಉದ್ದೇಶಗಳಲ್ಲೊಂದು.












Click it and Unblock the Notifications