• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೊದಲ ಬಾರಿಗೆ ಎಸ್ ಸಿಓ ಶೃಂಗಸಭೆ ನೇತೃತ್ವ ವಹಿಸಿದ ಭಾರತ

|

ನವದೆಹಲಿ, ನವೆಂಬರ್.30: ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ಅವರು ಸೋಮವಾರ ನಡೆಯಲಿರುವ ಶಾಂಘೈ ಸಹಕಾರಿ ಸಂಸ್ಥೆ(SCO) ಸಮಿತಿ ಮುಖ್ಯಸ್ಥರ ಶೃಂಗಸಭೆಗೆ ಹಾಜರಾಗುವುದಿಲ್ಲ ಎಂದು ತಿಳಿದು ಬಂದಿದೆ.

ಭಾರತವು ಮೊದಲ ಬಾರಿಗೆ ಎಸ್ ಸಿಓ ಮಿತ್ರರಾಷ್ಟ್ರಗಳ ಸಭೆಯ ನಡೆಸುತ್ತಿದ್ದು, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನೇತೃತ್ವದಲ್ಲಿ ಶೃಂಗಸಭೆ ನಡೆಯಲಿದೆ. ನವೆಂಬರ್ ಆರಂಭದಲ್ಲಿ ರಷ್ಯಾದಲ್ಲಿ ನಡೆದ ಎಸ್ ಸಿಓ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ, ಪಾಕಿಸ್ತಾನ್ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಜರಾಗಿದ್ದರು.

ಪಾಕ್ 'ಕಾಲ್ಪನಿಕ ನಕ್ಷೆ' ವಿರೋಧಿಸಿ ಎಸ್ ಸಿಓ ಸಭೆ ತೊರೆದ ಭಾರತ

ರಷ್ಯಾ, ಚೀನಾ, ಖಜಕಿಸ್ತಾನ್, ಕಿರ್ಜಿಸ್ತಾನ್, ತಜಕಿಸ್ತಾನ್, ಉಜಬೆಕಿಸ್ತಾನ್ ರಾಷ್ಟ್ರದ ಪ್ರಧಾನಮಂತ್ರಿಗಳು ಮತ್ತು ಸರ್ಕಾರಗಳ ಮುಖ್ಯಸ್ಥರು ಎಸ್ ಸಿಓ ಶೃಂಗಸಭೆಯಲ್ಲಿ ಹಾಜರಾಗಲಿದ್ದಾರೆ. ಪಾಕಿಸ್ತಾನದ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರಗಳ ಸಂಸದೀಯ ಕಾರ್ಯದರ್ಶಿ ಭಾಗವಹಿಸಲಿದ್ದಾರೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಮೊದಲ ಬಾರಿಗೆ ನೇತೃತ್ವ ವಹಿಸಿಕೊಂಡ ಭಾರತ:

ಕಳೆದ 2017ರಲ್ಲಿ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದ ನಂತರದಲ್ಲಿ ಮೊದಲ ಬಾರಿಗೆ ಭಾರತವು ಶಾಂಘೈ ಸಹಕಾರಿ ಸಂಸ್ಥೆ ಶೃಂಗಸಭೆಯ ನೇತೃತ್ವವನ್ನು ವಹಿಸಿಕೊಂಡಿದೆ. ಎಸ್ ಸಿಓ ಸದಸ್ಯ ರಾಷ್ಟ್ರಗಳಾದ ರಷ್ಯಾ, ಚೀನಾ, ಖಜಕಿಸ್ತಾನ್, ಕಿರ್ಜಿಸ್ತಾನ್, ತಜಕಿಸ್ತಾನ್, ಉಜಬೆಕಿಸ್ತಾನ್ ಪ್ರಧಾನಮಂತ್ರಿಗಳು ಸೋಮವಾರದ ಸಭೆಗೆ ಹಾಜರಾಗಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ಪಷ್ಟಪಡಿಸಿದೆ. ಇದರ ಜೊತೆಗೆ ವೀಕ್ಷಕ ಸದಸ್ಯರಾಗಿ ನಾಲ್ಕು ರಾಷ್ಟ್ರಗಳ ಮುಖ್ಯಸ್ಥರು ಸಭೆಯಲ್ಲಿ ಹಾಜರಾಗಲಿದ್ದಾರೆ. ಅಫಘಾನಿಸ್ತಾನದ ಪ್ರಧಾನಮಂತ್ರಿ, ಇರಾನ್ ಉಪ ರಾಷ್ಟ್ರಪತಿ, ಬೆಲಾರಸ್ ಪ್ರಧಾನಮಂತ್ರಿ ಹಾಗೂ ಮಂಗೋಲಿಯಾದ ಉಪ ಪ್ರಧಾನಮಂತ್ರಿಗಳು ವೀಕ್ಷಕ ರಾಷ್ಟ್ರಗಳಾಗಿ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕಳೆದ ವರ್ಷ ನವೆಂಬರ್.02ರಂದು ಉಜಬೆಕಿಸ್ತಾನ್ ನಲ್ಲಿ ಎಸ್ ಸಿಓ ಶೃಂಗಸಭೆಯನ್ನು ನಡೆಸಲಾಗಿದ್ದು, ಅಂದು ಭಾರತದ ಪ್ರತಿನಿಧಿಯಾಗಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಈ ವೇಳೆ ಮುಂದಿನ ಶೃಂಗಸಭೆಯನ್ನು ಭಾರತದಲ್ಲಿ ನಡೆಸುವುದಾಗಿ ತೀರ್ಮಾನಿಸಲಾಗಿತ್ತು. ಎಸ್ ಸಿಓ ಪೂರ್ಣ ಪ್ರಮಾಣದ ಸದಸ್ಯತ್ವವನ್ನು ಪಡೆದ ನಂತರದಲ್ಲಿ ಭಾರತವು ಇದೇ ಮೊದಲ ಬಾರಿಗೆ ಶೃಂಗಸಭೆಯ ನೇತೃತ್ವ ವಹಿಸಿಕೊಳ್ಳುತ್ತಿದೆ ಎಂದು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ಪಷ್ಟಪಡಿಸಿದೆ.

ಎಸ್ ಸಿಓ ಶೃಂಗಸಭೆಯ ಚರ್ಚೆ ವಿಷಯ:

ಜಾಗತಿಕ ಮಟ್ಟದಲ್ಲಿ ಕಾಡುತ್ತಿರುವ ಕೊವಿಡ್-19 ಸಾಂಕ್ರಾಮಿಕ ಪಿಡುಗು ಹಾಗೂ ಇದರಿಂದ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಯಾವೆಲ್ಲ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಆರ್ಥಿಕತೆ ಸವಾಲು ಎದುರಿಸುವುದು ಹೇಗೆ ಎನ್ನುವುದರ ಕುರಿತು ಎಸ್ ಸಿಓ ಸದಸ್ಯ ರಾಷ್ಟ್ರಗಳು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಿವೆ.

English summary
First Time India Host SCO Heads Summit; PM Narendra Modi And Pakistan PM Imran Khan Are Not Attends.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X