• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾಲಿಬಾನ್ ಮೊದಲು ಅಫ್ಘಾನಿಸ್ತಾನದಲ್ಲಿ ಮನ್ನಣೆ ಪಡೆದುಕೊಳ್ಳಲಿ: NSA ನಾಯಕರ ಚರ್ಚೆ

|
Google Oneindia Kannada News

ನವದೆಹಲಿ, ನವೆಂಬರ್ 9: ಅಫ್ಘಾನಿಸ್ತಾನದ ಬಗ್ಗೆ ಬುಧವಾರ ನಡೆಯಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯ ಭಾಗವಾಗಿ ಉಜ್ಬೇಕಿಸ್ತಾನ್ ಮತ್ತು ತಜಕಿಸ್ತಾನ್ ಪ್ರತಿನಿಧಿಗಳನ್ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭೇಟಿ ಮಾಡಿದರು. ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ತಜಕಿಸ್ತಾನ್ ಯಾವ ರೀತಿ ಅಭಿಪ್ರಾಯವನ್ನು ಹೊಂದಿದೆ ಎಂಬುದರ ಬಗ್ಗೆ ಚರ್ಚೆ ನಡೆಸಲಾಯಿತು.

ಈ ಮೊದಲಿಗೆ ಹೋಲಿಸಿದರೆ ಇತ್ತೀಚಿಗೆ ಅಫ್ಧಾನಿಸ್ತಾನದಿಂದ ಭಯೋತ್ಪಾದನಾ ಬೆದರಿಕೆಗಳು ಹೆಚ್ಚಾಗುತ್ತಿವೆ ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಲಾಯಿತು. ತಜಕಿಸ್ತಾನದ ಎನ್ಎಸ್ಎ ಮಹ್ಮುದ್ಜೋಡಾ ನಸ್ರುಲ್ಲೋ ರಹಮತ್ಜೋನ್ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಯು ದೇಶದಲ್ಲಿನ ಮಾನವೀಯತೆ ಬಿಕ್ಕಟ್ಟನ್ನು ಎತ್ತಿ ತೋರಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಯ್ತು ಸಾವಿನ ಸಂಖ್ಯೆಜಮ್ಮು ಮತ್ತು ಕಾಶ್ಮೀರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಯ್ತು ಸಾವಿನ ಸಂಖ್ಯೆ

ದ್ವಿಪಕ್ಷೀಯ ಮಾತುಕತೆಯ ಭಾಗವಾಗಿ ರಕ್ಷಣೆ, ಗಡಿ ನಿರ್ವಹಣೆ ಮತ್ತು ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಮೂಲಗಳಿಂದ ತಿಳಿದು ಬಂದಿದೆ.


ಉಜ್ಬೇಕಿಸ್ತಾನ್ ಎನ್ಎಸ್ಎ ಜೊತೆಗಿನ ಚರ್ಚೆ ಏನು?:

ಉಜ್ಬೇಕಿಸ್ತಾನ್ NSA ವಿಕ್ಟರ್ ಮಖ್ಮುಡೋವ್ ಅವರೊಂದಿಗೆ ನಡೆಸಿದ ಚರ್ಚೆಯಲ್ಲಿ ಅಫ್ಘಾನಿಸ್ತಾನವನ್ನೇ ಕೇಂದ್ರೀಕೃತಗೊಳಿಸಲಾಗಿತ್ತು. ಮೂಲಗಳ ಪ್ರಕಾರ, ಅಫ್ಘಾನಿಸ್ತಾನದ ಭವಿಷ್ಯವನ್ನು ಅಫ್ಘಾನಿಸ್ತಾನದ ಜನರೇ ನಿರ್ಧರಿಸಬೇಕು ಎಂದು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಅಫ್ಘಾನಿಸ್ತಾನದೊಳಗಿನ ಯಾವುದೇ ನ್ಯಾಯಸಮ್ಮತತೆ ಮತ್ತು ಕಾನೂನು ಬದ್ಧತೆಯು ಅಂತಾರಾಷ್ಟ್ರೀಯ ಮನ್ನಣೆಗೆ ಬರುವುದಕ್ಕೂ ಮೊದಲು ಆಂತರಿಕವಾಗಿ ಮನ್ನಣೆ ಪಡೆದುಕೊಂಡಿರಬೇಕು ಎಂಬ ವಾದವನ್ನು ದೋವಲ್ ಮತ್ತು ಉಜ್ಬೇಕಿಸ್ತಾನ್ NSA ಸಹ ಒಪ್ಪಿಕೊಂಡಿದ್ದಾರೆ.

ಎರಡೂ ಕಡೆಯವರು ಅಫ್ಘಾನಿಸ್ತಾನದ ನೆರೆಹೊರೆಯವರು ಅಫ್ಘಾನಿಸ್ತಾನದ ಜನರಿಗೆ ಮಾನವೀಯ ಸಹಾಯಕ್ಕೆ ಅಡೆತಡೆಯಿಲ್ಲದ ಪ್ರವೇಶವನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಅಫ್ಘಾನಿಸ್ತಾನದಲ್ಲಿ ನೆರೆಯ ರಾಷ್ಟ್ರಗಳು ರಚನಾತ್ಮಕ ಪಾತ್ರವನ್ನು ವಹಿಸಬೇಕು ಎಂಬುದನ್ನು ಅವರು ಒಪ್ಪಿಕೊಂಡರು. ಅಫ್ಘಾನಿಸ್ತಾನದ ದೀರ್ಘಕಾಲೀನ ಆರ್ಥಿಕ ಅಭಿವೃದ್ಧಿಯ ಅಗತ್ಯವನ್ನು ಎತ್ತಿ ತೋರಿಸಿದರು.

ನವದೆಹಲಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ:

ಇರಾನ್, ರಷ್ಯಾ ಮತ್ತು ತಜಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ ಎಲ್ಲಾ ಐದು ಮಧ್ಯ ಏಷ್ಯಾದ ದೇಶಗಳನ್ನು ಅಫ್ಘಾನಿಸ್ತಾನದ ಎನ್ಎಸ್ಎ ಮಟ್ಟದ ಸಭೆಯಲ್ಲಿ ಭಾಗವಹಿಸಲು ಭಾರತ ಆಹ್ವಾನಿಸಿದೆ. ನವದೆಹಲಿಯಲ್ಲಿ ನವೆಂಬರ್ 10ರಂದು ಭಾರತದ NSA ಅಜಿತ್ ದೋವಲ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರರ (NSAs) ಮಟ್ಟದ ಸಭೆ ನಡೆಯಲಿದೆ. ಈ ಹಿಂದಿನ ಎರಡು ಸಭೆಗಳನ್ನು 2018ರ ಸೆಪ್ಟೆಂಬರ್ ಮತ್ತು 2019ರ ಡಿಸೆಂಬರ್ ತಿಂಗಳಿನಲ್ಲಿ ಇರಾನ್‌ನಲ್ಲಿ ನಡೆಸಲಾಗಿತ್ತು. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಭಾರತದಲ್ಲಿ ಮೂರನೇ ಸಭೆಯನ್ನು ನಡೆಸುವುದಕ್ಕೆ ಸಾಧ್ಯವಾಗಿರಲಿಲ್ಲ.

ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆ ಉದ್ದೇಶ:

ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯು ಗಡಿಯಾಚೆಗಿನ ಭಯೋತ್ಪಾದಕ ಬೆದರಿಕೆ, ಭಯೋತ್ಪಾದಕ ಗುಂಪುಗಳ ಉಪಸ್ಥಿತಿ, ರಾಜಕೀಯ ಅಸ್ಥಿರತೆ ಮತ್ತು ಅಫ್ಘಾನಿಸ್ತಾನದಿಂದ ಉಗ್ರವಾದದ ಹರಡುವಿಕೆ ಮತ್ತು ಆಮೂಲಾಗ್ರ ವಿಚಾರ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಅಫ್ಘಾನಿಸ್ತಾನದ ಪ್ರಜಾಪ್ರಭುತ್ವ ಸರ್ಕಾರದ ವಿರುದ್ಧ ದಂಗೆ ಎದ್ದು ತಾಲಿಬಾನ್ ಸಂಘಟನೆಯು ತಮ್ಮದೇ ಸರ್ಕಾರ ರಚಿಸಿದ ನಂತರದಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಭಾರತವು ವಿಶೇಷ ಕಾಳಜಿಯನ್ನು ಹೊಂದಿದೆ. ತಾಲಿಬಾನ್ ಸರ್ಕಾರ ರಚನೆ ನಂತರದಲ್ಲಿ ಎದುರಾಗುವ ಭದ್ರತಾ ಸವಾಲುಗಳು, ಅಫ್ಘಾನಿಸ್ತಾನದಲ್ಲಿ ಇರುವ ಸ್ಥಿರತೆ, ಅಂತರ್ಗತ ಸರ್ಕಾರ ರಚನೆ ಹಾಗೂ ಪ್ರಸ್ತುತ ಚರ್ಚಿಸಬೇಕಾದ ವಿಷಯಗಳನ್ನು ಪ್ರಮುಖ ವಿಷಯಗಳನ್ನಾಗಿ ಗುರುತಿಸಲಾಗಿದೆ.

ಎನ್ಎಸ್ಎ ಸಭೆಗೆ ಹಾಜರಾಗಲು ಎಷ್ಟು ರಾಷ್ಟ್ರಗಳಿಗೆ ಆಹ್ವಾನ?:

ಚೀನಾ, ಇರಾನ್, ಕಜಕಿಸ್ತಾನ್, ಕಿರ್ಗಿಸ್ತಾನ್, ಪಾಕಿಸ್ತಾನ, ರಷ್ಯಾ, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಆಹ್ವಾನವನ್ನು ನೀಡಲಾಗಿದೆ. ಕಳೆದ ತಿಂಗಳು ನವದೆಹಲಿ ಆಹ್ವಾನಿತ ರಾಷ್ಟ್ರಗಳ ರಾಯಭಾರ ಕಚೇರಿಯ ಮೂಲಕ ರಾಷ್ಟ್ರೀಯ ಭದ್ರತಾ ಮಂಡಳಿಯ ಸೆಕ್ರೆಟರಿಯೇಟ್‌ನಿಂದ ಆಹ್ವಾನಗಳನ್ನು ಕಳುಹಿಸಲಾಗಿತ್ತು.

ಇರಾನ್, ರಷ್ಯಾ ಮತ್ತು ತಜಿಕಿಸ್ತಾನ್, ಕಿರ್ಗಿಸ್ತಾನ್, ಕಜಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತುರ್ಕಮೆನಿಸ್ತಾನ್ ಸೇರಿದಂತೆ ಎಲ್ಲಾ ಐದು ಮಧ್ಯ ಏಷ್ಯಾದ ದೇಶಗಳು ಸಭೆಯಲ್ಲಿ ಭಾಗವಹಿಸುವುದು ಖಚಿತವಾಗಿದೆ. ಆದರೆ, ಚೀನಾ ಮತ್ತು ಪಾಕಿಸ್ತಾನ ಭಾಗವಹಿಸುವಿಕೆ ಬಗ್ಗೆ ಖಚಿತಪಡಿಸಿಲ್ಲ. ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ಸಭೆಗೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ.

   Team India ಹೊಸ ರೂಪ ಪಡೆದುಕೊಂಡಿದೆ | Oneindia Kannada
   English summary
   First Taliban Must Get Legitimacy Within Afghanistan: Ajit Doval And Uzbek, Tajik NSAs Discussed Subjects.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X