• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಂಕ್ ಕಾಂಗ್‌ನಲ್ಲಿ ಮನುಷ್ಯನಿಂದ ನಾಯಿಗೆ ಕೊರೊನಾ ಸೋಂಕು

|

ಕೊರೊನಾ ವೈರಸ್ ಸೋಂಕು ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳಿಗೂ ಹಬ್ಬಿದೆ. ಹಾಂಕ್ ಕಾಂಗ್ ದೇಶದಲ್ಲಿ ನಾಯಿಯೊಂದಕ್ಕೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ಕೊರೊನಾ ವೈರಸ್ ಇರುವ ಮನುಷ್ಯನಿಂದ ನಾಯಿಗೆ ಸೋಂಕು ತಗುಲಿದೆ. ಕೊರೊನ ವೈರಸ್ ಈವರೆಗೆ 80 ದೇಶಗಳಲ್ಲಿ ಹಬ್ಬಿದೆ. ಆದರೆ, ಮನುಷ್ಯನಿಂದ ಪ್ರಾಣಿಗೆ ಕೊರೊನಾ ವೈರಸ್ ಹರಡಿದ ಮೊದಲ ಪ್ರಕರಣ ಇದಾಗಿದೆ.

ಕೊರೊನಾ ಕಂಟಕ: ಭಾರತದ ನಿರ್ಧಾರದಿಂದ ಯುರೋಪ್ ರಾಷ್ಟ್ರಗಳಲ್ಲಿ ಆತಂಕ

ಆ ನಾಯಿಯನ್ನು ತಪಾಸಣೆ ನಡೆಸಲಾಗುತ್ತಿದೆ. ಮನುಷ್ಯನ ದೇಹದಲ್ಲಿ ಕಂಡು ಬಂದ ಪ್ರಮಾಣದ ವೈರಸ್ ನಾಯಿ ದೇಹದಲ್ಲಿ ಪತ್ತೆ ಆಗಿಲ್ಲ. ಇದು ''ವೀಕ್ ಪಾಸಿಟಿವ್'' ಆಗಿದೆ ಎಂದು ಹಾಂಕ್ ಕಾಂಗ್‌ನ ಕೃಷಿ, ಮೀನುಗಾರಿಕೆ ಮತ್ತು ಸಂರಕ್ಷಣಾ ಇಲಾಖೆ ತಿಳಿಸಿದೆ.

ಆ ನಾಯಿಯನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ. ನಾಯಿಯನ್ನು ಹೆಚ್ಚಿನ ತಪಾಸಣೆಗೆ ಒಳಪಡಿಸಿದ್ದು, ಆ ತಪಾಸಣೆಯಲ್ಲಿ ವೈರಸ್ ಇಲ್ಲ ಎಂದಾದರೆ ಮಾತ್ರ ನಾಯಿಯನ್ನು ಅದರ ಮಾಲೀಕರಿಗೆ ಹಿಂದಿರುಗಿಸಲಾಗುತ್ತದೆ.

ಲೈಂಗಿಕ ಸಂಪರ್ಕ ಬೆಳೆಸುವುದರಿಂದ ಮಾರಕ ಕೊರೊನಾ ವೈರಸ್ ಹರಡಬಹುದೇ?

ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ಸೈಟ್ ನಲ್ಲಿ ಮನುಷ್ಯನಿಂದ ಪ್ರಾಣಿಗಳಿಗೆ ಕೊರೊನಾ ವೈರಸ್ ಹರಡುತ್ತದೆ ಎನ್ನುವ ಮಾಹಿತಿ ಇಲ್ಲ. ಈವರೆಗೆ ಹಾಂಗ್ ಕಾಂಗ್ ನಲ್ಲಿ 103 ಮಂದಿಗೆ ಕೊರೊನಾ ವೈರಸ್ ಇರುವುದು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಅಲ್ಲಿನ ಶಾಪಿಂಗ್ ಮಾಲ್ ಗಳು, ರೆಸ್ಟೋರೆಂಟ್ ಶಾಲೆಗಳು ಏಪ್ರಿಲ್ ಮಧ್ಯದವರೆಗೆ ಮುಚ್ಚಲಿವೆ.

English summary
First human to animal coronavirus transmission case in Hong Kong.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X