ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಒಮನ್‌ನಲ್ಲಿ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕು ಪತ್ತೆ
ದೋಹಾ, ಜನವರಿ 06:ಬ್ರಿಟನ್‌ನಲ್ಲಿ ಕಾಣಿಸಿಕೊಂಡಿರುವ ರೂಪಾಂತರಿ ಕೊರೊನಾ ಸೋಂಕು ಇದೀಗ ಒಮನ್ ದೇಶದಲ್ಲೂ ಕಂಡುಬಂದಿದೆ.
ಕೊರೊನ ಹೊಸ ಪ್ರಕರಣ ಒಮನ್ ನ ವಿದೇಶಿ ನಿವಾಸಿಯೊಬ್ಬರಿಂದ ಬಂದಿದ್ದು, ಅವರು ಕ್ಯಾರೆಂಟೈನ್ ನಲ್ಲಿದ್ದಾಗ ಉಸಿರಾಟದ ತೊಂದರೆ ಇದ್ದಾಗ ಗೋಚರವಾಗಿದೆ ಎಂದೂ ಸಚಿವಾಲಯ ಹೇಳಿದೆ.
ಮುಂದುವರಿದ ಚೀನಾ ಕಿರಿಕ್: ಕೊರೊನಾ ಅಧ್ಯಯನ ಮಾಡಲು WHO ತಂಡಕ್ಕೆ ಸಿಗದ ಅನುಮತಿ
ಯುಕೆ ನಿಂದ ಆಗಮಿಸಿದ ವಿದೇಶಿಯರಲ್ಲಿ ಹೊಸ ಪರಿಧಮನಿಯ ಕೊರೊನಾ ಸೋಂಕು ಇರುವುದನ್ನು ಒಮಾನಿ ವೈದ್ಯಕೀಯ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ ಎಂದು ಒಮಾನಿ ಆರೋಗ್ಯ ಸಚಿವಾಲಯ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಬ್ರಿಟನ್‌ನ ರೂಪಾಂತರಿ ಕೊರೊನಾ ಸೋಂಕು ಹಲವು ದೇಶಗಳಲ್ಲಿ ಹರಡುತ್ತಿದೆ, ಅಮೆರಿಕ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈ ಸೋಂಕು ಪತ್ತೆಯಾಗಿದ್ದು, ಆತಂಕವನ್ನು ಹೆಚ್ಚಿಸಿದೆ. ಈ ಸೋಂಕು ಕೊರೊನಾ ಸೋಂಕಿಗಿಂತ ಶೇ.70ರಷ್ಟು ವೇಗವಾಗಿ ಸೋಂಕನ್ನು ಹರಡಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.