ದಕ್ಷಿಣ ತೈವಾನ್‌ನಲ್ಲಿ ಅಗ್ನಿ ಅನಾಹುತ: 46 ಮಂದಿ ಸಾವು, ಐವತ್ತಕ್ಕೂ ಹೆಚ್ಚು ಜನರಿಗೆ ಗಾಯ

ದಕ್ಷಿಣ ತೈವಾನ್‌,ಅಕ್ಟೋಬರ್ 14: ದಕ್ಷಿಣ ತೈವಾನ್‌ನ 13 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಿದ್ದು 46 ಜನರು ಸಾವನ್ನಪ್ಪಿದ್ದಾರೆ. ಐವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಗುರುವಾರ ಬೆಳಗಿನ ಜಾವ 3 ಗಂಟೆಯ ಸುಮಾರಿಗೆ 13 ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ಕಾವೋಸಿಯುಂಗ್ ನಗರದ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ 55 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಅದರಲ್ಲಿ 14 ಜನರ ಜೀವ ಉಳಿಯುವ ಸಾಧ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೈವಾನ್‌ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದವರ ಸಂಖ್ಯೆಯ ಅಧಿಕೃತ ಮಾಹಿತಿ ಲಭ್ಯವಿಲ್ಲ. ಆದರೆ ಘಟನೆಯಲ್ಲಿ ಸಾವಿನ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ಆಸ್ಪತ್ರೆಯಲ್ಲಿರುವ ಶವಗಳ ಆಧಾರದ ಮೇಲೆ ಸಾವನ್ನಪ್ಪಿದವರ ಸಂಖ್ಯೆಯನ್ನು 46 ಎಂದು ಹೇಳಲಾಗಿದೆ.

ಅಗ್ನಿಶಾಮಕ ದಳದವರು ಶೋಧ ಮತ್ತು ರಕ್ಷಣಾ ಪ್ರಯತ್ನಗಳನ್ನು ನಡೆಸಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಅಗ್ನಿಶಾಮಕ ದಳದ ಹೇಳಿಕೆಯ ಪ್ರಕಾರ ಬೆಂಕಿಯು ಅತ್ಯಂತ ಭೀಕರವಾಗಿದೆ. ಹೀಗಾಗಿ ಕಟ್ಟಡದ ಹಲವು ಮಹಡಿಗಳು ನಾಶವಾಗಿವೆ. ಸಿಬ್ಬಂದಿಗಳು ಕಟ್ಟಡದ ಒಳಪ್ರವೇಶಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಬಹುಮಹಡಿ ಕಟ್ಟಡದಲ್ಲಿ ವಾಸವಿರುವ ಜನ ಆಳವಾಗಿ ನಿದ್ರೆಗೆ ಜಾರಿದ ಬಳಿಕ ಘಟನೆ ಸಂಭವಿಸಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Fire leaves 46 dead, dozens injured in southern Taiwan

ಅಗ್ನಿಶಾಮಕ ದಳದವರು ಬೆಂಕಿಯ ಮೂಲವನ್ನು ಖಚಿತವಾಗಿ ತಿಳಿದಿಲ್ಲ ಎಂದಿದ್ದಾರೆ. ಆದರೆ ಗಮನಿಸಿದೆ ಹೊತ್ತುಕೊಂಡ ಬೆಂಕಿಯಿಂದ ಜನ ನಿದ್ರೆಯಲ್ಲೇ ಸುಟ್ಟುಹೋಗಿದ್ದಾರೆ. ಘಟನೆ ಎಷ್ಟು ಬೀಕರವಾಗಿದೆ ಅಂದರೆ ಕನಿಷ್ಠ 11 ಮೃತದೇಹಗಳನ್ನು ನೇರವಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ ಎಂದು ಅಗ್ನಿಶಾಮಕ ಮುಖ್ಯಸ್ಥ ಲಿ ಚಿಂಗ್-ಹ್ಸಿಯು ಘಟನಾ ಸ್ಥಳದಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಗುರುತು ಪತ್ತೆಯಾಗದಂತೆ ದೇಹಗಳು ಸುಟ್ಟು ಹೋಗಿವೆ ಎಂದು ಅವರು ವಿವರಿಸಿದ್ದಾರೆ.

ಅಗ್ನಿಶಾಮಕ ದಳದವರು ಇನ್ನೂ ಶೋಧ ಮತ್ತು ರಕ್ಷಣಾ ಪ್ರಯತ್ನಗಳನ್ನು ನಡೆಸಿದ್ದರಿಂದ ಸಾವಿನ ಸಂಖ್ಯೆ 46 ದಾಟಬಹುದು ಎಂದು ಲಿ ಹೇಳಿದರು.

ಅಗ್ನಿಶಾಮಕ ದಳದವರು ಬೀದಿಯಿಂದ ನೀರನ್ನು ಸಿಂಪಡಿಸುತ್ತಿದ್ದಂತೆ ತೈವಾನೀಸ್ ದೂರದರ್ಶನದಲ್ಲಿ ತೋರಿಸಿದ ವೀಡಿಯೊದಲ್ಲಿ ಬೆಂಕಿಯ ಜ್ವಾಲೆ ಕಿತ್ತಳೆ ಬಣ್ಣಕ್ಕೆ ತಿರುಗುವುದನ್ನು ಕಾಣಬಹುದು. ಜೊತೆಗೆ ಕಟ್ಟಡದ ಕೆಳಗಿನ ಮಹಡಿಗಳಿಂದ ಹೊಗೆ ಹೊರಹೊಮ್ಮುತ್ತಿರುವುದನ್ನು ತೋರಿಸಿದೆ. ಬೆಳಗಾದ ನಂತರ ಎತ್ತರದ ಪ್ಲಾಟ್‌ಫಾರ್ಮ್‌ಗಳಿಂದ ಇನ್ನೂ ಹೊಗೆಯಾಡುತ್ತಿರುವ ಕಟ್ಟಡದ ಮಧ್ಯದ ಮಹಡಿಗಳಿಗೆ ಅಗ್ನಿ ಶಾಮಕದಳದ ಸಿಬ್ಬಂಧಿಗಳು ನೀರನ್ನು ಸಿಂಪಡಿಸುವುದನ್ನು ಕಾಣಬಹುದು.

ಬೆಂಕಿಯ ಕಾರಣ ಅಸ್ಪಷ್ಟವಾಗಿದೆ. ಆದರೆ ಅಗ್ನಿಶಾಮಕ ಸಿಬ್ಬಂದಿ ಜ್ವಾಲೆಗಳು ಹೆಚ್ಚು ತೀವ್ರವಾಗಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ ಎಂದು ಅಗ್ನಿಶಾಮಕ ದಳ ಹೇಳಿದೆ.

ಮುಂಜಾನೆ 3 ಗಂಟೆ ಸುಮಾರಿಗೆ ಸ್ಫೋಟದ ಸದ್ದು ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತೈವಾನ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಅಲ್ಲದೆ ಕಟ್ಟಡ ಸುಮಾರು 40 ವರ್ಷಗಳಷ್ಟು ಹಳೆಯದಾಗಿದ್ದು ಅಗ್ನಿ ದುರಂತದಿಂದ ಕೆಳ ಹಂತದಲ್ಲಿರುವ ಅಂಗಡಿಗಳು ಮತ್ತು ಮೇಲಿನ ಅಪಾರ್ಟ್ಮೆಂಟ್ಗಳು, ಕೆಳಗಿನ ಮಹಡಿಗಳು ಸಂಪೂರ್ಣವಾಗಿ ಕಪ್ಪಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+