ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking News: ಇರಾಕ್‌ನ ಕೊವಿಡ್-19 ಆಸ್ಪತ್ರೆ ಬೆಂಕಿಗೆ 50 ಮಂದಿ ಸಾವು

|
Google Oneindia Kannada News

ಬಾಗ್ದಾದ್, ಜುಲೈ 13: ದಕ್ಷಿಣ ಇರಾಕ್ ಪ್ರದೇಶದಲ್ಲಿ ಇರುವ ಕೊರೊನಾವೈರಸ್ ಆಸ್ಪತ್ರೆಯ ವಾರ್ಡಿನಲ್ಲಿ ಸಂಭವಿಸಿರುವ ಅಗ್ನಿ ಅವಘಡದಲ್ಲಿ 50 ಮಂದಿ ಪ್ರಾಣ ಬಿಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ದಕ್ಷಿಣದ ನಾಸಿರಿಯಾ ನಗರದ ಅಲ್-ಹುಸೇನ್ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೃತಪಟ್ಟವರ ಮೈಯಲ್ಲಿ ತೀವ್ರವಾದ ಸುಟ್ಟ ಗಾಯಗಳಾಗಿವೆ. 50 ಮಂದಿ ಮೃತಪಟ್ಟಿದ್ದು, ಇನ್ನೂ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇರಾಕ್‌: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ಸರಣಿ ರಾಕೆಟ್ ದಾಳಿಇರಾಕ್‌: ಅಮೆರಿಕ ರಾಯಭಾರ ಕಚೇರಿ ಗುರಿಯಾಗಿಸಿ ಸರಣಿ ರಾಕೆಟ್ ದಾಳಿ

ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. ನಾಸಿರಿಯಾದ ಧಿ ಕ್ವಾರ್ ಪ್ರಾಂತ್ಯದ ಇನ್ನೊಬ್ಬ ಆರೋಗ್ಯ ಅಧಿಕಾರಿಯು ಆಮ್ಲಜನಕ ಸಿಲಿಂಡರ್ ಸ್ಫೋಟದಿಂದಾಗಿ ಅಗ್ನಿ ಅವಘಡ ಸಂಭವಿಸಿದೆ ಎಂದು ದೂಷಿಸಿದ್ದಾರೆ.

 Fire In Covid-19 Hospital: 50 Dead And Several People Injured in Southern Iraq

3 ತಿಂಗಳ ಹಿಂದೆಯಷ್ಟೇ ಹೊಸ ವಾರ್ಡ್:

ಕಳೆದ ಮೂರು ತಿಂಗಳ ಹಿಂದೆಯಷ್ಟೇ ತೆರೆಯಲಾದ ಹೊಸ ವಾರ್ಡ್‌ನಲ್ಲಿ 70 ಹಾಸಿಗೆಗಳಿವೆ ಎಂದು ಇಬ್ಬರು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯವು ಬೆಂಕಿಯ ಕಾರಣದ ಬಗ್ಗೆ ಅಧಿಕೃತ ಅಂಕಿ-ಸಂಖ್ಯೆಯ ಬಗ್ಗೆ ಮಾಹಿತಿ ನೀಡಿಲ್ಲ.

ಅಗ್ನಿ ಅವಘಡ ನಡೆದ ಸಂದರ್ಭದಲ್ಲಿ ಕೊವಿಡ್-19 ವಾರ್ಡಿನಲ್ಲಿ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಸೇರಿದಂತೆ 63 ಜನರಿದ್ದರು ಎಂದು ಧಿ ಖಾರ್ ಆರೋಗ್ಯ ಇಲಾಖೆಯ ವಕ್ತಾರ ಅಮ್ಮರ್ ಅಲ್-ಜಮಿಲಿ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕೊವಿಡ್-19 ಆಸ್ಪತ್ರೆಯ ವಾರ್ಡ್ ಅನ್ನು ವೇಗವಾಗಿ ಹೊತ್ತಿಕೊಳ್ಳುವ ವಸ್ತುಗಳಿಂದಲೇ ಕಟ್ಟಲಾಗಿದೆ. ಈ ಹಿನ್ನೆಲೆಯಲ್ಲಿ ವಾರ್ಡ್ ಬೆಂಕಿಗೆ ಆಹುತಿಯಾಗಿದೆ ಎಂದು ಇರಾಕ್‌ನ ನಾಗರಿಕ ರಕ್ಷಣಾ ವಿಭಾಗದ ಮುಖ್ಯಸ್ಥ ಮೇಜರ್ ಜನರಲ್ ಖಾಲಿದ್ ಬೋಹನ್ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದಾರೆ.

English summary
Fire In Covid-19 Hospital: 50 Dead And Several People Injured in Southern Iraq.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X