• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಲಸಿಗರನ್ನು ಕೈ ಬೀಸಿ ಕರೆಯುತ್ತಿದೆ 'ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರ' ಫಿನ್‌ಲ್ಯಾಂಡ್‌: ಕಾರಣ ಇಲ್ಲಿದೆ

|
Google Oneindia Kannada News

ಹೆಲ್ಸಿಂಕಿ, ಜೂ.22: ಭೂಮಿಯ ಮೇಲಿನ ಅತ್ಯಂತ ಸಂತೋಷದಾಯಕ ರಾಷ್ಟ್ರ ಎಂದು ಆಗಾಗೆ ಕರೆಯಲ್ಪಡುವ ಫಿನ್‌ಲ್ಯಾಂಡ್ ಈಗ ವಲಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಈ ರಾಷ್ಟ್ರದಲ್ಲಿ ತೀವ್ರವಾಗಿ ಉದ್ಯೋಗಿಗಳ ಕೊರತೆ ಕಾಣಿಸಿಕೊಂಡಿದ್ದು ಈ ಹಿನ್ನೆಲೆ ವಲಸಿಗರ ಅತ್ಯಂತ ಸಂತೋಷದಾಯಕವಾಗಿ ಸ್ವಾಗತಿಸುತ್ತಿದೆ ಈ ವಿಶ್ವದ ಅತ್ಯಂತ ಸಂತೋಷದಾಯಕ ರಾಷ್ಟ್ರ.

ಈ ಬಗ್ಗೆ ಎಎಫ್‌ಪಿಗೆ ಮಾಹಿತಿ ನೀಡಿರುವ ಏಜೆನ್ಸಿ ಟ್ಯಾಲೆಂಟೆಡ್ ಸೊಲ್ಯೂಷನ್ಸ್‌ನ ನೇಮಕಾತಿ ಸಕು ತಿಹವೆರೈನ್, "ದೇಶಕ್ಕೆ ಬರುವ ಜನರ ಹೆಚ್ಚಳ ನಮಗೆ ಅಗತ್ಯವಾಗಿದೆ. ಇದನ್ನು ನಾವು ಒಪ್ಪಿಕೊಳ್ಳುತ್ತೇವೆ," ಎಂದು ಹೇಳಿದ್ದಾರೆ.

'ಯೋಗ ನೇಪಾಳದಲ್ಲಿ ಹುಟ್ಟಿಕೊಂಡಿದೆ, ಭಾರತದಲ್ಲಿ ಅಲ್ಲ' : ಪ್ರಧಾನಿ ಓಲಿ'ಯೋಗ ನೇಪಾಳದಲ್ಲಿ ಹುಟ್ಟಿಕೊಂಡಿದೆ, ಭಾರತದಲ್ಲಿ ಅಲ್ಲ' : ಪ್ರಧಾನಿ ಓಲಿ

"ವೃದ್ದರ ವೆಚ್ಚವನ್ನು ಭರಿಸಲು ಸಹಾಯ ಮಾಡಲು ಕಾರ್ಮಿಕರ ಅಗತ್ಯವಿದೆ," ಎಂದು ಹೇಳಿರುವ ಸಕು ತಿಹವೆರೈನ್, ನೇಮಕಾತಿ ಬಗ್ಗೆ ವಿವರಣೆ ನೀಡಿದ್ದಾರೆ. ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಜನಸಂಖ್ಯೆ ಇಳಿಕೆಯು ದುಡಿಯುವ ವರ್ಗದ ಕುಂಠಿತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ವೃದ್ದರ ಜನಸಂಖ್ಯೆಯಲ್ಲಿ ತೀವ್ರ ಹೆಚ್ಚಳ

ವೃದ್ದರ ಜನಸಂಖ್ಯೆಯಲ್ಲಿ ತೀವ್ರ ಹೆಚ್ಚಳ

ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ವೃದ್ದರು ಹೆಚ್ಚುತ್ತಿದ್ದಾರೆ. ಕೆಲವು ದೇಶಗಳು ಫಿನ್‌ಲ್ಯಾಂಡ್‌ನಂತೆ ತೀವ್ರವಾಗಿ ಇಂತಹ ಪರಿಣಾಮಗಳನ್ನು ಅನುಭವಿಸುತ್ತಿದೆ. ದುಡಿಯುವ ವಯಸ್ಸಿನ 100 ಜನರಿಗೆ 65 ವರ್ಷಕ್ಕೆ ಮೇಲ್ಪಟ್ಟವರು 39.2 ಕ್ಕಿಂತ ಹೆಚ್ಚು ಇದ್ದಾರೆ. ವಯಸ್ಸಾದ ಜನಸಂಖ್ಯೆಯು ಹೆಚ್ಚಾಗಿರುವ ದೇಶಗಳ ಪೈಕಿ ಜಪಾನ್‌ನ ಎರಡನೇ ಸ್ಥಾನದಲ್ಲಿ ಫಿನ್‌ಲ್ಯಾಂಡ್‌ ಇದೆ ಎಂದು ಯುಎನ್ ವರದಿ ಮಾಡಿದೆ. ಇದು 2030 ರ ವೇಳೆಗೆ "ವೃದ್ಧಾಪ್ಯ ಅವಲಂಬನೆ ಅನುಪಾತ" 47.5 ಕ್ಕೆ ಏರಿಕೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ರಾಷ್ಟ್ರವು ಸಾರ್ವಜನಿಕ ಸೇವೆಗಳನ್ನು ನಿರ್ವಹಿಸಲು ಮತ್ತು ಪಿಂಚಣಿ ಕೊರತೆಯನ್ನು ಸರಿದೂಗಿಸಲು ವಲಸೆ ಮಟ್ಟವನ್ನು ಪ್ರಾಯೋಗಿಕವಾಗಿ ದ್ವಿಗುಣಗೊಳಿಸುವ ಅಗತ್ಯವಿದೆ ಎಂದು ಸರ್ಕಾರ ಎಚ್ಚರಿಸಿದೆ. ಫಿನ್‌ಲ್ಯಾಂಡ್‌ ಒಂದು ಆಕರ್ಷಕ ತಾಣವಾಗಿ ವರದಿಗಳು ವಿವರಿಸುತ್ತದೆ. ಇಲ್ಲಿನ ಜೀವನದ ಗುಣಮಟ್ಟ, ಸ್ವಾತಂತ್ರ್ಯ ಮತ್ತು ಲಿಂಗ ಸಮಾನತೆ, ಕಡಿಮೆ ಭ್ರಷ್ಟಾಚಾರ, ಅಪರಾಧ ಮತ್ತು ಮಾಲಿನ್ಯಗಳು ಹಲವಾರು ಮಂದಿ ವಲಸಿಗರನ್ನು ಆಕರ್ಷಿಸುತ್ತದೆ. ಆದರೆ ವಲಸೆ-ವಿರೋಧಿ ಮನೋಭಾವ ಮತ್ತು ಹೊರಗಿನವರನ್ನು ನೇಮಿಸಿಕೊಳ್ಳಲು ಹಿಂಜರಿಯುವುದು ಪಶ್ಚಿಮ ಯುರೋಪಿನಲ್ಲಿ ವ್ಯಾಪಕವಾಗಿ ಹರಡಿದೆ.

ಏನಿದು ಟ್ಯಾಲೆಂಟ್ ಬೂಸ್ಟ್

ಏನಿದು ಟ್ಯಾಲೆಂಟ್ ಬೂಸ್ಟ್

ವರ್ಷಗಳ ಬಳಿಕ ಈ ಸರ್ಕಾರವು ಸಮಸ್ಯೆಯನ್ನು ಗುರುತಿಸುತ್ತಿವೆ. ಇದು ವೃದ್ದರ ಜನಸಂಖ್ಯೆಯಲ್ಲಿ ತೀವ್ರ ಹೆಚ್ಚಳದ ಪರಿಣಾಮದಿಂದ ಉಂಟಾಗಿದೆ ಎಂದು ಫಿನ್ಲೆಂಡ್ ಅಕಾಡೆಮಿಯ ಸಂಶೋಧನಾ ಸಹವರ್ತಿ ಚಾರ್ಲ್ಸ್ ಮ್ಯಾಥೀಸ್ ಹೇಳಿದ್ದಾರೆ. ಈಗ ನಾಲ್ಕನೇ ವರ್ಷ ಪೂರೈಸಿದ, ಸರ್ಕಾರದ "ಟ್ಯಾಲೆಂಟ್ ಬೂಸ್ಟ್" ಕಾರ್ಯಕ್ರಮದಲ್ಲಿ ತಜ್ಞರಲ್ಲಿ ಮ್ಯಾಥೀಸ್ ಒಬ್ಬರು ಆಗಿದ್ದಾರೆ. "ಟ್ಯಾಲೆಂಟ್ ಬೂಸ್ಟ್" ಕಾರ್ಯಕ್ರಮವು ಸ್ಪೇನ್‌ನ ಆರೋಗ್ಯ ಕಾರ್ಯಕರ್ತರು, ಸ್ಲೋವಾಕಿಯಾದ ಲೋಹದ ಕೆಲಸಗಾರರು ಮತ್ತು ರಷ್ಯಾ, ಭಾರತ ಮತ್ತು ಆಗ್ನೇಯ ಏಷ್ಯಾದ ಐಟಿ ಮತ್ತು ಕಡಲ ತಜ್ಞರನ್ನು ಗುರಿಯಾಗಿಸಿದೆ. ಆದರೆ ಹಿಂದಿನ ಅಂತಹ ಪ್ರಯತ್ನಗಳು ಸಫಲವಾಗಿಲ್ಲ ಎನ್ನಲಾಗಿದೆ.

'ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಮಹಿಳೆಯರ ಬಟ್ಟೆಗಳೇ ಕಾರಣ' : ಮತ್ತೆ ಇಮ್ರಾನ್ ಖಾನ್‌ ವಿವಾದ'ಪಾಕಿಸ್ತಾನದಲ್ಲಿ ಅತ್ಯಾಚಾರಕ್ಕೆ ಮಹಿಳೆಯರ ಬಟ್ಟೆಗಳೇ ಕಾರಣ' : ಮತ್ತೆ ಇಮ್ರಾನ್ ಖಾನ್‌ ವಿವಾದ

ವಲಸಿಗರು ಫಿನ್‌ಲ್ಯಾಂಡ್‌ನಲ್ಲಿ ಹೆಚ್ಚು ಸಮಯ ಉಳಿಯಲ್ಲ, ಕಾರಣವೇನು?

ವಲಸಿಗರು ಫಿನ್‌ಲ್ಯಾಂಡ್‌ನಲ್ಲಿ ಹೆಚ್ಚು ಸಮಯ ಉಳಿಯಲ್ಲ, ಕಾರಣವೇನು?

2013 ರಲ್ಲಿ, ಪಶ್ಚಿಮ ಪಟ್ಟಣವಾದ ವಾಸಾಗೆ ನೇಮಕಗೊಂಡ ಎಂಟು ಸ್ಪ್ಯಾನಿಷ್ ದಾದಿಯರಲ್ಲಿ ಐವರು ಕೆಲವು ತಿಂಗಳು ವಾಪಾಸ್‌ ತೆರಳಿದ್ದಾರೆ. ಫಿನ್‌ಲ್ಯಾಂಡ್‌ನ ಅತಿಯಾದ ಬೆಲೆ, ಶೀತ ಹವಾಮಾನ ಹಾಗೂ ಭಾಷೆಯ ಸಮಸ್ಯೆಯಿಂದ ಇಲ್ಲಿ ವಲಸಿಗರು ನಿಲ್ಲುತ್ತಿಲ್ಲ ಎಂದು ಕೂಡಾ ಹೇಳಲಾಗಿದೆ. ಆದರೆ ಕಳೆದ ದಶಕದಲ್ಲಿ ಫಿನ್‌ಲ್ಯಾಂಡ್‌ ನಿವ್ವಳ ವಲಸೆ ಪ್ರಮಾಣವಿದೆ. 2019 ರಲ್ಲಿ ಹೊರಡುವುದಕ್ಕಿಂತ ಸುಮಾರು 15,000 ಜನರು ಆಗಮಿಸಿದ್ದಾರೆ. ಆದರೆ ದೇಶವನ್ನು ತೊರೆದವರಲ್ಲಿ ಹೆಚ್ಚಿನವರು ಉನ್ನತ ವಿದ್ಯಾವಂತರು ಎಂದು ಅಧಿಕೃತ ಅಂಕಿಅಂಶಗಳು ತೋರಿಸುತ್ತವೆ.

  Americaದಿಂದ ಭಾರತಕ್ಕೆ ಬಂದ ಲಸಿಕೆ ಎಷ್ಟು ಗೋತ್ತಾ | Oneindia Kannada
  ಉದ್ಯೋಗಿಗಳ ಕೊರತೆಯಲ್ಲ, ಮನಸ್ಥಿತಿಯ ಕೊರತೆ!

  ಉದ್ಯೋಗಿಗಳ ಕೊರತೆಯಲ್ಲ, ಮನಸ್ಥಿತಿಯ ಕೊರತೆ!

  ಅನೇಕ ಮಂದಿ ಈ ದೇಶದ ಬಗ್ಗೆ ಪೂರ್ವಾಗ್ರಹ ಹೊಂದಿದ್ದಾರೆ. ಇನ್ನು ಕೆಲವರು ಆರೋಪಗಳನ್ನೂ ಮಾಡಿದ್ದಾರೆ. ಅಹ್ಮದ್ (ವೃತ್ತಿಪರ ಕಾರಣಗಳಿಗಾಗಿ ಅವರ ಹೆಸರನ್ನು ಬದಲಾಯಿಸಬೇಕೆಂದು ವಿನಂತಿಸಿದವರು) 42 ವರ್ಷದ ವ್ಯಕ್ತಿಯೊಬ್ಬರು ಬಹುರಾಷ್ಟ್ರೀಯ, ಮನೆಯ ಡಿಜಿಟಲ್ ಉತ್ಪನ್ನಗಳನ್ನು ನಿರ್ಮಿಸುವಲ್ಲಿ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಆರು ತಿಂಗಳಿಂದ ಅಹ್ಮದ್‌ ಹೆಲ್ಸಿಂಕಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದು ಇದು ಫಲಪ್ರದವಾಗಲಿಲ್ಲ. "ಒಬ್ಬ ನೇಮಕಾತಿ ಮಾಡುವ ವ್ಯಕ್ತಿ ನನ್ನ ಕೈ ಕುಲುಕಲು ಕೂಡಾ ನಿರಾಕರಿಸಿದರು. ಅದು ಆತಂಕಕಾರಿ ಕ್ಷಣ," ಎಂದು ಎಎಫ್‌ಪಿಗೆ ತಿಳಿಸಿದರು. ಫಿನ್‌ಲ್ಯಾಂಡ್‌ನಲ್ಲಿ ಉದ್ಯೋಗ ಹುಡುಕಾಡುವ ಸಂದರ್ಭ ನಾರ್ವೆ, ಕತಾರ್, ಯುಕೆ ಮತ್ತು ಜರ್ಮನಿಯ ಪ್ರಮುಖ ಕಂಪನಿಗಳಿಂದ ಉದ್ಯೋಗವಕಾಶ ಬಂದಿದೆ. ಅಂತಿಮವಾಗಿ ಹೆಲ್ಸಿಂಕಿಯಿಂದ ಡಸೆಲ್ಡಾರ್ಫೆಗೆ ವಾರಕ್ಕೊಮ್ಮೆ ಪ್ರಯಾಣಿಸಲು ಪ್ರಾರಂಭಿಸಿದ ಅಹ್ಮದ್, "ಉದ್ಯೋಗಗಳಿಗೆ ಎಂದಿಗೂ ಕೊರತೆಯಿಲ್ಲ, ಮನಸ್ಥಿತಿಯ ಕೊರತೆಯಿದೆ," ಎಂದಿದ್ದಾರೆ. "ಸ್ಥಳೀಯ ಫಿನ್ನಿಷ್ ಕಾರ್ಮಿಕರನ್ನು ಮಾತ್ರ ನೇಮಿಸಿಕೊಳ್ಳಬೇಕೆಂಬ ತಮ್ಮ ನಿಯಮವನ್ನು ಸಡಿಲಗೊಳಿಸಲು ಹಲವು ಕಂಪನಿಗಳನ್ನು ಹಿಂಜರಿಯುತ್ತಿದೆ," ಎಂದು ಸಕು ತಿಹವೆರೈನ್ ಹೇಳಿದ್ದಾರೆ.

  (ಒನ್‌ಇಂಡಿಯಾ ಸುದ್ದಿ)

  English summary
  Repeatedly dubbed the happiest nation on the planet with world-beating living standards, Finland should be deluged by people wanting to relocate, but in fact it faces an acute workforce shortage.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X