ಪತ್ನಿಯ ಎದೆಹಾಲು ಕುಡಿದು ಕಾಂತಿಯುತ ಚರ್ಮ ಹೊಂದಿದ ಪತಿ....
ನವದೆಹಲಿ ನವೆಂಬರ್ 3: ತಾಯಿಯ ಎದೆ ಹಾಲು ಅಮೃತಕ್ಕಿಂತ ಮಿಗಿಲು. ಮಗುವಿನ ಬೆಳವಣಿಗೆಗೆ ಬೇಕಾಗುವ ಪೌಷ್ಟಿಕಾಂಶ ಮತ್ತು ಕಾರ್ಬೋಹೈಡ್ರೇಟ್‌ಗಳು ತಾಯಿಯ ಎದೆ ಹಾಲಿನಲ್ಲಿ ಹೇರಳವಾಗಿರುತ್ತವೆ. ಮಗುವಿಗೆ ರೋಗ ನಿರೋಧಕ ಶಕ್ತಿ ನೀಡಿ ಚರ್ಮದ ಸಮಸ್ಯೆಗಳನ್ನು ದೂರ ಮಾಡುವ ಎದೆ ಹಾಲು ಮಗುವಿನಂತೆ ವಯಸ್ಕರ ಆರೋಗ್ಯವನ್ನು ಸುಧಾರಿಸುತ್ತದೆಯಂತೆ. ಜೊತೆಗೆ ಅದು ವಯಸ್ಕರ ಚರ್ಮದಲ್ಲಿ ಕಾಂತಿಯನ್ನು ಕೂಡ ಹೆಚ್ಚಿಸಿದೆಯಂತೆ.
ಹೀಗೆಂದು ಅಮೆರಿಕಾದ ಅಲೆಕ್ಸಾಂಡರ್ (Alexander) ಮತ್ತು ರಾಚೆಲ್ ಬೈಲಿ (Rachel Bailey) ದಂಪತಿ ಹೇಳಿಕೊಂಡಿದ್ದಾರೆ. ಇದು ಇವರಿಬ್ಬರ ಸಂಬಂಧವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲದೆ ಪತಿಯನ್ನು ಆರೋಗ್ಯಕರವಾಗಿಸಿದೆ ಎಂದು ಪತ್ನಿ ಬೈಲಿ ಅವರು ಹೇಳಿಕೊಂಡಿದ್ದಾರೆ.

ಅಂದಹಾಗೆ ಪತಿ ಅಲೆಕ್ಸಾಂಡರ್‌ಗೆ ರಾಚೆಲ್ ಬೈಲಿ 2017ರಿಂದ ಹಾಲುಣಿಸುತ್ತಿದ್ದಾರೆ. 30 ವರ್ಷದ ತಾಯಿ ಅಲೆಕ್ಸಾಂಡರ್ ತನ್ನ ಮಗುವಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಎದೆಹಾಲು ಉತ್ಪಾದಿಸುವುದನ್ನು ಕಂಡುಕೊಂಡಾಗ ಹೆಚ್ಚುವರಿ ಹಾಲನ್ನು ವ್ಯರ್ಥ ಮಾಡುವುದು ಬೇಡವೆಂದು ನಿರ್ಧರಿಸಿದರು. ಇದರಿಂದ ಅವರು ತನ್ನ ಪತಿಗೆ ಎದೆಹಾಲು ನೀಡಲು ನಿರ್ಧರಿಸಿದರು. ಅಲೆಕ್ಸಾಂಡರ್ ಪ್ರಕಾರ, 'ಪತ್ನಿಯ ಎದೆ ಹಾಲು ಅವರ ಚರ್ಮವನ್ನು ಕಾಂತಿಯುತವಾಗಿಸಿದೆ. ರಾಚೆಲ್ ಮಕ್ಕಳಿಗೆ ಎದೆ ಹಾಲು ನೀಡಿ ಹೆಚ್ಚುವರಿ ಹಾಲನ್ನು ನನಗೆ ಕುಡಿಸುತ್ತಾರೆ. ಈ ಹಾಲು ಸಂಪೂರ್ಣವಾಗಿ ವಿಭಿನ್ನವಾಗಿದೆ' ಎನ್ನುತ್ತಾರೆ.
ಅಂದಹಾಗೆ ರಾಚೆಲ್ ಬೈಲಿ ಮೂರು ಮಕ್ಕಳ ತಾಯಿ. ಇವರು ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದಾಗ ಎದೆಹಾಲು ಅಧಿಕವಾಗಿ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಇದರಿಂದ ಆಕೆಗೆ ಭಯ ಕಾಡತೊಡಗಿತು. ಎದೆಹಾಲು ತೆಗೆದರೂ ಆಕೆಗೆ ಎದೆನೋವು ಕಾಣಿಸಿಕೊಳ್ಳುತ್ತಲೇ ಇತ್ತು. ಇದರಿಂದ ಗಾಬರಿಯಾದ ಬೈಲಿಗೆ ಸೋಂಕು ತಗುಲುವ ಭೀತಿ ಕೂಡ ಎದುರಾಯಿತು. ಆಗ ಪತಿಗೆ ಎದೆಹಾಲನ್ನು ನೀಡಲು ಪ್ರಾರಂಭಿಸಿದರು. ಹೀಗೆ ಆಕೆಯ ಪತಿ ಎದೆಹಾಲು ಕುಡಿಯಲು ಪ್ರಾರಂಭಿಸಿದರು.

ಪತ್ನಿಯ ಎದೆ ಹಾಲನ್ನು ಕುಡಿಯಲು ಪ್ರಾರಂಭಿಸಿದಾಗಿನಿಂದ ಅಲೆಕ್ಸಾಂಡರ್ ಅವರಿಗೆ ಒಂದು ಶೀತ ಕೂಡ ಕಾಣಿಸಿಕೊಂಡಿಲ್ಲ ಎಂದು ರಾಚೆಲ್ ವಿವರಿಸುತ್ತಾರೆ. ಕುತೂಹಲಕಾರಿಯಾಗಿ ಅವರ ಚರ್ಮದಲ್ಲಿ ಸುಧಾರಣೆಯಾಗಿದೆ ಎಂದು ಹಲವರು ಹೊಗಳಿದ್ದಾರೆ. ಪರಿಣಾಮವಾಗಿ ಅಲೆಕ್ಸಾಂಡರ್ ಈಗ ಹಸುವಿನ ಬದಲು ತನ್ನ ಹೆಂಡತಿಯ ಹಾಲನ್ನು ಕುಡಿಯಲು ಆದ್ಯತೆ ನೀಡುತ್ತಾರೆ.
ಆದರೆ 'ಮೊದಲಿನಂತೆ ಸದ್ಯ ನನಗೆ ಎದೆಹಾಲು ಹೆಚ್ಚುವರಿಯಾಗಿಲ್ಲ. ನಾವು ಒಟ್ಟಿಗೆ ಇದ್ದ ಗುಣಮಟ್ಟದ ಸಮಯ ನಮ್ಮ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಿದೆ. ನಾನು ನೋವಿನಲ್ಲಿದ್ದಾಗ ಅಲೆಕ್ಸಾಂಡರ್ ನನಗೆ ಸಹಾಯ ಮಾಡುವಂತೆ ಇದು ಪ್ರಾರಂಭವಾಯಿತು. ಆದರೆ ಇದು ಹೆಚ್ಚು ಭಾವನಾತ್ಮಕ ಬಂಧದ ವಿಷಯವಾಗಿ ಮಾರ್ಪಟ್ಟಿತು. ನಾನು ಅವನಿಗೆ ಸ್ತನ್ಯಪಾನ ಮಾಡುವುದನ್ನು ಇಷ್ಟಪಡುತ್ತೇನೆ. ಏಕೆಂದರೆ ಅದು ಇಬ್ಬರಿಗೂ ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯಲು ಅನುವು ಮಾಡಿಕೊಡುತ್ತದೆ. ಇದು ನಿಜವಾಗಿಯೂ ನಮ್ಮನ್ನು ಹತ್ತಿರ ತಂದಿದೆ' ಎಂದು ರಾಚೆಲ್ ಬೈಲಿ ಬೇಸರದೊಂದಿಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪತಿ ಅಲೆಕ್ಸಾಂಡರ್, "ಇದು ನಮ್ಮ ನಡುವೆ ಹೆಚ್ಚು ವಿಶೇಷವಾದ ಬಂಧವನ್ನು ಸೃಷ್ಟಿಸಿದೆ. ನಾವು ಇದನ್ನು ಪ್ರಾರಂಭಿಸದಿದ್ದರೆ ನಾವು ಎಂದಿಗೂ ಜೊತೆಯಾಗಿ ಇಷ್ಟು ಸಮಯ ಕಳೆಯಲು ಸಾಧ್ಯವಾಗುತ್ತಿರಲಿಲ್ಲ. ಸದ್ಯ ರಾಚೆಲ್ ಬೈಲಿಗೆ ಹೆಚ್ಚು ಎದೆ ಹಾಲು ನೀಡಲು ಸಾಧ್ಯವಾಗುತ್ತಿಲ್ಲ. ಇದು ನನಗೆ ಬೇಸರ ತಂದಿದೆ' ಎಂದು ಹೇಳಿದ್ದಾರೆ.
ಮಗುವಿಗೆ ಜೀವ ರಕ್ಷಕ ಎದೆ ಹಾಲು
ನವಜಾತ ಶಿಶುಗಳಿಗೆ ಅವರ ತಾಯಿಯ ಹಾಲು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಶಿಶುಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಉತ್ತಮ ರೀತಿಯಲ್ಲಿ ನಡೆಯಲು ತಾಯಿಯ ಎದೆ ಹಾಲು ತುಂಬಾ ಅವಶ್ಯಕ. ಅದಕ್ಕಾಗಿಯೇ ಪ್ರತಿ ಮಗುವಿಗೆ ತಾಯಿಯ ಹಾಲು ಸಿಗಬೇಕು ಎಂಬ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತದೆ. ಮಗುವಿಗೆ ತಾಯಿ ಎದೆಹಾಲು ಉಣಿಸುವುದರಿಂದ ಮಗು ಮತ್ತು ತಾಯಿಯ ನಡುವಿನ ಬಂಧವು ಹೆಚ್ಚುವುದು.
ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ತಾಯಿಯ ಹಾಲಿನಲ್ಲಿ ಇರುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ತಾಯಿಯ ಹಾಲಿನಲ್ಲಿ ಇರುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆಯು ಸೂಕ್ತ ರೀತಿಯಲ್ಲಿ ಉಂಟಾಗುವುದು. ತಾಯಿ ಸೂಕ್ತ ಸಮಯಗಳ ಕಾಲ ಮಗುವಿಗೆ ಹಾಲುಣಿಸುವುದರಿಂದ ಅಂಡಾಶಯದ ಕ್ಯಾನ್ಸರ್, ಸ್ತನ ಕ್ಯಾಣ್ಸರ್ ಸೇರಿದಂತೆ ಇನ್ನಿತರ ಕ್ಯಾನ್ಸರ್ ಮತ್ತು ಅನಾರೋಗ್ಯ ಸಮಸ್ಯೆಯನ್ನು ತಡೆಯಬಹುದು.












Click it and Unblock the Notifications