ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್ ಒಪನ್ ಮಾಡಲು ಡಾಟಾ ಪ್ಯಾಕ್ ಹಂಗಿಲ್ಲ

|
Google Oneindia Kannada News

ವಾಷಿಂಗ್ಟನ್, ಆ. 01: ಅಯ್ಯೋ ನೆಟ್ ವರ್ಕ್ ಇಲ್ಲ, ಫೇಸ್ ಬುಕ್ ಒಪನ್ ಮಾಡಲು ಆಗ್ತಾ ಇಲ್ಲ ಎಂದು ಇನ್ನು ಗ್ರಾಮೀಣ ಪ್ರದೇಶದವರು ಒದ್ದಾಡಬೇಕಿಲ್ಲ. ನಿಮಗೂ ನಿಮ್ಮ ಹಳ್ಳಿಗೆ ತೆರಳಿದ್ದಾಗ ಸಾಮಾಜಿಕ ತಾಣಕ್ಕೆ ಪ್ರವೇಶ ಮಾಡಲು ಸಾಧ್ಯವಾಗದೇ ಚಡಪಡಿಸಿದ ಅನುಭವ ಆಗಿರಬಹುದು. ಇದಕ್ಕೆಲ್ಲ ಪರಿಹಾರ ನೀಡಲು ಫೇಸ್ ಮುಂದಾಗಿದೆ.

ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಡ್ರೋನ್ ಒಂದನ್ನು ಅಭಿವೃದ್ಧಿಪಡಿಸಿ ಅಂತರ್ಜಾಲ ಲಭ್ಯವಿಲ್ಲದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವಂತೆ ಮಾಡಲು ಮುಂದಾಗಿದೆ. ಲೇಸರ್ ಕಿರಣಗಳ ಮೂಲಕ ಭೂಮಿಗೆ ಅಂತರ್ಜಾಲ ತಂಗಗಳನ್ನು 'ಅಖಿಲಾ' ಎಂಬ ಡ್ರೋನ್ ರವಾನಿಸಲಿದೆ.[ಹವ್ಯಾಸಿ ಕೃಷಿಕರಿಗಾಗಿ ಫೇಸ್ ಬುಕ್ ವೇದಿಕೆಯಿಂದ ಕರೆ]

facebook

ಭೂಮಿಯಿಂದ 60 ರಿಂದ 90 ಸಾವಿರ ಅಡಿ ದೂರದಲ್ಲಿ ಹಾರಾಡುವ ಡ್ರೋನ್ ಸಾವಿರಾರು ಎಕರೆ ಪ್ರದೇಶಗಳನ್ನು ತನ್ನ ವ್ಯಾಪ್ತಿಗೆ ತೆಗೆದುಕೊಳ್ಳುತ್ತದೆ. ವಾತಾವರಣದಲ್ಲಿ ಬದಲಾವಣೆಯಾದರೆ ಅಂದರೆ ಮಳೆ ಗಾಳಿಯ ವಾತಾವರಣ ನಿರ್ಮಾಣವಾದರೂ ಇದರ ಮೇಲೆ ಯಾವ ಪರಿಣಾಮ ಉಂಟಾಗುವುದಿಲ್ಲ.

ಬೋಯಿಂಗ್ 737 ವಿಮಾನದ ರೀತಿಯ ರೆಕ್ಕೆಗಳನ್ನೇ ಡ್ರೋನ್ ಹೊಂದಿರಲಿದ್ದು ಅತೀ ಕಡಿಮೆ ಭಾರ ಅಂದರೆ ಸಾವಿರ ಪೌಂಡ್ ಗಳಿಗಿಂತ ಕಡಿಮೆ ಇರಲಿದೆ.ಒಮ್ಮೆ ಹಾರಾಟ ಆರಂಭಿಸಿದರೆ ಮೂರು ತಿಂಗಳು ಸತತವಾಗಿ ಇಂಟರ್​ನೆಟ್ ಸೇವೆ ಒದಗಿಸಲಿದೆ. ಪ್ರತಿ ಸೆಕೆಂಡಿಗೆ 10 ಗಿಗಾ ಬೈಟ್​ ಸಾಮರ್ಥ್ಯದಲ್ಲಿ ದತ್ತಾಂಶ ವರ್ಗಾವಣೆ ಮಾಡಲಿದೆ. ಪರಿಣಾಮ ಅಂತರ್ಜಾಲ ಲಭ್ಯವಿಲ್ಲದ ಪ್ರದೇಶಗಳಿಗೆ ಉಚಿತವಾಗಿ ಇಂಟರ್​ನೆಟ್ ಸೇವೆ ಲಭ್ಯವಾಗುವುದು.[ಫೇಸ್‌ಬುಕ್‌ನಲ್ಲೂ ಹನಿ ಟ್ರ್ಯಾಪ್ ಮಾಡ್ತಾರೆ, ಹುಷಾರು!]

ಅಮೆರಿಕದಲ್ಲಿ ಮೊದಲ ಪ್ರಯೋಗ
2015 ರ ಅಂತ್ಯಕ್ಕೆ ಅಮೆರಿಕದಲ್ಲಿ ಡ್ರೋನ್ ತನ್ನ ಮೊದಲ ಹಾರಾಟ ಆರಂಭಿಸಲಿದೆ. ಜನರ ಪ್ರತಿಕ್ರಿಯತೆ ಆಧರಿಸಿ ಮತ್ತು ಲೋಪಗಳಿದ್ದರೆ ಅದೆಲ್ಲವನ್ನು ಸರಿಪಡಿಸಿ ಕಾರ್ಯಕ್ರಮವನ್ನು ಯಶಸ್ವಿ ಮಾಡಲಾಗುವುದು ಎಂದು ಫೇಸ್ ಬುಕ್ ನ ಇಂಜಿನಿಯರ್ ಗಳು ತಿಳಿಸಿದ್ದಾರೆ.

English summary
Facebook says it will begin test flights later this year for a solar-powered drone with a wingspan as big as a Boeing 737, in the next stage of its campaign to deliver Internet connectivity to remote parts of the world. Engineers at the giant social network say they've built a drone with a 140-foot wingspan that weighs less than 1,000 pounds. Designed to fly at high altitudes for up to three months, it will use lasers to send Internet signals to stations on the ground.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X