ಬದುಕಿದವರಿಗೆ 'ಶ್ರದ್ಧಾಂಜಲಿ' ಅರ್ಪಿಸಿದ ಫೇಸ್ ಬುಕ್!

Posted By:
Subscribe to Oneindia Kannada

ಸ್ಯಾನ್ ಫ್ರಾನ್ಸಿಸ್ಕೋ, ನವೆಂಬರ್ 12 : ಶುಕ್ರವಾರ ಫೇಸ್ ಬುಕ್ ಮಾಡಿದ ಪ್ರಮಾದದಿಂದಾಗಿ ಲಕ್ಷಾಂತರ ಜನ ಫೇಸ್ ಬುಕ್ಕಿನ ಸತ್ತವರ ಪಟ್ಟಿಯಲ್ಲಿ ಸೇರುವಂತಾಯಿತು!

ಸದಾಕಾಲ, ಆಗೊಮ್ಮೆಈಗೊಮ್ಮೆ ಫೇಸ್ ಬುಕ್ಕಿನಲ್ಲಿ ಏನು ಬಂದಿದೆ ಎಂದು ಚೆಕ್ ಮಾಡುವವರಿಗೆ ಶುಕ್ರವಾರ ಆಘಾತ ಕಾದಿತ್ತು. ಸುಮಾರು ಇಪ್ಪತ್ತು ಲಕ್ಷದಷ್ಟು 'ಬದುಕಿರುವ' ಫೇಸ್ ಬುಕ್ ಬಳಕೆದಾರರಿಗೆ ಫೇಸ್ ಬುಕ್ 'ಶ್ರದ್ಧಾಂಜಲಿ' ಅರ್ಪಿಸಿತ್ತು.

ನಂತರ "ಇದೊಂದು ದೊಡ್ಡ ಪ್ರಮಾದ. ಈಗ ಈ ತಪ್ಪನ್ನು ಸರಿಪಡಿಸಲಾಗಿದೆ" ಎಂದು ಫೇಸ್ ಬುಕ್ಕಿನ ವಕ್ತಾರ ಹೇಳಿಕೆ ನೀಡಿದ್ದಾರೆ. ಈ ತಪ್ಪಿಗಾಗಿ ಫೇಸ್ ಬುಕ್ ಬಳಕೆದಾರರ ಕ್ಷಮೆಯನ್ನೂ ಸಂಸ್ಥೆ ಕೇಳಿದೆ. ತಮಾಷೆ ಅಂದ್ರೆ, ಫೇಸ್ ಬುಕ್ ಸಹಸಂಸ್ಥಾಪಕ ಮತ್ತು ಸಿಇಓ ಮಾರ್ಕ್ ಜೂಕರ್ಬರ್ಗ್ ಅವರ ಹೆಸರು ಕೂಡ ಈ ಪಟ್ಟಿಯಲ್ಲಿ ಸೇರಿತ್ತು. [ಇದೇನ ಫೇಸಬುಕ್ಕೋ, ಹಳೆ ಬಸ್ ಸ್ಟ್ಯಾಂಡ್ ಗ್ವಾಡಿನೋ?]

Facebook mistakenly declares live users dead

ಫೇಸ್ ಬುಕ್ ಲೈವ್ ಪುಟದಲ್ಲಿ ಬಳಕೆದಾರರು ತಮ್ಮ ವಿಡಿಯೋಗಳನ್ನು ನೇರವಾಗಿ ಪ್ರಸಾರ ಮಾಡಬಹುದು. ಈ ತಾರಣದಲ್ಲಿಯೇ ಫೇಸ್ ಬುಕ್ ಬದುಕಿದವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದು. "ಛೆ, ಅದೇ ಸಮಯದಲ್ಲಿ ನಾನು ಫೇಸ್ ಬುಕ್ ಲೈವ್ ಬಳಸಬೇಕಾಗಿತ್ತು. ನಾನು ಹೇಗೆ ಸತ್ತಿದ್ದೇನೆಂದು ಲೈವ್ ಆಗಿಯೇ ತಿಳಿಸಬಹುದಿತ್ತು" ಎಂದು ಸರ್ಚ್ ಇಂಜಿನ್ ಲ್ಯಾಂಡ್ ಎಡಿಟರ್ ಡ್ಯಾನಿ ಸಲ್ಲಿವಾನ್ ಟ್ವಿಟ್ಟರಲ್ಲಿ ಅಪಹಾಸ್ಯ ಮಾಡಿದ್ದಾರೆ.

ಫೇಸ್ ಬುಕ್ ಎಷ್ಟೊಂದು ಚಟುವಟಿಕೆಯ ಆಗರವಾಗಿದೆಯೆಂದರೆ, ಸಕಲ ಜಗತ್ತಿನ ಸರ್ವ ಉಭಯಕುಶಲೋಪರಿ ಸಾಂಪ್ರತಗಳು, ವಿಚಾರ ವಿನಿಮಯಗಳು, ನೆಂಟಸ್ತನಗಳು, ಸ್ನೇಹಕೂಟಗಳು, ಶರಂಪರ ಜಗಳಗಳು, ಕವಿಗೋಷ್ಠಿಗಳು, ಪ್ರೇಮ ನಿವೇದನೆಗಳು ಎಲ್ಲವೂ ಇಲ್ಲಿಯೇ ನಡೆಯುತ್ತಿರುತ್ತವೆ. ಇದು ಯಾವ ಪರಿ ಅಡಿಕ್ಟ್ ಆಗಿದೆಯೆಂದರೆ, ಫೇಸ್ ಬುಕ್ ನಲ್ಲಿ ಒಂದು ಬಾರಿಯಾದರೂ ಇಣುಕದಿರುವುದು ಎಂಥವರಿಗೂ ಬಲುಕಷ್ಟ. ಅಂಥದರಲ್ಲಿ, ನೀವು ಸತ್ತಿದ್ದೀರಿ ಎಂದು ಶ್ರದ್ಧಾಂಜಲಿಯನ್ನೇ ಅರ್ಪಿಸಿಬಿಟ್ಟರೆ ಹೇಗೆ?

ಫೇಸ್ ಬುಕ್ ಸಹವಾಸ ಸಾಕಾಗಿದೆ, ಕೆಲವೇ ಕ್ಷಣಗಳಲ್ಲಿ ಫೇಸ್ ಬುಕ್ಕಿಗೆ ಗುಡ್ ಬೈ ಹೇಳಲಿದ್ದೇನೆ, ಇನ್ನೊಂದು ತಿಂಗಳಗಳ ಕಾಲ ಫೇಸ್ ಬುಕ್ಕನ್ನು ಇಣುಕಿಯೂ ನೋಡುವುದಿಲ್ಲ ಎಂದು ಶಪಥ ಮಾಡುವ ಶೂರಾಧಿಶೂರರು ಏನು ನಡೆಯುತ್ತಿದೆ ಇಲ್ಲಿ ಅಂತ ಕುತೂಹಲಕ್ಕಾದರೂ ಗಪ್ ಚುಪ್ಪಾಗಿ ಒಂದು ವಿಸಿಟ್ ಹಾಕಿ ಹೋಗಿರುತ್ತಾರೆ. ಫೇಸ್ ಬುಕ್ ಆಪರಿ ಜನರನ್ನು ಆವರಿಸಿಕೊಂಡಿದೆ. ಈ ಸಂದರ್ಭದಲ್ಲಿ, ಪ್ರಶಾಂತ್ ಅಡೂರ ಅವರು ಬರೆದಿರುವ "ಫೇಸ್ ಬುಕ್ ಅಕೌಂಟಿಗೆ ಎರಡು ನಿಮಿಷದ ಮೌನ!" ಎಂಬ ಲೇಖನವನ್ನು ನೀವೆಲ್ಲರೂ ಓದಲೇಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Facebook accidentally declared live users dead, acknowledging after fixing the problem that it had committed a terrible error. Media reports indicated that some two million errant memorials were posted on profile pages.
Please Wait while comments are loading...