ಪ್ರಧಾನಿ ನೇರವಾಗಿ ಯುದ್ಧದ ನೆಲಕ್ಕೆ ನುಗ್ಗಿದ್ದು ಏಕೆ? ಕಾರಣ ತಿಳಿಯಿರಿ

ಯುದ್ಧ ನಡೆಯುವಾಗ ಯಾವುದೇ ದೇಶದ ಪ್ರಧಾನಿ ಅಥವಾ ಅಧ್ಯಕ್ಷ, ತಮ್ಮ ದೇಶದ ಸೈನಿಕರಿಗೆ ಧೈರ್ಯ ತುಂಬುವುದು ಸಾಮಾನ್ಯ. ಅದು ಭಾಷಣದ ಮೂಲಕವೋ ಇಲ್ಲ ಮಾತಿನ ಮೂಲಕ ಧೈರ್ಯ ಹೇಳುತ್ತಾರೆ. ಆದರೆ ಇಲ್ಲೊಬ್ಬರು ಪ್ರಧಾನಿ ಸೇನೆಗೆ ಧೈರ್ಯ ತುಂಬಿ, ಸೈನಿಕರ ಬೆನ್ನಿಗೆ ನಿಲ್ಲಲು ನೇರ ಯುದ್ಧದ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಷ್ಟೊಂದು ಧೈರ್ಯ ತೋರಿಸಿದ್ದು ಯಾರು? ಆ ಪ್ರಧಾನಿ ಹೆಸರೇನು? ಆ ಬಗ್ಗೆ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಯುದ್ಧ ಎಂಬುದು ಎಷ್ಟು ಘೋರ ಅನ್ನೋದು ಇಡೀ ಜಗತ್ತಿಗೆ ಗೊತ್ತು. ಅದ್ರಲ್ಲೂ ನಮ್ಮ ತಲೆಮಾರು ಯುದ್ಧದ ಕರಾಳ ಮುಖವನ್ನು ಕಣ್ತುಂಬಿಕೊಂಡಿದೆ. 1914ರಿಂದ 1918 ತನಕ ಮೊದಲ ಮಹಾಯುದ್ಧ, 1939 ರಿಂದ 1945ರ ತನಕ 2ನೇ ಮಹಾಯುದ್ಧ ನೋಡಿದ್ದೀವಿ. ಈ ಪೈಕಿ 2ನೇ ಮಹಾಯುದ್ಧ ಮಹಾಯುದ್ಧದಲ್ಲಿ, ಕೋಟಿ ಕೋಟಿ ಜನ ರಕ್ತ ಚೆಲ್ಲಿದ್ದರೂ ಮನುಷ್ಯ ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ಹೀಗಾಗಿ ರಷ್ಯಾ & ಉಕ್ರೇನ್ ಹಾಗೂ ಇಸ್ರೇಲ್ & ಹಮಾಸ್ ಮಧ್ಯೆ ಯುದ್ಧ ಘೋರವಾಗಿದೆ. ಇದೇ ವೇಳೆ ಇಸ್ರೇಲ್ ಪ್ರಧಾನಿ ನಡೆ ಸಂಚಲನ ಸೃಷ್ಟಿಮಾಡಿದೆ.

israeli-pm-benjamin-netanyahu

ಸೇನೆಗೆ ಧೈರ್ಯ ಹೇಳಿದ ಪ್ರಧಾನಿ

ಹೌದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಿಢೀರ್ ಶತ್ರು ದೇಶದ ನೆಲಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇಸ್ರೇಲ್ ಸೇನೆ ಈಗ ಹಮಾಸ್ ಆಡಳಿತದ ಗಾಜಾ ಪಟ್ಟಿ ಮೇಲೆ ಭೂ ದಾಳಿಯನ್ನ ಮಾಡಿ ಭಾಗಶಃ ಗಾಜಾಪಟ್ಟಿ ನಗರವನ್ನ ತನ್ನ ವಶಕ್ಕೆ ಪಡೆದುಕೊಂಡಿದೆ. ಇದೇ ಸಮಯಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದಿಢೀರ್ ಶತ್ರು ದೇಶದ ನೆಲ, ಅಂದರೆ ಗಾಜಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಹಮಾಸ್ ವಿರುದ್ಧ ಹೋರಾಡುತ್ತಿರುವ ತಮ್ಮ ಸೈನಿಕರಿಗೆ ಬೆಂಜಮಿನ್ ನೆತನ್ಯಾಹು ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ.

ಶತ್ರು ನೆಲದಲ್ಲೇ ಭರ್ಜರಿ ಗುಡುಗು

ಗಾಜಾಪಟ್ಟಿ ಪ್ರದೇಶಕ್ಕೆ ದಿಢೀರ್ ಬೆಂಜಮಿನ್ ನೆತನ್ಯಾಹು ಭೇಟಿ ನೀಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ಹೊರಬೀಳುತ್ತಿದ್ದಂತೆ, ನೆತನ್ಯಾಹು ಭೇಟಿ ನೀಡುವ ಪ್ರದೇಶದ ಸುತ್ತಮುತ್ತಲು ಭಾರಿ ಭದ್ರತೆ ಒದಗಿಸಲಾಗಿತ್ತು. ತಮ್ಮ ಭೇಟಿಯ ಸಮಯದಲ್ಲಿ ಸೈನಿಕರ ಜತೆಗೆ ಮಾತನಾಡಿರುವ ಬೆಂಜಮಿನ್ ನೆತನ್ಯಾಹು, ಯುದ್ಧವನ್ನ ಮುಗಿಸಿಯೇ ಹೋಗುತ್ತೇವೆ ಎಂದು ಗುಡುಗಿದ್ದಾರೆ. ಈ ಮೂಲಕ ಶತ್ರು ನೆಲದಲ್ಲೇ ನಿಂತು ಶತ್ರುಗಳ ವಿರುದ್ಧವೇ ನೆತನ್ಯಾಹು ಗುಡುಗಿದ್ದಾರೆ ಅಂತಾ ಈಗ ಅವರ ಅಭಿಮಾನಿಗಳು ಮಾತನಾಡುತ್ತಿದ್ದಾರೆ.

ಬೆಂಜಮಿನ್ ಹೇಳಿದ ಮಾತುಗಳು ಇವು

ಗಾಜಾಪಟ್ಟಿ ಸಂಪೂರ್ಣ ಹಮಾಸ್ ಹಿಡಿತದಲ್ಲಿ ಇದ್ದು ಅದೇ ಜಾಗದಲ್ಲಿ ಇಸ್ರೇಲ್ ಸೇನೆಯ ಆರ್ಭಟ ಶುರುವಾಗಿದೆ. ಹೀಗಾಗಿ ಬೆಂಜಮಿನ್ ನೆತನ್ಯಾಹು ಈಗ ಭಾಷಣ ಮಾಡುತ್ತಾ, ತನ್ನ ಶತ್ರುಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. 'ನಾವಿಲ್ಲಿ ಅಂತ್ಯ ಕಾಣಿಸಲು ಬಂದಿದ್ದು, ಅಂತ್ಯವನ್ನ ಕಾಣಿಸದೆ ನಾವು ಹೋಗಲ್ಲ. ಹಮಾಸ್ ಉಗ್ರರನ್ನು ಬಗ್ಗು ಬಡಿದು ಎಲ್ಲ ಒತ್ತೆಯಾಳುಗಳನ್ನ ಬಿಡಿಸಿಕೊಂಡು ಹೋಗಬೇಕು ಎಂಬುದೆ ನಮ್ಮ ಗುರಿ' ಎಂದಿದ್ದಾರೆ ನೆತನ್ಯಾಹು. ಹೀಗಾಗಿಯೇ ಯುದ್ಧ ಇನ್ನೆಷ್ಟು ದಿನ ಮುಂದುವರಿಯುತ್ತೆ? ಅನ್ನೋ ಭಯ ಆವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+