ಇರಾನ್ ಪರಮಾಣು ಸ್ಥಾವರದ ಮೇಲೆ ಇಸ್ರೇಲ್ ದಿಢೀರ್ ದಾಳಿ? Israel And Iran
ಏನಿದು ಬಡಿದಾಟ, ಏನಿದು ಕಿತ್ತಾಟ? ಅಂತಾ ಇರಾನ್ & ಇಸ್ರೇಲ್ ಬಡಿದಾಟ ನೋಡಿದ ಇಡೀ ಜಗತ್ತು ಪ್ರಶ್ನೆ ಮಾಡುತ್ತಿದೆ. ಇಂತಹ ಸಮಯದಲ್ಲೇ ಇರಾನ್ ನೆಲದಲ್ಲಿ ನಡೆಯಬಾರದ ಘಟನೆಗಳೂ ನಡೆಯುತ್ತಾ ಇದ್ದು, ಇಸ್ರೇಲ್ ನೆಲದ ವಿರುದ್ಧ ಭಾರಿ ದೊಡ್ಡ ಪ್ರಮಾಣದಲ್ಲಿ ಇರಾನ್ ದಾಳಿ ನಡೆಸುತ್ತಿದೆ. ಇಂತಹ ಭಾರಿ ಘೋರ ಸಮಯದಲ್ಲಿ ಮತ್ತೊಂದು ಸ್ಫೋಟಕ ಆರೋಪ ಕೂಡ ಕೇಳಿ ಬಂದಿದ್ದು, ಸಂಚಲನ ಸೃಷ್ಟಿಸಿದೆ.
ಇರಾನ್ ದೇಶದಲ್ಲಿ ಭಾರಿ ದೊಡ್ಡ ಗಲಭೆ ಶುರುವಾಗಿದ್ದು, ಇರಾನ್ ದೇಶದ ಸರ್ವೋಚ್ಛ ನಾಯಕ ಅಂತಾ ಕರೆಸಿಕೊಳ್ಳುವ ಸುಪ್ರೀಂ ಲೀಡರ್ ಅಲಿ ಖಮೇನಿ ಮಾಡಿರುವ ಎಡವಟ್ಟುಗಳು ಒಂದೆರಡಲ್ಲ. ಅದರಲ್ಲೂ ಸುಪ್ರೀಂ ಲೀಡರ್ ಅಲಿ ಖಮೇನಿ ಸಲುವಾಗಿಯೇ ಇದೀಗ ಇಸ್ರೇಲ್ ಜೊತೆಗೇ ಘೋರ ವಾರ್ ಶುರುವಾಗಿದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಆದರೆ ಇಂತಹ ಕಠಿಣ ಸಮಯದಲ್ಲಿ ಇರಾನ್ ದೇಶದಲ್ಲಿ ಇದೀಗ ನಡೆಯುತ್ತಿರುವ ಪರಮಾಣು ಪ್ರಯೋಗದ ಬಗ್ಗೆ ಸಂಚಲನ ಸೃಷ್ಟಿ ಮಾಡುವ ಸುದ್ದಿಯೊಂದು ಹಬ್ಬಿಬಿಟ್ಟಿದೆ.

ಇರಾನ್ ಪ್ರಯೋಗ ಶಾಲೆ ಮೇಲೆ ದಾಳಿ?
ಹೌದು, ಇದೀಗ ಕೇಳಿ ಬಂದಿರುವ ಆರೋಪದ ಪ್ರಕಾರ ಇರಾನ್ ದೇಶದ ಪರಮಾಣು ಸಂಶೋಧನೆ ನಡೆಸುವ ಕೇಂದ್ರದ ಮೇಲೆ ಭೀಕರ ದಾಳಿ ನಡೆಸಿದೆಯಂತೆ ಇಸ್ರೇಲ್ ಸೇನೆ. ದಾಳಿ ಹಿನ್ನೆಲೆಯಲ್ಲಿ ಇದೀಗ ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗಿ ಇಡೀ ಇರಾನ್ ಅಲ್ಲಾಡಿ ಹೋಗಿದೆ ಅಂತಾ ಇದೀಗ ಆರೋಪ ಮಾಡಲಾಗುತ್ತಿದೆ. ಮತ್ತೊಂದು ಕಡೆಯಲ್ಲಿ ಪರಮಾಣು ಸ್ಥಾವರ ಏನೂ ಆಗಿಲ್ಲ ಅಂತಾ ಇರಾನ್ ಹೇಳುತ್ತಿದೆ. ಆದರೆ ಹೀಗೆ ಇಬ್ಬರೂ ಬಡಿದಾಡುತ್ತಿದ್ದರೆ ಪ್ರಪಂಚದ ಇತರ ದೇಶಗಳಿಗೆ ಭಯ ಶುರುವಾಗಿದೆ.
ಇರಾನ್ ನೆಲದಲ್ಲಿ ನ್ಯೂಕ್ಲಿಯರ್ ಟೆಸ್ಟ್?
ಅಂದಹಾಗೆ ಇರಾನ್ ಇದೀಗ ಇಸ್ರೇಲ್ ವಿರುದ್ಧ ಘೋರವಾಗಿ ದಾಳಿ ಮಾಡುತ್ತಿದ್ದು, ಈಗಾಗಲೇ ಹಲವಾರು ನಗರದಲ್ಲಿ ನರಕ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತ ಕೂಡ ಎದುರಾಗಿದೆ, ಅದು ಏನೆಂದರೆ ಇರಾನ್ ಸೇನೆಯಿಂದ ದಿಢೀರ್ ಪರಮಾಣು ಪರೀಕ್ಷೆ ನಡೆದಿರುವ ಕುರಿತು ಸಾಕ್ಷ್ಯ ಸಿಕ್ಕಿದೆ. ಆ ಮೂಲಕ ಜಗತ್ತಿನ ಮೂಲೆ ಮೂಲೆಯಲ್ಲೂ ಇದೀಗ ವಿಕಿರಣ ಹರಡುವ ಆತಂಕ ಮನುಷ್ಯರಿಗೆ ಶುರು ಆಗಿದೆ. ಇಂತಹ ಸಮಯದಲ್ಲೇ, ಇಸ್ರೇಲ್ ಕೂಡ ಇರಾನ್ ಮೇಲೆ ದಾಳಿ ನಡೆಸಿದೆ ಎಂಬ ಆರೋಪವನ್ನ ಮಾಡಲಾಗುತ್ತಿದೆ.












Click it and Unblock the Notifications