US Elections 2024: ಸೋತು ಸುಣ್ಣವಾದ ಕಮಲಾ ಹ್ಯಾರಿಸ್ ಬೆನ್ನಿಗೆ ನಿಂತ ಡೆಮಾಕ್ರಟಿಕ್ ನಾಯಕರು!
ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಹೀನಾಯ ಸೋಲು ಕಂಡು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಡೊನಾಲ್ಡ್ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ತಮ್ಮ ಶಕ್ತಿ ಮೀರಿ ಹೋರಾಟ ನಡೆಸಿದ್ದರು, ಹೀಗಿದ್ದರೂ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಸೋಲು ಕಂಡಿದ್ದಾರೆ. ಹೀಗಾಗಿ ಕಮಲಾ ಅವರ ಮನಸ್ಸಿಗೆ ಕೂಡ ತಳಮಳ ಇದೀಗ ಶುರುವಾಗಿದ್ದು, ಡೆಮಾಕ್ರಟಿಕ್ ಪಕ್ಷದ ನಾಯಕರು & ಮಾಜಿ ಅಧ್ಯಕ್ಷರು ಈಗ ಕಮಲಾ ಹ್ಯಾರಿಸ್ ಬೆನ್ನಿಗೆ ನಿಂತು ಸಮಾಧಾನ ಹೇಳುತ್ತಿದ್ದಾರೆ.
ಕಮಲಾ ಹ್ಯಾರಿಸ್ ಸೋತಿದ್ದಾರೆ ನಿಜ, ಆದರೆ ಇಂತಹ ಸಮಯದಲ್ಲಿ ಕಮಲಾ ಹ್ಯಾರಿಸ್‌ಗೆ ನೈತಿಕ ಬೆಂಬಲ ಬೇಕಿದೆ. ಕಮಲಾ ಹ್ಯಾರಿಸ್ ಅವರನ್ನು ಇಂತಹ ಸಮಯದಲ್ಲಿ ಸಮಾಧಾನ ಮಾಡಿ & ಬೆಂಬಲದ ಮಾತುಗಳನ್ನ ಹೇಳುವ ಜನರು ಬೇಕಾಗಿದ್ದಾರೆ. ಇದೀಗ ಅಮೆರಿಕದಲ್ಲಿ ಡೆಮಾಕ್ರಟಿಕ್ ಪಕ್ಷದ ನಾಯಕರು ಇದೇ ಕೆಲಸ ಮಾಡುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಎದುರು ಹೀನಾಯ ಸೋಲು ಕಂಡಿರುವ ಕಮಲಾ ಹ್ಯಾರಿಸ್ ಅವರಿಗೆ ಡೆಮಾಕ್ರಟಿಕ್ ಪಕ್ಷದ ನಾಯಕರು ಸಮಾಧಾನದ ಪಾಠ ಮಾಡುತ್ತಿದ್ದಾರೆ.

ಟ್ರಂಪ್ ಬಗ್ಗೆ ಕಮಲಾ ಹೇಳಿದ್ದೇನು?
ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಬಗ್ಗೆ ಈಗ ಕಮಲಾ ಹ್ಯಾರಿಸ್ ಸ್ವಾಗತ ಮಾಡಿದ್ದು, ಡೊನಾಲ್ಡ್ ಟ್ರಂಪ್ ಅವರ ಗೆಲುವು ಸ್ವಾಗತಿಸಿದ್ದಾರೆ. ಅಲ್ಲದೆ ಮುಂದಿನ ಹೋರಾಟಗಳ ಬಗ್ಗೆ, ರಾಜಕೀಯ ತಿಕ್ಕಾಟದ ಬಗ್ಗೆ ಕೂಡ ಎಚ್ಚರಿಕೆ ನೀಡಿದ್ದಾರೆ. ಇದೆಲ್ಲಕ್ಕಿಂತ ಹೆಚ್ಚಾಗಿ ಡೊನಾಲ್ಡ್ ಟ್ರಂಪ್ ವಿರುದ್ಧ ಗೆದ್ದೇ ಗೆಲ್ಲುತ್ತೇನೆ ಎನ್ನುವ ಹುಮ್ಮಸ್ಸು ಕಮಲಾ ಅವರನ್ನು ದಾರಿ ತಪ್ಪಿಸಿತಾ? ಎಂಬ ಚರ್ಚೆ ಕೂಡ ಜೋರಾಗಿದೆ. ಈ ಸಂಕಷ್ಟದ ಸಮಯದಲ್ಲೇ...
ಜೋ ಬೈಡನ್ ಎಡವಟ್ಟಿನ ಫಲ?
ಡೆಮಾಕ್ರಟಿಕ್ ಪಕ್ಷವು ಕಳೆದ 4 ವರ್ಷಗಳಿಂದ ಜೋ ಬೈಡನ್ ಅವರ ಸಾರಥ್ಯದಲ್ಲಿ ಅಮೆರಿಕದ ಆಡಳಿತ ನಡೆಸಿದೆ. ಆದರೂ ಜೋ ಬೈಡನ್ ಅವರ ಆಡಳಿತ ವೈಖರಿ ಬಗ್ಗೆ ಭಾರಿ ಆಕ್ರೋಶ ಕೂಡ ಮೂಡಿದೆ. ಹೀಗಿದ್ದಾಗ ಕಮಲಾ ಹ್ಯಾರಿಸ್ ಸೋಲು ಜೋ ಬೈಡನ್ ವಿರುದ್ಧ ಅಲ್ಲಿನ ಅಂದ್ರೆ ಅಮೆರಿಕದ ಜನರಲ್ಲಿ ಇದ್ದ ಬೇಸರದ ಫಲ ಎಂದು ಕೂಡ ಆರೋಪ ಮಾಡಲಾಗ್ತಿದೆ.
ಇಂತಹ ಸಮಯದಲ್ಲೇ ಡೊನಾಲ್ಡ್ ಟ್ರಂಪ್ ವಿರುದ್ಧ ಹೀನಾಯವಾಗಿ ಸೋತು ಸುಣ್ಣವಾಗಿರುವ ಕಮಲಾ ಹ್ಯಾರಿಸ್ ಅವರಿಗೆ, ಅಧ್ಯಕ್ಷ ಜೋ ಬೈಡನ್, ಬರಾಕ್ ಒಬಾಮಾ, ಬಿಲ್ ಕ್ಲಿಂಟನ್ ಸಮೇತ ಹಲವು ನಾಯಕರು ಸಾಂತ್ವನ ಹೇಳಿದ್ದಾರೆ. ಅಲ್ಲದೆ ಸೋಲು & ಗೆಲುವು ಜೀವನದ ಒಂದು ಭಾಗ, ನೀವು ಅತ್ಯುತ್ತಮ ಹೋರಾಟ ಪ್ರದರ್ಶನ ಮಾಡಿದ್ದೀರಿ ಅಂತಾ ಕೂಡ ಈಗ ಕಮಲಾ ಹ್ಯಾರಿಸ್ ಅವರ ಬೆಂಬಲಿಗರು ಹೇಳುತ್ತಿದ್ದಾರೆ.












Click it and Unblock the Notifications