ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕ, ಹೆಚ್ಚು ಮಾರಣಾಂತಿಕವಲ್ಲ

|
Google Oneindia Kannada News

ಸಿಂಗಾಪುರ, ಆಗಸ್ಟ್ 18: ಕೊರೊನಾವೈರಸ್ ರೂಪಾಂತರ ಹೆಚ್ಚು ಸಾಂಕ್ರಾಮಿಕ, ಆದರೆ ಕಡಿಮೆ ಮಾರಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Recommended Video

Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

ಮಲೇಷ್ಯಾದಲ್ಲಿ ರೂಪಾಂತರಿತ ಕೊರೊನಾ ವೈರಸ್ ಪತ್ತೆಯಾಗಿದ್ದು, ಅದರಿಂದ ಹೆಚ್ಚು ಮಂದಿಗೆ ಸೋಂಕು ತಗುಲುತ್ತದೆ ಆದರೆ ಸಾವಿನ ಸಂಖ್ಯೆ ಕಡಿಮೆ ಎಂದಿದ್ದಾರೆ.

ಕೋವಿಡ್‌ -19 ಗೆ ಕಾರಣವಾಗುವ SARS&CoV&2 ವೈರಸ್‌ನ ರೂಪಾಂತರವಾದ ಡಿ614ಜಿ ಪತ್ತೆಯಾಗಿದೆ ಎಂದು ಮಲೇಷ್ಯಾ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.

ರೂಪಾಂತರಗೊಂಡಿದೆ ಕೊರೊನಾ ವೈರಸ್: ಆಘಾತಕಾರಿ ಸಂಗತಿ ತಿಳಿಸಿದ ಮಲೇಷ್ಯಾರೂಪಾಂತರಗೊಂಡಿದೆ ಕೊರೊನಾ ವೈರಸ್: ಆಘಾತಕಾರಿ ಸಂಗತಿ ತಿಳಿಸಿದ ಮಲೇಷ್ಯಾ

ಇದು ಕೋವಿಡ್‌ 19ಗಿಂತ 10 ಪಟ್ಟು ಹೆಚ್ಚು ಅಪಾಯಕಾರಿಯಾದ ವೈರಸ್‌ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಇದನ್ನು ಕೊವಿಡ್‌ 19ನ ಮತ್ತೊಂದು ಮುಖ ಎಂದು ಹೇಳಲಾಗುತ್ತಿದ್ದು, ಅದಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ.

45 ಜನರ ಸೋಂಕಿತ ಗುಂಪಿನಲ್ಲಿ 3 ಜನರಲ್ಲಿ ಕೊವಿಡ್‌ ತಳಿಯ ಈ ವೈರಸ್‌ ಪತ್ತೆಯಾಗಿದೆ.ಜಗತ್ತಿಗೆ ಹೋಲಿಸಿದರೆ, ಕೊವಿಡ್‌ ಪ್ರಕರಣಗಳನ್ನು ತಡೆಗಟ್ಟುವ ಮತ್ತು ವ್ಯವಹರಿಸುವಲ್ಲಿ ಮಲೇಷ್ಯಾ ಉತ್ತಮ ಕೆಲಸ ಮಾಡಿದೆ. ಜುಲೈ 28ರಿಂದ ಆಗಸ್ಟ್‌ 16ರ ವರೆಗೆ ಕೇವಲ 26 ಹೊಸ ಪ್ರಕರಣಗಳು ವರದಿಯಾಗಿವೆ.

ರೆಸ್ಟೋರೆಂಟ್ ಮಾಲೀಕರಿಂದ ಸೋಂಕು

ರೆಸ್ಟೋರೆಂಟ್ ಮಾಲೀಕರಿಂದ ಸೋಂಕು

ಆಘಾತಕಾರಿ ಅಂಶ ಎಂದರೆ ಭಾರತದಿಂದ ಹಿಂತಿರುಗಿದ ರೆಸ್ಟೋರೆಂಟ್‌ ಮಾಲೀಕರ ಮೂಲಕ ಈ ವೈರಸ್‌ ಹರಡಿದೆ ಎಂದು ಹೇಳಲಾಗುತ್ತಿದೆ.

ಯುರೋಪ್ ಮತ್ತು ಅಮೆರಿಕದಲ್ಲಿ ಕೊರೊನಾ ಮಾದರಿಯ ವೈರಸ್

ಯುರೋಪ್ ಮತ್ತು ಅಮೆರಿಕದಲ್ಲಿ ಕೊರೊನಾ ಮಾದರಿಯ ವೈರಸ್

ಯುರೋಪ್‌ ಮತ್ತು ಅಮೆರಿಕದಲ್ಲಿ ಕೊರೊನಾ ಮಾದರಿಯ ವೈರಸ್‌ಗಳು ಹೆಚ್ಚಾಗಿ ಕಂಡುಬರುತ್ತವೆ. ಕೋವಿಡ್‌ ರೋಗಿಯಲ್ಲಿ ಇರುವಷ್ಟೇ ರೋಗ ಲಕ್ಷಣಗಳು ಇದರಲ್ಲಿ ಕಂಡುಬಂದಿದ್ದು, ರೋಗ ನಿರೋಧಕ ಶಕ್ತಿಯನ್ನು ಸಂಪೂರ್ಣ ಕುಂಠಿಸಬಹುದಾದ ಸಾಧ್ಯತೆ.

14 ದಿನಗಳ ಕ್ವಾರಂಟೈನ್

14 ದಿನಗಳ ಕ್ವಾರಂಟೈನ್

ಭಾರತದಿಂದ ತೆರಳಿದ ಬಳಿಕ ಮಲೇಷ್ಯಾದಲ್ಲಿ 14 ದಿನಗಳ ಕ್ವಾರಂಟೈನ್‌ ನಿಯಮಗಳನ್ನು ಪಾಲಿಸದೇ ಇದ್ದದ್ದು ಇತರರಲ್ಲಿ ಇದು ಕಾಣಿಸಿಕೊಳ್ಳಲು ಕಾರಣ ಎಂದು ಹೇಳಲಾಗಿದೆ. ಇದೀಗ ಈ ಸೋಂಕಿತ ವ್ಯಕ್ತಿಗೆ 5 ತಿಂಗಳ ವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ಫಿಲಿಪೈನ್ಸ್‌ನಿಂದ ಹಿಂದಿರುಗಿದ ಮತ್ತೂಂದು ಗುಂಪಿನಲ್ಲಿಯೂ ಇದೇ ಮಾದರಿಯ ವೈರಸ್‌ ಕಂಡುಬಂದಿದೆ.

ಹೊಸ ಪ್ರಕರಣಗಳಿಂದ ಲಸಿಕೆ ದುರ್ಬಲ

ಹೊಸ ಪ್ರಕರಣಗಳಿಂದ ಲಸಿಕೆ ದುರ್ಬಲ

ಕೊವಿಡ್‌ಗೆ ಲಸಿಕೆಗಳು ಇದೀಗ ತಯಾರಾಗುತ್ತಿರುವ ಹೊತ್ತಿನಲ್ಲಿ ಇಂತಹ ಹೊಸ ಹೊಸ ಪ್ರಕರಣಗಳು ಲಸಿಕೆಯನ್ನು ದುರ್ಬಲವಾಗಿ ಮಾಡಬಹುದಾಗಿದೆ. ಮಲೇಷ್ಯಾದ ಆರೋಗ್ಯ ಸೇವೆಯ ಮಹಾನಿರ್ದೇಶಕರಾದ ನೂರ್‌ ಹಿಶಮ್‌ ಅಬ್ದುಲ್ಲಾ ಅವರ ಪ್ರಕಾರ, ಕೊವಿಡ್‌ ತನ್ನ ಸ್ವರೂಪವನ್ನು ಬದಲಾಯಿಸುತ್ತಿರುತ್ತದೆ. ಇದು ಲಸಿಕೆಯ ಸಾಮರ್ಥ್ಯದ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಏನಿದು ಡಿ 614ಜಿ?

ಏನಿದು ಡಿ 614ಜಿ?

ಡಿ 614 ಜಿ ರೂಪಾಂತರವನ್ನು ಫೆಬ್ರವರಿ ತಿಂಗಳಿನಲ್ಲಿ ಮೊದಲ ಬಾರಿಗೆ ಕಂಡುಹಿಡಿಯಲಾಯಿತು. ಅಂದಿನಿಂದ ವಿಶ್ವದಾದ್ಯಂತ ಸ್ವ್ಯಾಬ್‌ ಮಾದರಿಗಳಲ್ಲಿ ಕಂಡುಬರುವ SARS&CoV&2ನ ಪ್ರಬಲ ರೂಪಾಂತರವಾಗಿದೆ. ಡಿ 614ಜಿ ಸಾರ್ಸ್‌-ಕೋವ್‌ -2 ಎಂದರೆ ಕೋವಿಡ್‌ -19 ರೋಗಕ್ಕೆ ಕಾರಣವಾಗುವ ವೈರಸ್‌ನ ಅಧಿಕೃತ ಹೆಸರು. ಡಿ 614 ಜಿ ಎಂಬುದು ಸಾರ್ಸ್‌-ಕೋವ್‌ -2ರ ರೂಪಾಂತರವಾಗಿದೆ. ಡಿ 614 ಜಿ ನಮ್ಮ ಜೀವಕೋಶಗಳಿಗೆ ಪ್ರವೇಶಿಸಲು ಬಳಸುವ ವೈರಸ್‌ ಸ್ಟ್ರೈಕ್‌ ಅನ್ನು ರಚಿಸುವ ಪ್ರೊಟೀನ್ನಲ್ಲಿದೆ. ಈ ರೂಪಾಂತರವು ಅಮೈನೊ ಆಮ್ಲವನ್ನು 614ನೇ ಸ್ಥಾನದಲ್ಲಿ, ಡಿ (ಆಸ್ಪರ್ಟಿಕ್‌ ಆಮ್ಲ)ದಿಂದ ಜಿ (ಗ್ಲೆçಸಿನ್‌) ಗೆ ಬದಲಾಯಿಸುತ್ತದೆ.

English summary
A mutation of the novel coronavirus increasingly common throughout Europe and recently detected in Malaysia may be more infectious but appears less deadly, according to a prominent infectious diseases doctor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X