Lovers: ಈ ಊರಲ್ಲಿದೆ ‘ಲವ್ ಮಾರ್ಕೆಟ್’: ವರ್ಷಕ್ಕೊಮ್ಮೆ ಮಾಜಿ ಪ್ರೇಮಿಗಳು ಭೇಟಿಯಾಗುವ ವಿಶೇಷ ಸ್ಥಳ!

ಪ್ರೀತಿ ಮಾಡವವರೆಲ್ಲಾ ಒಂದಾಗುತ್ತಾರೆ, ಮದುವೆಯಾಗುತ್ತಾರೆ ಎಂದಲ್ಲ. ಪ್ರೀತಿ ಎಷ್ಟು ಸಾಮಾನ್ಯವೋ, ಬ್ರೇಕಪ್‌ ಕೂಡಾ ಅಷ್ಟೇ ಕಾಮನ್ ಆಗಿ ಬಿಟ್ಟಿದೆ. ಬ್ರೇಕ್‌ ಅಪ್‌ ಆದ ಜೋಡಿಗಳು ಮತ್ತೆ ಪರಸ್ಪರರ ಮುಖವನ್ನೂ ನೋಡಲು ಕೂಡಾ ಇಷ್ಟಪಡುವುದಿಲ್ಲ. ಕೆಲವೊಂದು ಜೋಡಿಗಳು ಹಾಯ್‌ ಹಲೋ ಅನ್ನುವಷ್ಟರ ಮಟ್ಟಿಗೆ ಸಂಬಂಧ ಉಳಿಸಿಕೊಳ್ಳಬಹುದು. ಆದರೆ ಇಲ್ಲೊಂದು ಊರಿನಲ್ಲಿ ಬ್ರೇಕಪ್‌ ಆದ ಜೋಡಿಗಳು ವರ್ಷಕ್ಕೊಮ್ಮೆ ಭೇಟಿಯಾಗುತ್ತಾರೆ. ಇವರಿಗಾಗಿಯೇ ಒಂದು ಸಂತೆಯನ್ನೇ ನಡೆಸಲಾಗುತ್ತದೆ.

ಹಳೆಯ ಪ್ರೇಮಿಗಳ ಭೇಟಿ

ಉತ್ತರ ವಿಯೆಟ್ನಾಂನ ಹಾ ಜಿಯಾಂಗ್‌ನಲ್ಲಿ ವರ್ಷಕ್ಕೊಮ್ಮೆ ಲವ್‌ ಮಾರ್ಕೆಟ್‌ ನಡೆಯುತ್ತದೆ. ಇದಕ್ಕೆ Khau Vai Love Market ಎಂದೇ ಕರೆಯಾಗುತ್ತದೆ. ಪ್ರತಿ ವರ್ಷ, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಹಳೆಯ ಪ್ರೇಮಿಗಳು ಭೇಟಿಯಾಗುವ ವಿಶೇಷ ಮಾರ್ಕೆಟ್‌ ನಡೆಯುತ್ತದೆ. 26 ರಿಂದ 28ನೇ ತಾರೀಕಿನವರೆಗೆ ಅಂದರೆ ಮೂರು ದಿನದವರೆಗೆ ಈ ಸಂತೆ ನಡೆಯುತ್ತದೆ. ಇಲ್ಲಿ ನೂರಾರು ಮಾಜಿ ಪ್ರೇಮಿಗಳು ಬರುತ್ತಾರೆ. ಪರಸ್ಪರರು ಗಂಟೆಗಟ್ಟಲೆ ಮಾತನಾಡುತ್ತಾರೆ. ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ಇಲ್ಲಿ ಹಳೆಯ ಅಥವಾ ಮಾಜಿ ಪ್ರೇಮಿ ಅಥವಾ ಪ್ರೇಮಿಕಾಳನ್ನು ಭೇಟಿಯಾಗುವುದು ಅಪರಾಧ ಅಲ್ಲವೇ ಅಲ್ಲ. ಶತಮಾನಗಳಿಂದ ಈ ಮಾರ್ಕೆಟ್‌ ನಡೆಯುತ್ತಾ ಬಂದಿದೆ.

Lovers

ಸಂಪ್ರದಾಯದ ಒಂದು ಭಾಗ

ಇಲ್ಲಿಗೆ ಬರುವವರು ತಮ್ಮ ಮಾಜಿ ಪ್ರೇಮಿಗಳನ್ನು ತಮ್ಮ ವರ್ತಮಾನದ ಸಂಗಾತಿಯ ಒಪ್ಪಿಗೆಯೊಂದಿಗೆಯೇ ನಡೆಯುತ್ತದೆ. ಇಲ್ಲಿ ಮಾಜಿ ಪ್ರೇಮಿಯನ್ನು ಭೇಟಿಯಾಗುವುದು ಅಪರಾಧವಲ್ಲ. ಇಲ್ಲಿ ಪತಿ ಅಥವಾ ಪತ್ನಿ ತಮ್ಮ ಮಾಜಿ ಪ್ರೇಮಿಯನ್ನು ಭೇಟಿಯಾಗುವುದಕ್ಕೆ ಯಾರೂ ತಡೆ ಒಡ್ಡುವ ಹಾಗಿಲ್ಲ. ಇದೊಂದು ಸಂಪ್ರದಾಯದ ಭಾಗವಾಗಿದೆ. ಈ ಮಾರ್ಕೆಟ್‌ನಲ್ಲಿ ಭೇಟಿಯಾಗುವ ಮಾಜಿ ಪ್ರೇಮಿಗಳು ತಮ್ಮ ಹಳೆಯ ನೆನಪುಗಳ ಬಗ್ಗೆ ಹರಟೆ ಹೊಡೆಯುತ್ತಾರೆ. ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ. ನಂತರ ತಮ್ಮ ತಮ್ಮ ಜೀವನಕ್ಕೆ ಮರಳುತ್ತಾರೆ. 2021ರಲ್ಲಿ ಈ ಸಂಪ್ರದಾಯವನ್ನು ರಾಷ್ಟ್ರೀಯ ಸಾಂಸ್ಕೃತಿಕ ಪರಂಪರೆಯಾಗಿ ಗುರುತಿಸಲಾಗಿದೆ.

100 ವರ್ಷಗಳ ಹಿಂದಿನ ಸಂಪ್ರದಾಯ

ಇದು 100 ವರ್ಷಗಳ ಹಿಂದಿನ ಸಂಪ್ರದಾಯವಾಗಿದೆ. ದಂತಕಥೆಯ ಪ್ರಕಾರ, ಒಮ್ಮೆ ಹ್ಮಾಂಗ್ ಹುಡುಗ ಮತ್ತು ಗಿಯೇ ಹುಡುಗಿ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ ಅವರ ಕಮ್ಯುನಿಟಿ ಇವರಿಬ್ಬರ ಸಂಬಂಧವನ್ನು ಮುಂದುವರೆಯುವುದಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ.ಇವರಿಬ್ಬರು ಒಂದಾಗುವುದು ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು.

ಅದಕ್ಕಾಗಿ ಇವರಿಬ್ಬರೂ ತಮ್ಮ ಪ್ರೀತಿಯನ್ನು ತ್ಯಾಗ ಮಾಡುವುದಕ್ಕೆ ಮುಂದಾಗುತ್ತಾರೆ. ಇವರಿಬ್ಬರು ಜೊತೆಯಲ್ಲಿ ಬದುಕು ಕಟ್ಟಿಕೊಳ್ಳುವ ಕನಸನ್ನು ಮುರಿಯುವುದು ಅಷ್ಟು ಸುಲಭವಾಗಿರಲಿಲ್ಲ. ಆದರೆ ಎಲ್ಲರನ್ನೂ ಧಿಕ್ಕರಿಸಿ ಮದುವೆಯಾಗುವುದೂ ಅವರಿಗೆ ಬೇಕಿರಲಿಲ್ಲ. ಹಾಗಾಗಿ ಇವರಿಬ್ಬರೂ ಬೇರೆಯಾಗಲು ತೀರ್ಮಾನಿಸುತ್ತಾರೆ. ಆದರೆ ಅವರು ವರ್ಷಕ್ಕೊಮ್ಮೆ ಖೌ ವಾಯ್‌ನಲ್ಲಿ ಭೇಟಿಯಾಗುವುದಾಗಿ, ತಮ್ಮ ಹಳೆಯ ಸಂಬಂಧಗಳ ಬಗ್ಗೆ ಮಾತನಾಡಿಕೊಳ್ಳುವುದಾಗಿ ನಿರ್ಧಾರ ಮಾಡುತ್ತಾರೆ. ಅವರ ಕಮ್ಯುನಿಟಿ ಕೂಡಾ ಇದಕ್ಕೆ ಒಪ್ಪಿಗೆ ಸೂಚಿಸುತ್ತದೆ.

ನಂತರ ಇದು ಸಂಪ್ರದಾಯವಾಗಿ ನಡೆದುಕೊಂಡು ಬರುತ್ತದೆ. ಈ ವಿಶೇಷ ದಿನದಂದು ಬ್ರೇಕಪ್‌ ಆದ ಜೋಡಿಗಳು ಪರಸ್ಪರ ಭೇಟಿಯಾಗುತ್ತಾರೆ. ಈ ಮೂರು ದಿನಗಳ ಮಾರ್ಕೆಟ್‌ ಇದೀಗ ಅಸಾಮಾನ್ಯ ಪ್ರವಾಸಿ ಆಕರ್ಷಣೆಯಾಗಿದೆ.

ವರ್ಷಕ್ಕೊಮ್ಮೆ ನಡೆಯುವ ಪುನರ್‌ ಮಿಲನ

ಇಂದು, ವರ್ಷಕ್ಕೊಮ್ಮೆ ನಡೆಯುವ ಈ ಪುನರ್ಮಿಲನ ಕಾರ್ಯಕ್ರಮವು ಡೇಟಿಂಗ್ ಮೇಳವಾಗಿ ಮಾರ್ಪಟ್ಟಿದೆ. ಅಲ್ಲಿ ಯುವ ಜೋಡಿಗಳು ತಮ್ಮ ಸಂಭಾವ್ಯ ಸಂಗಾತಿಗಳನ್ನು ಭೇಟಿಯಾಗಲು ಬರುತ್ತಾರೆ. ವಿವಾಹಿತರು ತಮ್ಮ ಮಾಜಿ ಪ್ರೇಮಿಗಳ ಜೊತೆಗಿನ ನೆನಪನ್ನು ಹಸಿರಾಗಿಸಲು ಬರುತ್ತಾರೆ. ಹಾಗಾಗಿ ಇಂದಿಗೆ ಇದು ಪೂರ್ಣ ಪ್ರಮಾಣದ ಸಾಂಸ್ಕೃತಿಕ ಅನುಭವವಾಗಿ ವಿಕಸನಗೊಂಡಿದೆ.

ಈ ಮಾರ್ಕೆಟ್‌ ಮಾರುಕಟ್ಟೆಯು ಮೂರು ದಿನಗಳ ಕಾಲ ನಡೆಯುತ್ತದೆ. ಇದು ಮುಂಬರುವ ಸುಗ್ಗಿಯ ಸಮಾರಂಭ ಮತ್ತು ಉತ್ತಮ ಬೆಳೆಗಳಿಗಾಗಿ ಪ್ರಾರ್ಥನೆಗಳೊಂದಿಗೆ ಪ್ರಾರಂಭವಾಗುತ್ತದೆ.ನಂತರ ಹಾಡು, ನೃತ್ಯಗಳು ನಡೆಯುತ್ತವೆ. ಎರಡನೇ ದಿನವು ಸಾಮೂಹಿಕ ಅಡುಗೆ ಮತ್ತು ಸಂತೋಷವನ್ನು ಹುಡುಕುವ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಕೊನೆಯ ದಿನ ಆಚರಣೆಯ ಮುಕ್ತಾಯದ ಭಾಗವಾಗಿ ಬುದ್ಧನ ಪ್ರತಿಮೆಯನ್ನು ತೊಳೆಯಲು ಸಹಾಯ ಮಾಡಲಾಗುತ್ತದೆ.ಈ ಮಾರುಕಟ್ಟೆ ಈಗ ವಿಯೆಟ್ನಾಮೀಸ್ ಪ್ರವಾಸಿಗರು ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+