Donald Trump: ಇಸ್ರೇಲ್ - ಗಾಜಾ ಸಂಘರ್ಷ ಅಂತ್ಯ: ನಾನು ಯುದ್ಧ ನಿಲ್ಲಿಸುವ ನಿಪುಣ ಎಂದ ಡೊನಾಲ್ಡ್ ಟ್ರಂಪ್!
ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಿಂದಾಗಿ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಒಟ್ಟು 20 ಅಂಶಗಳ ಒಪ್ಪಂದವನ್ನು ಮುಂದಿರಿಸಲಾಗಿದೆ. ಇದೀಗ ಆ 20 ಅಂಶಗಳಲ್ಲಿ ಒಂದು ಮಾತ್ರ ಕಾರ್ಯರೂಪಕ್ಕೆ ಬರುತ್ತಿದೆ. ಈ ಮೂಲಕ ಕಳೆದ ಎರಡು ವರ್ಷಗಳಿಂದಲೂ ನಡೆದಿದ್ದ ಯುದ್ಧ ಮುಕ್ತಾಯವಾಗುತ್ತಿದೆ. ಇಡೀ ವಿಶ್ವವೇ ಈ ಸುದ್ದಿಯಿಂದ ತುಸು ನಿರಾಳವಾಗಿದೆ. ಇದಕ್ಕೆ ಮುಖ್ಯ ಕಾರಣ ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಮೂಡಿದರೆ, ಅದು ಇಡೀ ವಿಶ್ವಕ್ಕೆ ಆರ್ಥಿಕವಾಗಿಯೂ ಸ್ಥಿರತೆ ಹಾಗೂ ಶಾಂತಿಯನ್ನು ತರಲಿದೆ.
ಒತ್ತೆಯಾಳುಗಳ ಬಿಡುಗಡೆ ಹಾಗೂ ಗಾಜಾ ಯುದ್ಧ ಕೊನೆಗೊಂಡಿದೆ. ಇದಕ್ಕೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಕಾರಣ ಎಂದು ಇಸ್ರೇಲ್ ಹೇಳಿದೆ. ಈ ಕ್ರೆಡಿಟ್‌ಗಳ ಹೊರತಾಗಿಯೂ ವಿಶ್ವದಾದ್ಯಂತ ಸಂತೋಷ ಮೂಡಿದೆ. ಆದರೆ, ಇದರ ನಡುವೆ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾನು ಯುದ್ಧ ನಿಲ್ಲಿಸುವ ನಿಪುಣ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷವೂ ಸೇರಿದಂತೆ ವಿಶ್ವದಾದ್ಯಂತ ಒಟ್ಟು 8 ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ ಎಂದು ಡೊನಾಲ್ಡ್ ಟ್ರಂಪ್ ಅವರು ಇದೇ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ. ನಾನು ಯುದ್ಧ ನಿಲ್ಲಿಸುವುದರಲ್ಲಿ ನಿಪುಣನಾಗಿದ್ದೇನೆ. ಇದನ್ನೆಲ್ಲ ನಾನು ನೊಬೆಲ್ ಶಾಂತಿ ಪ್ರಶಸ್ತಿಗೋಸ್ಕರ ಏನು ಮಾಡಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಇಷ್ಟು ದಿನಗಳ ಕಾಲ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಏಳು ಯುದ್ಧಗಳನ್ನು ನಿಲ್ಲಿಸಿರುವುದಾಗಿ ಹೇಳುತ್ತಿದ್ದರು. ಇದೀಗ ಇಸ್ರೇಲ್ ಮತ್ತು ಗಾಜಾ ಸಂಘರ್ಷ ಕೊನೆಗೊಳ್ಳುತ್ತಿದ್ದಂತೆಯೇ ನಾನು ಎಂಟು ಯುದ್ಧಗಳನ್ನು ನಿಲ್ಲಿಸಿದ್ದೇನೆ ಎಂದು ಅವರು ಮತ್ತೊಂದು ಕ್ರೆಡಿಟ್ ತೆಗೆದುಕೊಂಡಿದ್ದಾರೆ. ಇಸ್ರೇಲ್ ಮತ್ತು ಗಾಜಾ ಯುದ್ಧ ಅಂತ್ಯವಾಗಿರುವ ಬಗ್ಗೆ ಮಾತನಾಡಿರುವ ಅವರು, ನಾನು ಕೊನೆಗೊಳಿಸಿರುವ 8ನೇ ಯುದ್ಧ ಇದಾಗಿದೆ. ಪಾಕಿಸ್ತಾನ ಹಾಗೂ ಆಫ್ಗಾನಿಸ್ತಾನದ ನಡುವೆ ಸಂಘರ್ಷ ನಡೆಯುತ್ತಿದೆ ಎನ್ನುವ ಮಾಹಿತಿ ಇದೆ. ನಾನು ಹಿಂತಿರುಗುವವರೆಗೆ ಕಾಯಬೇಕು ಎಂದು ಹೇಳಿದ್ದೇನೆ, ಯಾಕೆಂದರೆ ನಾನು ಯುದ್ಧಗಳನ್ನು ನಿಲ್ಲಿಸುವ ನಿಪುಣ ಎಂದು ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ನಾನು ಲಕ್ಷಾಂತರ ಜನರ ಜೀವವನ್ನು ಉಳಿಸಿದ್ದೇನೆ. ಹಲವು ದಶಕಗಳಿಂದ ನಡೆಯುತ್ತಿದ್ದ ಯುದ್ಧವನ್ನು ನಾನು ಕೇವಲ ಒಂದೇ ದಿನದಲ್ಲೂ ನಿಲ್ಲಿಸಿದ್ದೇನೆ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್ ಹಾಗೂ ಗಾಜಾ ಕದನ ವಿರಾಮದ ಸಂದರ್ಭದಲ್ಲಿ ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಹೇಳಿಕೆ ಮತ್ತೆ ಭಾರತದಲ್ಲಿ ಟ್ರೋಲ್‌ಗೆ ಕಾರಣವಾಗಿದೆ.












Click it and Unblock the Notifications