ದುಬೈನಲ್ಲಿ ವಿಮಾನ ದುರಂತ, ಎಲ್ಲ ಪ್ರಯಾಣಿಕರು ಪಾರು

Posted By:
Subscribe to Oneindia Kannada

ದುಬೈ, ಆಗಸ್ಟ್ 03 : ತಿರುವನಂತಪುರದಿಂದ ಬಂದಿಳಿದ ಎಮಿರೇಟ್ಸ್ ಸಂಸ್ಥೆಗೆ ಸೇರಿದ ವಿಮಾನ (EK 521) ದುಬೈ ಏರ್ಪೋರ್ಟ್ ನಲ್ಲಿ ಬುಧವಾರ ಅಪಘಾತಕ್ಕೀಡಾದರೂ, ಎಲ್ಲ 282 ಪ್ರಯಾಣಿಕರು ಮತ್ತು 18 ಸಿಬ್ಬಂದಿಗಳು ಸುರಕ್ಷಿತವಾಗಿದ್ದಾರೆ.

ಬೋಯಿಂಗ್ 777 ವಿಮಾನ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅದರ ಹಿಂಭಾಗ ನೆಲಕ್ಕೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಬಲಬದಿಯ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ, ಬೆಂಕಿ ಆವರಿಸಿಕೊಳ್ಳುವ ಮೊದಲೇ ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಯಿತು. [ವಿಡಿಯೋ: ದುಬೈನಲ್ಲಿ ಎಮಿರೈಟ್ಸ್ ವಿಮಾನಕ್ಕೆ ಬೆಂಕಿ]

ಈ ಘಟನೆಗೆ ಸಾಕ್ಷಿಯಾಗಿರುವ ಮತ್ತೊಬ್ಬ ಪೈಲಟ್, ಸ್ಥಳೀಯ ಕಾಲಮಾನ 12.45ಕ್ಕೆ ವಿಮಾನ ವೇಗವಾಗಿ ರನ್ ವೇಯಲ್ಲಿ ಇಳಿಯುತ್ತಿದ್ದಂತೆ ಅದರ ಹಿಂಭಾಗ ನೆಲಕ್ಕೆ ಅಪ್ಪಳಿಸಿತು. ತಕ್ಷಣ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಆವರಿಸಿಕೊಂಡಿತು. ಸ್ವಲ್ಪ ದೂರ ತಳ್ಳಿಕೊಂಡು ಹೋದ ವಿಮಾನ ತುಸುದೂರದಲ್ಲಿ ನಿಂತಿತು ಎಂದು ಹೇಳಿದ್ದಾರೆ. [ಬಜ್ಪೆ ವಿಮಾನ ದುರಂತಕ್ಕೆ, ಆ ಕಹಿ ನೆನಪಿಗೆ 6 ವರ್ಷ]

Emirates flight crash lands in Dubai, passengers safe

ಈ ಘಟನೆಯಿಂದಾಗಿ ದುಬೈನಿಂದ ಹೊರಡಲಿರುವ ವಿಮಾನಗಳು ತಡವಾಗಿ ಹೊರಡುತ್ತಿವೆ ಮತ್ತು ದುಬೈಗೆ ಬರಬೇಕಿದ್ದ ವಿಮಾನಗಳನ್ನು ಶಾರ್ಜಾದಲ್ಲಿ ಇಳಿಸಲಾಗುತ್ತಿದೆ. ಈ ವಿಮಾನದಲ್ಲಿ 226 ಪ್ರಯಾಣಿಕರು ಭಾರತದವರಾಗಿದ್ದರು.


6 ವರ್ಷಗಳ ಹಿಂದೆ ಮೇ 22ರಂದು ದುಬೈನಿಂದ ಮಂಗಳೂರಿಗೆ ಬಂದಿಳಿದಿದ್ದ ವಿಮಾನ ಅಪಘಾತಕ್ಕೀಡಾಗಿತ್ತು. ಅತಿವೇಗವಾಗಿ ಇಳಿದಿದ್ದ ವಿಮಾನ ರನ್ ವೇ ದಾಟಿಕೊಂಡು ಹತ್ತಿರದ ಗುಡ್ಡಕ್ಕೆ ಅಪ್ಪಳಿಸಿತ್ತು. ಆ ದುರಂತದಲ್ಲಿ 158 ಜನರು ಸಾವಿಗೀಡಾಗಿದ್ದರು. ಈಗ ದುಬೈನಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.

ಸಂಬಂಧಿಕರು ಕೆಳಗಿನ ಸಹಾಯವಾಣಿಯನ್ನು ಸಂಪರ್ಕಿಸಿ ಬಂಧುಗಳ ಸುರಕ್ಷಿತತೆಯ ಬಗ್ಗೆ ಖಚಿತಗೊಳಿಸಿಕೊಳ್ಳಬಹುದಾಗಿದೆ.

ಯುಎಇ - 8002111
ಯುಕೆ - 00442034508853
ಯುಎಸ್ - 0018113502081

ಅಥವಾPR@emirates.com ಮೂಲಕ ಸಂಪರ್ಕಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
An Emirates airline flight crash lands in Dubai, but all the 275 passengers are safe. The plane coming from Tiruvanantapuram hit the tail first while landing. Right wing caught fire, but passengers were evacuated immediately. Emirates airline has confirmed the news.
Please Wait while comments are loading...