ಭಾರತೀಯರ ಹೃದಯ ಗೆದ್ದ ಎಲಾನ್ ಮಸ್ಕ್, ಜಗತ್ತಿನ ಶ್ರೀಮಂತ ಉದ್ಯಮಿ ಭಾರತದ ಬಗ್ಗೆ ಹೇಳಿದ್ದೇನು?
ಅಮೆರಿಕ ಅಭಿವೃದ್ಧಿಗೆ ಭಾರತೀಯರ ಶ್ರಮ ಅತಿಹೆಚ್ಚಾಗಿ ಇದ್ದು, ಭಾರತೀಯರ ಬೆಂಬಲವನ್ನು ಪಡೆದೇ ಅಮೆರಿಕ ಈ ಹಂತಕ್ಕೆ ಬೆಳೆದು ನಿಂತಿದೆ. ಆದರೂ ಎಚ್1ಬಿ ವೀಸಾ ಬಗ್ಗೆ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದ್ದು, ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರ ಆಡಳಿತ ವೀಸಾ ಬೆಲೆ ಏರಿಕೆ ಸೇರಿದಂತೆ ಇತ್ತೀಚೆಗೆ ಕೈಗೊಂಡ ಹಲವು ನಿರ್ಧಾರಗಳು ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದೆ. ಈ ಸಮಯದಲ್ಲೇ, ಉದ್ಯಮಿ ಎಲಾನ್ ಮಸ್ಕ್ ಅವರು ಭಾರತೀಯರು ಹೇಗೆ ಅಮೆರಿಕದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದಾರೆ? ಎಂಬುದನ್ನ ವಿವರಿಸಿರುವುದು ಭಾರತೀಯರ ಹೃದಯ ಗೆದ್ದಿದೆ.
ಹೌದು ಅಮೆರಿಕ ತಾನು ಪಡೆದ ಸಹಾಯ ತಾನೇ ಮರೆಯುವ ರೀತಿ ವರ್ತಿಸುತ್ತದೆ ಎಂಬ ಭಾರಿ ಗಂಭೀರ ಆರೋಪ ಇದೆ. ಅದರಲ್ಲೂ ಯಾವ ದೇಶದಿಂದ ಅಮೆರಿಕ ಸಹಾಯ ಪಡೆದಿರುತ್ತದೋ ಮುಂದೆ ಅದೇ ದೇಶವನ್ನು ಮರೆತು, ಅವರ ಜೊತೆಯಲ್ಲೇ ಕಿರಿಕ್ ಮಾಡೋದು ಕೂಡ ಅಮೆರಿಕ ಎಂಬ ದೈತ್ಯ ದೇಶಕ್ಕೆ ಮಾಮೂಲಿ ಆಗಿ ಹೋಗಿದೆ. ಹೀಗಿದ್ದಾಗ ಭಾರತೀಯರು & ಭಾರತದ ಜೊತೆ ಕೂಡ ಅಮೆರಿಕ ಇದೇ ರೀತಿಯಾಗಿ ಕಿರಿಕ್ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಅದ್ರಲ್ಲೂ ಡೊನಾಲ್ಡ್ ಟ್ರಂಪ್ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಕೈಮೀರುತ್ತಿರುವ ಬಗ್ಗೆ ಕೂಡ ಆತಂಕ ಸೃಷ್ಟಿಯಾಗಿತ್ತು. ಆದರೆ ಈಗ ಉದ್ಯಮಿ ಎಲಾನ್ ಮಸ್ಕ್ ಅವರು ಭಾರತೀಯರ ಕೊಡುಗೆ ಬಗ್ಗೆ ಹಾಡಿ ಹೊಗಳಿದ್ದಾರೆ.

ಭಾರತೀಯರನ್ನು ಹೊಗಳಿದ ಮಸ್ಕ್!
ಹೌದು, ಒಂದು ಕಾಲದ ಡೊನಾಲ್ಡ್ ಟ್ರಂಪ್ ಅವರ ಆಪ್ತ ಹಾಗೂ ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಅಮೆರಿಕದ ಅಭಿವೃದ್ಧಿಯಲ್ಲಿ ಭಾರತೀಯರ ಪಾತ್ರದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಭಾರತ ಮೂಲದ ಪ್ರತಿಭಾವಂತರು ಅಮೆರಿಕದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಕುರಿತು ಅವರು ಹೆಮ್ಮೆಯನ್ನ ಕೂಡ ಇದೀಗ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಒಂದು ಕಡೆ ಡೊನಾಲ್ಡ್ ಟ್ರಂಪ್ ಆಡಳಿತ ಭಾರತೀಯ ಉದ್ಯೋಗಿಗಳನ್ನ ಟಾರ್ಗೆಟ್ ಮಾಡುತ್ತಿದೆ ಎಂಬ ಆರೋಪಗಳ ನಡುವೆಯೇ ಮಸ್ಕ್ ಅವರ ಈ ಮಾತುಗಳು ಬೆಂಬಲ ನೀಡಿದಂತೆ ಇದೆ.
ಅಮೆರಿಕ ಅಧ್ಯಕ್ಷರು ಅರ್ಥ ಮಾಡಿಕೊಳ್ಳುತ್ತಾರಾ?
ಒಟ್ನಲ್ಲಿ ಭಾರತ & ಭಾರತೀಯರು ಇಲ್ಲದೆ ಅಮೆರಿಕದಲ್ಲಿ ಅಲ್ಲೋಲ ಕಲ್ಲೋಲ ಗ್ಯಾರಂಟಿ ಎನ್ನಬಹುದು. ಯಾಕಂದ್ರೆ ಅಮೆರಿಕದಲ್ಲಿ ದೊಡ್ಡ ದೊಡ್ಡ ಹುದ್ದೆಗಳು ಸೇರಿದಂತೆ ಅತ್ಯಂತ ಸೂಕ್ಷ್ಮ ಕೆಲಸಗಳನ್ನು ನಿರ್ವಹಣೆ ಮಾಡುತ್ತಿರುವುದು ನಮ್ಮ ಭಾರತೀಯರು. ಹೀಗಾಗಿ ಅಮೆರಿಕ ಅಧ್ಯಕ್ಷರು ಇದನ್ನ ಅರ್ಥ ಮಾಡಿಕೊಳ್ಳಲಿ ಅಂತಾ ಸಲಹೆ ನೀಡುತ್ತಿದ್ದಾರೆ ನೆಟ್ಟಿಗರು.












Click it and Unblock the Notifications