ಎಚ್ಚರ... ರೋಗಿ ಸತ್ತರೂ ಎಬೋಲಾ ವೈರಸ್ ಸಾಯಲ್ಲ
ವಾಷಿಂಗ್ಟನ್, ಫೆ. 14: ಇಂದು ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ರೋಗ ಎಬೋಲಾ. ವಿಜ್ಞಾನ ಎಷ್ಟೇ ಮುಂದುವರಿದರೂ ಎಬೋಲಾ ವೈರಸ್ ನಿಯಂತ್ರಿಸುವ ಬಗೆ ಅರಿಯಲು ವಿಜ್ಞಾನಿಗಳಿಗೆ ಇಂದಿಗೂ ಸಾಧ್ಯವಾಗಿಲ್ಲ. ಎಬೋಲಾ ರೋಗಿ ಎಂದರೆ ವೈದ್ಯರೂ ದೂರ ಓಡುತ್ತಾರೆ. ಈಗ ಬಯಲಾಗಿರುವ ವಿಷಯ ಮತ್ತೂ ಆತಂಕ ಮೂಡಿಸಿದೆ.
ಏನೆಂದರೆ, ಎಬೋಲಾ ಪೀಡಿತ ವ್ಯಕ್ತಿ ಅಥವಾ ಪ್ರಾಣಿ ಮೃತಪಟ್ಟು ಒಂದು ವಾರಗಳವರೆಗೂ ದೇಹದಲ್ಲಿ ಎಬೋಲಾ ರೋಗಾಣು ಜೀವಂತವಾಗಿಯೇ ಇರುತ್ತದೆ. ಈ ದೇಹದ ಹತ್ತಿರ ಹೋದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ. [ಎಬೋಲಾಕ್ಕೆ ಆಯುರ್ವೇದ ಚಿಕಿತ್ಸೆ]

ಅಮೆರಿಕದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ (ಎನ್ಐಎಚ್)ನ ವಿಜ್ಞಾನಿಗಳು ನಡೆಸಿದ ಅಧ್ಯಯನದಲ್ಲಿ ಈ ಆತಂಕಕಾರಿ ವಿಷಯ ಬಯಲಾಗಿದೆ. ತಮ್ಮ ಅಧ್ಯಯನಕ್ಕಾಗಿ ವಿಜ್ಞಾನಿಗಳು ಎಬೋಲಾ ಪೀಡಿತ ಮಂಗವೊಂದನ್ನು ಬಳಸಿಕೊಂಡಿದ್ದರು. ಈ ಮಂಗ ಸತ್ತು ಏಳು ದಿನಗಳಾದರೂ ಎಬೋಲಾ ವೈರಸ್ ದೇಹದಲ್ಲಿ ಜೀವಂತವಾಗಿಯೇ ಇತ್ತು. ಜೊತೆಗೆ ಯಾವುದೇ ಪರಿಣಾಮ ಬೀರದ ವೈರಸ್ ಆರ್‌ಎನ್ಎ ಕೂಡ 70 ದಿನಗಳವರೆಗೆ ಜೀವಂತವಾಗಿರುವುದು ಕಂಡುಬಂದಿತು. [ದೆಹಲಿಯಲ್ಲಿ ಮೊದಲ ಎಬೋಲಾ ಪ್ರಕರಣ]
ವಿಜ್ಞಾನಿಗಳ ಪ್ರಕಾರ ಗೋರಿಲ್ಲಾ ಹಾಗೂ ಮಂಗದಂತಹ ಸಸ್ತನಿಗಳಲ್ಲಿ ಎಬೋಲಾ ಸತ್ತ ಏಳು ದಿನಗಳವರೆಗೂ ಜೀವಂತವಾಗಿರುತ್ತದೆ. ಆದರೆ, ಮಾನವರ ಕುರಿತು ಯಾವುದೇ ದೃಢೀಕರಣ ನೀಡಿಲ್ಲ. ಅಮೆರಿಕದ Emerging Infectious Diseases ಎಂಬ ಜರ್ನಲ್‌ನಲ್ಲಿ ಈ ಲೇಖನ ಪ್ರಕಟವಾಗಿದೆ. [ಎಬೋಲಾ ಹತ್ತಿಕ್ಕಲಾಗದೆ ಕೈಚೆಲ್ಲಿದ ವಿಶ್ವಸಂಸ್ಥೆ]
ಜಗತ್ತಿನಲ್ಲಿ ಇಲ್ಲಿಯವರೆಗೆ 10 ಸಾವಿರಕ್ಕಿಂತ ಹೆಚ್ಚು ಜನರಿಗೆ ಎಬೋಲಾ ಸೋಂಕು ತಾಗಿದೆ. 5 ಸಾವಿರಕ್ಕಿಂತ ಹೆಚ್ಚು ಜನರು ಚಿಕಿತ್ಸೆ ಫಲಿಸದೆ ಬಲಿಯಾಗಿದ್ದಾರೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ












Click it and Unblock the Notifications