ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟರ್ಕಿ ಭೂಕಂಪ, ಸುನಾಮಿ: ಮೃತರ ಸಂಖ್ಯೆ 19ಕ್ಕೆ ಏರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 31: ಟರ್ಕಿಯ ಕರಾವಳಿ ಮತ್ತು ಗ್ರೀಕ್‌ನ ಸಾಮೋಸ್ ದ್ವೀಪಗಳ ನಡುವಿನ ಏಜಿಯನ್ ಸಮುದ್ರದ ನಡುವೆ ಶುಕ್ರವಾರ ಸಂಭವಿಸಿದ ಭಾರಿ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ ಕನಿಷ್ಠ 19ಕ್ಕೆ ಏರಿಕೆಯಾಗಿದೆ. ಕಟ್ಟಡಗಳ ಕುಸಿತ, ಪ್ರವಾಹಗಳಿಂದ 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ರಿಕ್ಟರ್ ಮಾಪನದಲ್ಲಿ 7.0ರಷ್ಟು ಭಾರಿ ತೀವ್ರತೆಯ ಭೂಕಂಪ ಸಂಭವಿಸಿದೆ. ಇಜ್ಮಿರ್‌ನ ದಕ್ಷಿಣ ಭಾಗದಲ್ಲಿರುವ ಸೆಫೆರಿಹಿಸರ್ ಜಿಲ್ಲೆಯಲ್ಲಿ ಸಣ್ಣ ಪ್ರಮಾಣದ ಸುನಾಮಿ ಅನುಭವ ಆಗಿದೆ. ಏಕಾಏಕಿ ಏರಿಕೆಯಾದ ಸಮುದ್ರದ ನೀರಿನಲ್ಲಿ ಅನೇಕ ಮನೆಗಳು ಕಟ್ಟಡಗಳು ಜಲಾವೃತವಾಗಿವೆ. ದ್ವೀಪದಲ್ಲಿನ ಅನೇಕ ವಸ್ತುಗಳನ್ನು ಸಮುದ್ರ ತನ್ನೊಂದಿಗೆ ಕೊಂಡೊಯ್ದಿದೆ.

ಟರ್ಕಿ, ಗ್ರೀಸ್ ನಡುಗಿಸಿದ ಭಾರಿ ಭೂಕಂಪ, ಮಿನಿ ಸುನಾಮಿ ಅಲರ್ಟ್ ಟರ್ಕಿ, ಗ್ರೀಸ್ ನಡುಗಿಸಿದ ಭಾರಿ ಭೂಕಂಪ, ಮಿನಿ ಸುನಾಮಿ ಅಲರ್ಟ್

ಇಜ್ಮಿರ್‌ನಲ್ಲಿ ಅನೇಕ ಮನೆಗಳು ಕುಸಿದಿದ್ದು, ಅವಶೇಷಗಳ ಅಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಯುತ್ತಿದೆ. ಭೂಕಂಪವಾಗುತ್ತಿದ್ದಂತೆಯೇ ಸುನಾಮಿ ಸಂಭವಿಸುವ ಭೀತಿಯಿಂದ ಜನರು ಬೀದಿ ಬೀದಿಗಳಲ್ಲಿ ದಿಕ್ಕಾಪಾಲಾಗಿ ಓಡಿದ್ದಾರೆ. ಟರ್ಕಿಶ್ ಮೆಡಿಕಲ್ ಅಸೋಸಿಯೇಷನ್ ಇಜ್ಮಿರ್ ಘಟಕದ ಪ್ರಧಾನ ಕಾರ್ಯದರ್ಶಿಯ ಪತ್ನಿ ಮತ್ತು ಇಬ್ಬರು ಮಕ್ಕಳು ಸಹ ಬಲಿಯಾಗಿದ್ದಾರೆ.

 Earthquake Hits Turkey, Greek Islands Kills At Lleast 19, Over 700 Injured

ಭೂಕಂಪನದ ಬೆನ್ನಲ್ಲೇ ಅನೇಕ ಭಾಗಗಳಲ್ಲಿ ಸಮುದ್ರ ರೌದ್ರಾವತಾರ ತಾಳಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನಗರಗಳ ಒಳಗೆ ನೀರು ನುಗ್ಗಿದ ಪರಿಣಾಮ ವಸ್ತುಗಳು ಸಮುದ್ರಪಾಲಾಗಿವೆ. ಮರದಿಂದ ಮಾಡಿರುವ ಮನೆಗಳು ಕುಸಿದುಬಿದ್ದಿವೆ. ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗುವ ಅಪಾಯವಿದೆ ಎಂದು ಎಚ್ಚರಿಕೆ ನೀಡಲಾಗಿದೆ.

ಜಗತ್ತಿನ ಅತ್ಯಂತ ಭೂಕಂಪಪೀಡಿತ ದೇಶಗಳಲ್ಲಿ ಟರ್ಕಿ ಕೂಡ ಒಂದು. 1999ರಲ್ಲಿ 7.6 ತೀವ್ರತೆಯ ಭೂಕಂಪನ ಉಂಟಾಗಿ ಇಜ್ಮಿತ್ ಎಂಬ ಸಣ್ಣ ನಗರದಲ್ಲಿ 17,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. 2011ರಲ್ಲಿ ಪೂರ್ವ ನಗರ ವ್ಯಾನ್‌ನಲ್ಲಿ ಸಂಭವಿಸಿದ್ದ ಭೂಕಂಪನದಲ್ಲಿ 500ಕ್ಕೂ ಹೆಚ್ಚು ಮಂದಿ ಜೀವ ಕಳೆದುಕೊಂಡಿದ್ದರು.

English summary
At least 19 killed and more than 700 injured as powerful earthquake with 7.0 magnitude hits Turkey and Greek island of Samos.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X